More

    ಕನ್ನಡ ಫಿಲಂ ಚೇಂಬರ್ ಸಂಘದಡಿ ಕಲಾವಿದರ ನೋಂದಣಿ ಆರಂಭ

    ದಾವಣಗೆರೆ: ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಕಳೆದ ಡಿಸೆಂಬರ್‌ನಲ್ಲಿ ಕನ್ನಡ ಫಿಲಂ ಚೇಂಬರ್ ಸ್ಥಾಪನೆಯಾಗಿದ್ದು ನಿರ್ಮಾಪಕರು, ಸಿನಿಮಾ ಸೇರಿ ಕಿರುತೆರೆ ಕಲಾವಿದರು, ಡಿಜಿಟಲ್ ಮಾಧ್ಯಮದವರ ನೋಂದಣಿ ಮಾಡಲಾಗುತ್ತಿದೆ ಎಂದು ಚೇಂಬರ್ ಅಧ್ಯಕ್ಷ ಎಂ.ಎಸ್. ರವೀಂದ್ರ ತಿಳಿಸಿದರು.
    ನಗರದಲ್ಲಿ ಶುಕ್ರವಾರ, ಸಂಘದ ಭಿತ್ತಿಪತ್ರ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ಪ್ರೊಡಕ್ಷನ್ ತಂಡ, ಕ್ಯಾಮರಾಮೆನ್, ಸಂಗೀತ ಕಲಾವಿದರು, ಲೈಟ್ ಬಾಯ್ ಹೀಗೆ ಅನೇಕ ವಿಧದವರೂ ಪ್ರತ್ಯೇಕ ಶುಲ್ಕ ನೀಡಿ ಸಂಘದಲ್ಲಿ ನೋಂದಣಿ ಆಗಬಹುದು ಎಂದು ತಿಳಿಸಿದರು.
    ಈಗಾಗಲೇ 19 ಜನ ನಿರ್ಮಾಪಕರು, 384 ಜನ ಕಲಾವಿದರು, ತಂತ್ರಜ್ಞರು ಸೇರಿದಂತೆ  ಸಿನಿಮಾದಲ್ಲಿ ಕೆಲಸ ಮಾಡುವ ಹಲವು ವಿಭಾಗದವರು ನೋಂದಣಿಯಾಗಿದ್ದಾರೆ. ಈಗಿರುವ ಚಲನಚಿತ್ರ ಮಂಡಳಿಯಲ್ಲಿ ನಿರ್ಮಾಪಕ, ನಿರ್ದೇಶಕ ಹಾಗೂ ಪ್ರದರ್ಶಕರಿಗೆ ಮಾತ್ರ  ಸದಸ್ಯತ್ವ ಇದೆ. ಆದರೆ ಎಲ್ಲಾ ವಿಭಾಗದ ಕೆಲಸಗಾರರು ಇದ್ದರೆ ಮಾತ್ರ ಸಿನಿಮಾ ಆಗಲಿದೆ, ಅವರಿಗೆ ಅವಕಾಶ ಕಲ್ಪಿಸುವುದು ನಮ್ಮ ಚೇಂಬರ್ ಉದ್ದೇಶವಾಗಿದೆ ಎಂದರು.
    ನೋಂದಣಿ ಮಾಡಿದ ಸದಸ್ಯರಿಗೆ ಬರುವ ದಿನಗಳಲ್ಲಿ ಜೀವವಿಮೆ, ಆಹಾರ ಕಿಟ್ ಇನ್ನಿತರೆ ನೆರವು ನೀಡುವ ಉದ್ದೇಶವಿದ್ದು ಅದನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ಸದಸ್ಯರಾದವರು ಕನ್ನಡ ಫಿಲಂ ಚೇಂಬರ್ ಚುನಾವಣೆಗೆ ಸ್ಪರ್ಧಿಸಬಹುದು. ಮತದಾನದ ಹಕ್ಕು ಸಿಗಲಿದೆ. ಚಿತ್ರಗಳ ಶೀರ್ಷಿಕೆಗೆ ಅನುಮೋದನೆ ಹಾಗೂ ನವೀಕರಣ ಮಾಡಿಕೊಡಲಾಗುವುದು ಎಂದರು.
    ಸುದ್ದಿಗೋಷ್ಠಿಯಲ್ಲಿ ಚೇಂಬರ್‌ನ ಪದಾಧಿಕಾರಿಗಳಾದ ನರಸಿಂಹಯ್ಯ, ಅಂಜಿನಪ್ಪ, ರುದ್ರಮುನಿ, ಜಗನ್ನಾಥ್, ಚಿರತೆ ನಾಗರಾಜ್ ಇದ್ದರು.

    See also  ನಾಲ್ವಡಿ ಕೃಷ್ಣರಾಜರದು ಸುವರ್ಣ ಯುಗ: ಪ್ರೊ.ವೈ.ಎಂ.ವಿಠ್ಠಲರಾವ್ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts