More

    ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ಪಾಪುವಿನ ಪಾದ ಅದಲುಬದಲು- ಈ ಕಾಲು ಅದಲ್ಲ… ಅದು ಇದಲ್ಲ!

    ಮುಂಬೈ: ಈಗ ಸಿನಿಪ್ರಿಯರು, ಕ್ರಿಕೇಟ್​ ಪ್ರೇಮಿಗಳು ಎಲ್ಲರ ಕಣ್ಣೂ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಯ ನವಜಾತ ಶಿಶುವಿನತ್ತ. ಈ ದಂಪತಿ ಕ್ಯಾಮೆರಾ ಕಣ್ಣಿನಿಂದ ದೂರ ಇರುವುದಾಗಿ ಹೇಳಿದರೂ, ಕ್ಯಾಮೆರಾ ಮಾತ್ರ ಸದಾ ಇವರನ್ನೇ ಹಿಂಬಾಲಿಸುತ್ತಿರುವುದು ಸುಳ್ಳಲ್ಲ.

    ನಿನ್ನೆಯಷ್ಟೇ ಈ ದಂಪತಿಗೆ ಮಗಳು ಹುಟ್ಟಿದ್ದಾಳೆ. ಆದರೆ ಆ ಮಗುವಿನ ದರ್ಶನದ ಭಾಗ್ಯವು ತಮಗೆ ಯಾವಾಗ ಸಿಗುತ್ತದೆ ಎಂದು ಅಭಿಮಾನಿಗಳು ಕಾದುಕುಳಿತಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ದಂಪತಿ ತಮ್ಮ ಮಗುವಿನ ಫೋಟೋ ಶೇರ್​ ಮಾಡಬಹುದು ಎಂದು ಕಣ್ಣುಬಿಟ್ಟು ಅಭಿಮಾನಿಗಳು ನೋಡುತ್ತಿದ್ದಾರೆ.

    ಹೀಗೆ ನೋಡುತ್ತಿದ್ದವರಿಗೆ ನಿನ್ನೆ ಸಕತ್​ ಖುಷಿಯಾಗಿ ಹೋಗಿತ್ತು. ಏಕೆಂದರೆ ವಿರಾಟ್ ಕೊಹ್ಲಿ ಅವರ ಸಹೋದರ ವಿಕಾಸ್ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ದಂಪತಿಗೆ ಮಗು ಆಗಿರುವುದಕ್ಕೆ ಶುಭಾಶಯ ಕೋರಿ ಒಂದು ಪೋಸ್ಟ್​ ಮಾಡಿದ್ದರು. ಆ ಪೋಸ್ಟ್​ ಎಷ್ಟು ವೈರಲ್​ ಆಯಿತು ಎಂದರೆ, ಅದೇ ಈಗ ನಿರಾಸೆಯನ್ನೂ ತಂದಿದೆ.

    ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ಪಾಪುವಿನ ಪಾದ ಅದಲುಬದಲು- ಈ ಕಾಲು ಅದಲ್ಲ... ಅದು ಇದಲ್ಲ!
    ಇದಕ್ಕೆ ಕಾರಣ, ವಿಕಾಸ್​ ಕೊಹ್ಲಿ ಅವರು ಶುಭಾಶಯ ಕೋರುವಾಗ ಗೂಗಲ್​ನಲ್ಲಿ ಸಿಕ್ಕ ಯಾವುದೋ ಒಂದು ಮಗುವಿನ ಪಾದದ ಫೋಟೋ ಸಾಂಕೇತಿಕವಾಗಿ ಪೋಸ್ಟ್​ ಮಾಡಿದ್ದರು. ಆದರೆ ಹುಚ್ಚು ಅಭಿಮಾನಿಗಳು ಇದೇ ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಮಗುವಿನದ್ದೇ ಪಾದ ಎಂದುಕೊಂಡು ಹುಚ್ಚೆದ್ದು ಕುಣಿದರು. ಕೊನೆಗೂ ತಮಗೆ ಕೊನೆಯಪಕ್ಷ ಮಗುವಿನ ಪಾದದ ದರ್ಶನವಾದರೂ ಆಯಿತೆಂದು ಸಂತಸಪಟ್ಟರು.

    , “ಹ್ಯಾಪಿನೆಸ್ ಓವರ್‌ಬೋರ್ಡ್ … ಮನೆಯಲ್ಲಿ ದೇವತೆ” ಎಂಬ ಕ್ಯಾಪ್ಷನ್​ ನೀಡಿ ವಿಕಾಸ್​ ಅವರು ಅಭಿನಂದನೆ ಸಲ್ಲಿಸಿ ಸಾಂಕೇತಿಕವಾಗಿ ಯಾವುದೋ ಮಗುವಿನ ಫೋಟೋ ಹಾಕಿದ್ದರು. ಈ ಪೋಸ್ಟ್​ ಅನ್ನು ಸಹಸ್ರಾರು ಅಭಿಮಾನಿಗಳು ಶೇರ್​ ಮಾಡಿ, ತಾವು ಮಗುವಿನ ದರ್ಶನ ಪಡೆದಿರುವುದಾಗಿ ಖುಷಿ ಹಂಚಿಕೊಂಡರು.

    ಆದರೆ ಇದೀಗ ಈ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಏಕೆಂದರೆ ನಿಜ ಗೊತ್ತಾಗಿದೆ. ಈ ಫೋಟೋದಲ್ಲಿ ಇರುವ ಮಗುವಿನ ಪಾದದ ಚಿತ್ರ ಅಸಲಿದೆ ವಿರಾಟ್​-ಅನುಷ್ಕಾ ದಂಪತಿಯ ಪುತ್ರಿಯದ್ದು ಅಲ್ಲ, ಬದಲಿಗೆ ಗೂಗಲ್​ನಲ್ಲಿ ಸಿಕ್ಕಿರುವ ಇನ್ನಾರದ್ದೋ ಮುದ್ದಾದ ಮಗುವಿನ ಪಾದವೆಂದು!

    ಚಾಮರಾಜನಗರದ ಕಾಲೇಜಿಗೆ ಮತ್ತೆ ಎಂಟ್ರಿ ಕೊಟ್ಟ ಚಿರತೆ- ಕಿಟಕಿ ಒಳಗೆ ನುಗ್ಗಿರುವ ದೃಶ್ಯ ಸೆರೆ

    ಪ್ರೀತಿ ಹೆಸರಲ್ಲಿ ಲೂಟಿಮಾಡಿ ಈಗ ನನಗೆ ಬೇಕಾದಷ್ಟು ಜನ ಇದ್ದಾರೆ ಎನ್ನುತ್ತಿದ್ದಾಳೆ- ಬರೀ ಗಂಡಿಗೇಕೆ ಶಿಕ್ಷೆ?

    ಮತ್ತೆ ಮತ್ತೆ ಮರುಕಳಿಸುತ್ತಿದೆ ಘೋರ ದುರಂತ! ರಾಡ್​ ತೂರಿಸಿ ವಿಧವೆ ಮೇಲೆ ಗ್ಯಾಂಗ್​ರೇಪ್​!

    ಪುಣೆಯಿಂದ ಮೂರು ಟ್ರಕ್​ನಲ್ಲಿ ಹೊರಟಿವೆ ಕೋವಿಡ್​ ಲಸಿಕೆ: ರಾಜ್ಯಕ್ಕೆ ಎಷ್ಟು ಸಿಗಲಿದೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts