More

    ಗಗನಮುಖಿಯಾದ ಡೀಸೆಲ್‌ ಬೆಲೆ: ನ.5ರಂದು ವಿಧಾನಸೌಧ ಮುತ್ತಿಗೆ ಮಾಡಲಿದ್ದಾರೆ ಲಾರಿ ಮಾಲೀಕರು

    ಬೆಂಗಳೂರು: ರಾಜ್ಯ ಸರ್ಕಾರ ಶೀಘ್ರವೇ ಡೀಸೆಲ್ ದರ ಇಳಿಕೆ ಮಾಡದಿದ್ದರೆ ನ.5ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಫೆಡರೇಷನ್ ಆಫ್‌ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್‌ ಆಂಡ್ ಏಜೆಂಟ್ಸ್ ಅಸೋಸಿಯೇಷನ್ ಹೇಳಿದೆ.

    ಕರೊನಾದಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದರೂ ಪ್ರತಿ ನಿತ್ಯ ಡೀಸೆಲ್ ದರ ಏರಿಕೆಯಾಗುತ್ತಿದೆ. ಸದ್ಯ ಲೀ.ಡೀಸೆಲ್‌ಗೆ 103 ರೂ.ಇದೆ. 2019ರ ಸೆಪ್ಟೆಂಬರ್‌ನಿಂದ ಈವರೆಗೆ ಡೀಸೆಲ್ ಮೇಲೆ ಒಟ್ಟಾರೆ 35 ರೂ.ಹೆಚ್ಚಳವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದಕ್ಕೆ ಹೆಚ್ಚುವರಿ ತೆರಿಗೆ ಹಾಕುತ್ತಿವೆ. ಇದರಿಂದ ಪ್ರತಿ ಕಿಮೀಗೆ 12 ರೂ.ಹೆಚ್ಚಿನ ಹೊರೆ ಬೀಳುತ್ತಿದೆ. ಕೂಡಲೆ ದರವನ್ನು ಇಳಿಸದಿದ್ದರೆ ವಿಧಾನಸೌಧ ಹಾಗೂ ಸಾರಿಗೆ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಭಾನುವಾರ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಹೊಸ ವಾಹನಗಳು, ಬಿಡಿಭಾಗಗಳು, ಡೀಸೆಲ್ ಮತ್ತು ಟೋಲ್ ಸೇರಿ ಹಲವು ತೆರಿಗಳ ಭಾರದಿಂದ ಸರಕು ಸಾಗಣೆ ಉದ್ಯಮ ನಷ್ಟದಲ್ಲಿದೆ. ಸಾವಿರಾರು ಮಾಲೀಕರು ವಾಹನಗಳ ದಾಖಲೆಗಳನ್ನೇ ಸಾರಿಗೆ ಇಲಾಖೆಗೆ ಹಿಂತಿರುಗಿಸುತ್ತಿದ್ದಾರೆ. ಸರಕು ಸಾಗಣೆ ಉದ್ಯಮ ಶೇ.70 ಡೀಸೆಲ್ ಮೇಲೆ ಆವಲಂಬಿತವಾಗಿದೆ. ದರ ಏರಿಕೆಯಿಂದ ಮಾಲೀಕರು, ಚಾಲಕರು, ಹಮಾಲಿಗಳು ಹಾಗೂ ಮೆಕಾನಿಕ್‌ಗಳ ಕುಟುಂಬಗಳು ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ. ಸಾಲ ಮಾಡಿ ವಾಹನ ಖರೀದಿಸುವವರು ಸ್ಥಿತಿಯಂತೂ ಹೇಳತೀರದಾಗಿದೆ. ೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಿದೆ ಎಂದು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಶ್ವಥ್ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರ ಹಣಕಾಸು ಸಂಸ್ಥೆಗಳಿಗೆ ಅಂದಾಜು 70 ಸಾವಿರ ಕೋಟಿ ರೂ.ನೆರವು ನೀಡಿದೆ. ಆದರೆ, ೈನಾನ್ಸ್ ಕಂಪನಿಗಳು ಸಾಲ ಪಡೆದಿರುವ ವಾಹನ ಮಾಲೀಕರಿಗೆ ಅಧಿಕ ಬಡ್ಡಿ ಹಾಕುತ್ತಿವೆ. ವಾಹನಗಳನ್ನು ಜಪ್ತಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಮನನೊಂದು ಮಾಲೀಕರು ಆತ್ಮಹತ್ಯೆ ಹಾದಿಗೆ ತುಳಿಯುತ್ತಿದ್ದಾರೆ. ಕೂಡಲೇ ಸರ್ಕಾರ ಹಣಕಾಸು ಸಂಸ್ಥೆಗಳ ಜತೆ ಚರ್ಚಿಸಬೇಕು. ಲೈಸೆನ್ಸ್, ಪರ್ಮಿಟ್ ಮತ್ತು ಎ್ಸಿ ಅವಧಿಯನ್ನು ಅ.31ರವರೆಗೆ ವಿಸ್ತರಿಸಿದ್ದರೂ ಸಾರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ಕಟ್ಟವಂತೆ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅಶ್ವಥ್ ಆರೋಪಿಸಿದರು.

    ಮದ್ವೆ ಎಂದ್ರೆ ಮಗ ಸಿಟ್ಟಿಗೇಳೋದ್ದಕ್ಕೆ ಇವೆಲ್ಲ ಕಾರಣಗಳು ಇರಬಹುದಮ್ಮಾ… ಯೋಚಿಸಿ ನೋಡಿ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts