More

    ಕೋಟ್ಯಂತರ ರೂ. ಆಸ್ತಿಯನ್ನು ಆಟೋಚಾಲಕನಿಗೆ ಬರೆದ ವೃದ್ಧೆ- ನಿಸ್ವಾರ್ಥ ಸೇವೆಗೆ ಸಂದ ಫಲವಿದು…

    ಕಟಕ್: ವೃದ್ಧೆಯೊಬ್ಬರು ತಮ್ಮ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಆಟೋ ಚಾಲಕನಿಗೆ ಬರೆದುಕೊಟ್ಟಿರುವ ಘಟನೆ ಒಡಿಶಾದ ಕಟಕ್‌ನ ಸುತಾಹತ್‌ನಲ್ಲಿ ನಡೆದಿದೆ.

    ತನ್ನವರು ಯಾರೂ ಇಲ್ಲದಾಗ 25 ವರ್ಷ ಸೇವೆ ಸಲ್ಲಿಸಿದ್ದ ಆಟೋ ಚಾಲಕನ ಋಣವನ್ನು ತೀರಿಸಲು 63 ವರ್ಷದ ಮಿನಾತಿ ಪಟ್ನಾಯಕ್ ಈ ಕೆಲಸ ಮಾಡಿದ್ದಾರೆ. ತಮ್ಮ ಮೂರು ಅಂತಸ್ತಿನ ಮನೆ, ಚಿನ್ನಾಭರಣ ಸೇರಿದಂತೆ ಎಲ್ಲ ಆಸ್ತಿಯನ್ನು ಚಾಲಕ ಬುಧಾ ಸಮಲ್‌ಗೆ ಕೊಟ್ಟಿದ್ದಾರೆ.

    ಆಗಿದ್ದೇನು?
    ಮಿನಾತಿ ಅವರ ಪತಿ ಕಳೆದ ವರ್ಷ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಈ ಆಘಾತದಿಂದ ಹೊರಬರುವ ಮೊದಲೇ ಒಬ್ಬ ಪುತ್ರಿ ಕೋಮಲ್‌ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಈ ಸಮಯದಲ್ಲಿ ಹಾಸಿಗೆ ಹಿಡಿದ ಮಿನಾತಿಯನ್ನು ನೋಡಿಕೊಳ್ಳಲು ಯಾರೂ ಬರಲಿಲ್ಲ. ಸಂಬಂಧಿಕರಾರೂ ಇತ್ತ ಸುಳಿಯಲಿಲ್ಲ. ಆ ಸಮಯದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಟೋ ಚಾಲಕ ನೆರವಾಗಿದ್ದ. ಆತನಿಗೆ ಮಿನಾತಿ ಅವರ ಸಂಕಷ್ಟ ನೋಡಲು ಆಗದೇ ಅವರಿಗೆ ನೆರವಾಗುತ್ತಿತ್ತು. ಆರಂಭದಲ್ಲಿ ಅವರ ಪತಿ ತೀರಿಕೊಂಡಾಗ ಅವರ ಮಗಳನ್ನೂ ಕಾಲೇಜಿಗೆ ಕರೆದುಕೊಂಡು ಹೋಗಿ ಬರುತ್ತಿದ್ದ.

    ಯಾವುದೇ ಫಲಾಪೇಕ್ಷೆ ಇಲ್ಲದೆಯೇ ಇಷ್ಟು ಸುದೀರ್ಘ ಅವಧಿಯವರೆಗೆ ತಮ್ಮನ್ನು ನೋಡಿಕೊಂಡ ಈ ಆಟೋ ಚಾಲಕನ ಪ್ರಾಮಾಣಿಕತನಕ್ಕೆ ಮೆಚ್ಚಿದ ಮಿನಾತಿ ಅವರಿಗೆ ಜೀವನದಲ್ಲಿ ಇನ್ನೇನೂ ಬೇಡ ಅನ್ನಿಸಿಬಿಟ್ಟಿದೆ. ಕಷ್ಟಕಾಲದಲ್ಲಿ ತನ್ನವರು ಯಾರೂ ಬರದಾಗ ಯಾವುದೋ ಮೂರನೆಯ ವ್ಯಕ್ತಿ ಬಂದು ಈ ಪರಿಯಲ್ಲಿ ನಿಸ್ವಾರ್ಥ ಸೇವೆ ಮಾಡಿದ್ದು ಅವರ ಮನಸ್ಸನ್ನು ಕರಗಿಸಿ ಎಲ್ಲಾ ಆಸ್ತಿಯನ್ನು ಬರೆದುಕೊಟಿದ್ದಾರೆ.

    ಎಲ್ಲವನ್ನೂ ಕಾನೂನುಬದ್ಧವಾಗಿ ನೆರವೇರಿಸಿದ್ದೇನೆ. ನಾನು ಬುಧಾಗೆ ಯಾವುದೇ ಉಪಕಾರ ಮಾಡಲಿಲ್ಲ. ಆದರೆ ಅವರು ಅದಕ್ಕೆ ಅರ್ಹರು ಎಂದಿದ್ದಾರೆ ಮಿನಾತಿ.

    ‘ನಿಜವಾದ ಹೋರಾಟಗಾರರ ಕೊಂದ ಬ್ರಿಟಿಷರನ್ನು ಬಿಟ್ಟದ್ದೇಕೆ? ಚರ್ಚಿಲ್‌ನನ್ನು ಹೀರೋ ಮಾಡಿದ್ದೇಕೆ? ನೆಹರೂ ಪತ್ರ ಓದಿದ್ದೀರಾ? ತಪ್ಪು ನನ್ನದಾ?’

    ಹುಚ್ಚನ ಸಾವಿಗೆ ಹೂವಿನಹಡಗಲಿಯಲ್ಲಿ ಶೋಕದ ಛಾಯೆ! ಈತ ಎಲ್ಲರಂಥಲ್ಲ… ವಿಐಪಿಗಳಂತೆ ಅಂತ್ಯಸಂಸ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts