More

    ವಿದೇಶದ ಎಂಬಿಬಿಎಸ್​ಗೆ ಭಾರತದಲ್ಲಿ ಉದ್ಯೋಗವೂ ಸುಲಭವಲ್ಲ, ಇಲ್ಲಿ ಪಾಸಾಗೋದು ಕಷ್ಟ- ಇಲ್ಲಿದೆ ನೋಡಿ ಡಿಟೇಲ್ಸ್​…

    ನವದೆಹಲಿ: ಯೂಕ್ರೇನ್​ನಲ್ಲಿ ಯುದ್ಧ ಶುರುವಾದ ದಿನದಿಂದಲೂ ಬರುತ್ತಿರುವ ಸುದ್ದಿ ಎಂದರೆ ಅಲ್ಲಿ ಅಷ್ಟು ಭಾರತೀಯರು, ಇಷ್ಟು ಕನ್ನಡಿಗ ವಿದ್ಯಾರ್ಥಿಗಳು ಸಿಲುಕಿದ್ದಾರೆ ಎನ್ನುವ ಸುದ್ದಿಯೇ. 20 ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಎಂಬಿಬಿಎಸ್​ ಓದಲು ಹೋಗಿದ್ದಾರೆ. ಎಲ್ಲರೂ ಅಲ್ಲಿಗೆ ಹೋಗಿರುವುದು ಎಂಬಿಬಿಎಸ್​ ಪದವಿ ಪಡೆಯಲು. ಅಬ್ಬಬ್ಬಾ ಈ ಪರಿಯಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆಯಲು ಹೋಗ್ತಿದ್ದಾರೆಯೇ ಎಂದು ಅಚ್ಚರಿ ಪಡುವಷ್ಟು ರೀತಿಯಲ್ಲಿ ಅಲ್ಲಿಗೆ ಪ್ರತಿವರ್ಷ ಹೋಗುತ್ತಿದ್ದಾರೆ.

    ಇದು ಯೂಕ್ರೇನ್​ ಮಾತಾದರೆ ಇನ್ನು ಹಲವಾರು ದೇಶಗಳಿಗೂ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳು ಹೆಚ್ಚಾಗಿ ವೈದ್ಯಕೀಯ ಕೋರ್ಸ್​ಗಳಿಗೆ ಹೋಗುತ್ತಾರೆ. ಅವುಗಳಲ್ಲಿ ಮುಖ್ಯವಾದದ್ದು, ಚೀನಾ, ರಷ್ಯಾ, ಕಿರ್ಗಿಸ್ತಾನ್, ಫಿಲಿಪೈನ್ಸ್ ಮತ್ತು ಕಜಕಿಸ್ತಾನ್‌.

    ಭಾರತದ ಮಟ್ಟಿಗೆ ಹೇಳುವುದಾದರೆ, ಭಾರತದಲ್ಲಿ ಸರ್ಕಾರಿ ಕೋಟಾದಡಿ ಸೀಟು ಸಿಕ್ಕವರು ವೈದ್ಯಕೀಯ ಶಿಕ್ಷಣವನ್ನು ಸುಲಭವಾಗಿ ಪಡೆಯಬಹುದು. ಆದರೆ ಎಲ್ಲರಿಗೂ ಈ ಅದೃಷ್ಟ ಇರುವುದಿಲ್ಲವಲ್ಲ. ವೈದ್ಯರಾಗುವ ಕನಸು ಕಾಣುವವರು ಹಲವರು. ಆದರೆ ಸರ್ಕಾರಿ ಕೋಟಾದಡಿ ಸೀಟು ಸಿಗುವುದು ಕೆಲವರಿಗೆ ಮಾತ್ರ. ಉಳಿದವರು ಖಾಸಗಿ ಸೀಟುಗಳಲ್ಲಿ ಪ್ರವೇಶ ಪಡೆಯಬೇಕು. ಆದರೆ ಎಲ್ಲರಿಗೂ ತಿಳಿದಿರುವಂತೆ ಖಾಸಗಿ ಸೀಟುಗಳು ಎಂದರೆ ಅದು ಸಾಧ್ಯವಾಗುವುದು ಕೋಟ್ಯಧೀಶ್ವರರಿಗೆ ಮಾತ್ರ. ಅಷ್ಟು ದುಬಾರಿ ಶಿಕ್ಷಣ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ವೈದ್ಯಕೀಯ ಶಿಕ್ಷಣ.

    ಇದೇ ಕಾರಣಕ್ಕೆ ಭಾವಿ ವೈದ್ಯರ ಕಣ್ಣು ಹೋಗುವುದು ರಷ್ಯಾ ಮತ್ತು ಯೂಕ್ರೇನ್‌ನತ್ತ. ಏಕೆಂದರೆ ಇಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಶುಲ್ಕ ಬಹಳ ಕಡಿಮೆ. ಅದು ಎಷ್ಟು ಎಂದರೆ ಭಾರತಕ್ಕಿಂತ ಶೇ.60 ರಿಂದ 70ರಷ್ಟು ಕಡಿಮೆ ಅಗ್ಗದಲ್ಲಿ ಅಲ್ಲಿ ಶುಲ್ಕವಿರುತ್ತದೆ. ಭಾರತದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ 4.5 ವರ್ಷಗಳ ಅಧ್ಯಯನಕ್ಕೆ 50 ಲಕ್ಷದಿಂದ 1.5 ಕೋಟಿ ರೂ. ವೆಚ್ಚವಾಗುತ್ತದೆ, ಆದರೆ ಉಕ್ರೇನ್‌ನಂತಹ ದೇಶಗಳಲ್ಲಿ ಈ ವೆಚ್ಚ ಕೇವಲ 15-20 ಲಕ್ಷಗಳು. ಇವಿಷ್ಟೇ ಅಲ್ಲದೇ, ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡರೆ ಯೂಕ್ರೇನ್‌ ಕರೆದು ತುಂಬಾ ಕಡಿಮೆ ದರದಲ್ಲಿ ಸೀಟು ನೀಡುತ್ತದೆ.ಕೆಲವೊಂದು ಕಾಲೇಜುಗಳಲ್ಲಿ ನೀಟ್‌ ಪರೀಕ್ಷೆಯ ಅಗತ್ಯವೂ ಇರುವುದಿಲ್ಲ!

    ಹಾಗಿದ್ದರೆ ಅಂಕಿ ಅಂಶ ಏನನ್ನು ಹೇಳುತ್ತದೆ? ಯೂಕ್ರೇನ್​ನಲ್ಲಿ ಎಂಬಿಬಿಎಸ್​ ಓದುವ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಮಾನ್ಯತೆ ಇದೆಯಾ ಎಂಬ ಒಂದಿಷ್ಟು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ:

    ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಪ್ರಕಾರ, ಸಾಮಾನ್ಯವಾರು 1000 ಜನರಿಗೆ 1 ವೈದ್ಯರಾದರೂ ಇರಬೇಕು. ಇದನ್ನು ಗಣನೆಗೆ ತೆಗೆದುಕೊಂಡರೆ ಭಾರತದಲ್ಲಿ ಇರುವ 138 ಕೋಟಿ ಜನಸಂಖ್ಯೆಗೆ ಸುಮಾರು 1.38 ಕೋಟಿ ವೈದ್ಯರು ಬೇಕಿದೆ. ಆದರೆ ಇಂಡಿಯನ್​ ಹೆಲ್ತ್​ ಪ್ರೊಫೈಲ್ ನೀಡಿರುವ ಅಂಕಿಅಂಶದ ಪ್ರಕಾರ, 2021 ರವರೆಗೆ ದೇಶದಲ್ಲಿ ಕೇವಲ 12 ಲಕ್ಷ ನೋಂದಾಯಿತ ವೈದ್ಯಕೀಯ ವೈದ್ಯರು ಇದ್ದಾರೆ. ಸದ್ಯ ದೇಶದಲ್ಲಿ ಸುಮಾರು 83 ಸಾವಿರ ಎಂಬಿಬಿಎಸ್ ಸೀಟುಗಳು ಲಭ್ಯವಿವೆ. ಇಷ್ಟು ಸೀಟಿಗೆ 16 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಯನ್ನು 2021ರಲ್ಲಿ ನೀಡಿದ್ದರು.

    ಇದೇ ವರದಿಯಲ್ಲಿ ತಿಳಿಸಿರುವಂತೆ 2015 ಮತ್ತು 2020 ರ ನಡುವೆ ವಿದೇಶದಿಂದ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಆದರೆ ಅವರು ಅಲ್ಲಿಂದ ಎಂಬಿಬಿಎಸ್​ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬಂದ ಮಾತ್ರಕ್ಕೆ ಭಾರತದ ಆಸ್ಪತ್ರೆಗಳಲ್ಲಿ ಅವರಿಗೆ ಸುಲಭದಲ್ಲಿ ಉದ್ಯೋಗ ಸಿಗುವುದಿಲ್ಲ. ಯಾವುದೇ ದೇಶದಲ್ಲಿ ವೈದ್ಯಕೀಯ ತರಬೇತಿ ಪಡೆದು ಬಂದರೂ ಭಾರತಕ್ಕೆ ಮರಳಿದ ನಂತರ ಇಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಪರೀಕ್ಷೆಗೆ ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆ (FMGE) ಎನ್ನಲಾಗುತ್ತದೆ. ಇದನ್ನು ನಡೆಸುವುದು ಪರೀಕ್ಷೆಯನ್ನು ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್.

    ಈ ಪರೀಕ್ಷೆಯನ್ನು ವರ್ಷಕ್ಕೆ ಎರಡು ಸಲ ಭಾರತದಲ್ಲಿ ನಡೆಸಲಾಗುತ್ತದೆ. ಅದರಲ್ಲಿ ಉತ್ತೀರ್ಣರಾಗಲು ಮೂರು ಅವಕಾಶ ನೀಡಲಾಗುತ್ತದೆ. ಇದಾದ ನಂತರವೇ ವಿದೇಶದಿಂದ ವೈದ್ಯಕೀಯ ಪದವಿ ಪಡೆದವರು ಇಲ್ಲಿ ಅಭ್ಯಾಸ ಮಾಡಬಹುದು ಅಥವಾ ವೈದ್ಯಕೀಯ ವೃತ್ತಿಯಲ್ಲಿ ಎಲ್ಲಿಯಾದರೂ ಉದ್ಯೋಗ ಪಡೆಯಬಹುದು. ವಿಚಿತ್ರ ಎಂದರೆ ಈ ಪರೀಕ್ಷೆಯಲ್ಲಿ ಹೆಚ್ಚಿನ ಮಂದಿ ಅನುತ್ತೀರ್ಣರಾಗುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಸರಾಸರಿ ಶೇ.15.82ರಷ್ಟು ವಿದೇಶದಿಂದ ಬಂದ ವಿದ್ಯಾರ್ಥಿಗಳು ಮಾತ್ರ ಎಫ್‌ಎಂಜಿಇಯಿಂದ ತೇರ್ಗಡೆಯಾಗಿದ್ದಾರೆ.

    ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ನೀಡಿರುವ ಅಂಕಿ ಅಂಶದ ಪ್ರಕಾರ ವೈದ್ಯಕೀಯ ಪದವೀಧರರ ಪರೀಕ್ಷೆ ಯನ್ನು 2015 ರಲ್ಲಿ 12,116 ಅಭ್ಯರ್ಥಿಗಳು ತೆಗೆದುಕೊಂಡಿದ್ದರೆ 2020ರಲ್ಲಿ ವರ ಸಂಖ್ಯೆ 35,774 ಕ್ಕೆ ಏರಿತು. ಕುತೂಹಲಕಾರಿ ಅಂಶವೆಂದರೆ, ಇದೇ ಅವಧಿಯಲ್ಲಿ ದೇಶದ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚಾದದ್ದು 30 ಸಾವಿರ ಸೀಟುಗಳು ಮಾತ್ರ!

    2020 ರಲ್ಲಿ ಚೀನಾದ ಶಿಕ್ಷಣ ಸಂಸ್ಥೆಗಳಿಂದ ಪದವಿ ಪಡೆದ ಸುಮಾರು 12,680 ವಿದ್ಯಾರ್ಥಿಗಳು, ರಷ್ಯಾದಿಂದ 4,258, ಉಕ್ರೇನ್‌ನಿಂದ 4,153, ಕಿರ್ಗಿಸ್ತಾನ್‌ನಿಂದ 4,156, ಫಿಲಿಪೈನ್ಸ್‌ನಿಂದ 3,142 ಮತ್ತು ಕಜಕಿಸ್ತಾನ್‌ನಿಂದ 2,311 ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆ ಪರೀಕ್ಷೆ ಬರೆದಿದ್ದಾರೆ. ಈ ಪರೀಕ್ಷೆ ಬರೆದವರ 2020ರ ಅಂಕಿ ಅಂಶ ಹೇಳುವುದಾದರೆ, ಚೀನಾದಿಂದ ಬಂದ 13% ವಿದ್ಯಾರ್ಥಿಗಳು, ಯೂಕ್ರೇನ್‌ನಿಂದ ಹಿಂದಿರುಗಿದ 16% ವಿದ್ಯಾರ್ಥಿಗಳು ಫಿಲಿಪ್ಪೀನ್ಸ್​ನಿಂದ ಬಂದ 50.2% ವಿದ್ಯಾರ್ಥಿಗಳು ಮಾತ್ರ ಪಾಸ್​ ಆಗಿದ್ದಾರೆ.

    ‘ವಾಪಸ್​ ಕರೆಸಿಕೊಳ್ಳಿ’ ಎಂದು ಗೋಳಿಡುತ್ತಲೇ ಯೂಕ್ರೇನ್​ನಲ್ಲೂ ಭಾರತದ ವಿರುದ್ಧ ಪ್ರಚಾರ ಶುರು ಮಾಡಿದ! ಈತನ ಹಿಸ್ಟರಿ ಕೇಳಿ…

    VIDEO: ಭಾರತದ ಧ್ವಜ ಹಿಡಿದು ಪ್ರಾಣ ಉಳಿಸಿಕೊಂಡ ಪಾಕಿಸ್ತಾನದ ವಿದ್ಯಾರ್ಥಿಗಳು! ಅನುಭವ ಇಲ್ಲಿದೆ ಕೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts