More

    ವೈಷ್ಣೋದೇವಿ ಯಾತ್ರಿಕರಿಗೆ ಗುಡ್‌ನ್ಯೂಸ್‌: ಯಾತ್ರೆ ನೋಂದಣಿ ಆರಂಭ- ಇಲ್ಲಿದೆ ರೂಲ್ಸ್‌

    ಜಮ್ಮು: ಜಮ್ಮು ಕಾಶ್ಮೀರ ಜಮ್ಮು ಕಾಶ್ಮೀರದ ಪುಣ್ಯಕ್ಷೇತ್ರ ತ್ರಿಕೂಟ ಪರ್ವತ ಪ್ರದೇಶದಲ್ಲಿ ನೆಲೆನಿಂತ ಶಕ್ತಿದೇವತೆ ವೈಷ್ಣೋದೇವಿಗೆ ವಿಶ್ವಾದ್ಯಂತ ಲಕ್ಷಾಂತರ ಮಂದಿ ಅಭಿಮಾನಿಗಳು ಇದ್ದಾರೆ. ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಈ ದೇಗುಲಕ್ಕೆ ಹೊರಡಲು ಉತ್ಸುಕರಾಗಿರುವ ಭಕ್ತರಿಗೆ ಸಿಹಿ ಸುದ್ದಿಯೊಂದನ್ನು ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿ ಪ್ರಕಟಿಸಿದೆ.

    ಆನ್‌ಲೈನ್‌ ಮೂಲಕ ಯಾತ್ರೆ ನೋಂದಣಿ ಮತ್ತು ಹೆಲಿಕಾಪ್ಟರ್ ಬುಕಿಂಗ್ ನಾಳೆಯಿಂದ (ಆಗಸ್ಟ್‌ 26) ಆರಂಭವಾಗಿದೆ. ಸೆಪ್ಟೆಂಬರ್ 5 ರವರೆಗೂ ಇದು ಮುಂದುವರೆಯಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿ ಪ್ರಕಟಿಸಿದೆ.

    ಕೋವಿಡ್‌-19 ಹಿನ್ನೆಲೆಯಲ್ಲಿ ಸುಮಾರು 5 ತಿಂಗಳಿನಿಂದ ಯಾತ್ರೆ ಸ್ಥಗಿತಗೊಂಡಿತ್ತು. ಆಗಸ್ಟ್ 16 ರಂದು ಮಾತಾ ವೈಷ್ಣೋ ದೇವಿ ದೇವಸ್ಥಾನಕ್ಕೆ ತೀರ್ಥಯಾತ್ರೆ ಆರಂಭವಾಗಿದ್ದು, ಇದೀಗ ಆನ್‌ಲೈನ್ ಮೂಲಕ ಯಾತ್ರೆಯ ನೋಂದಣಿ ಮತ್ತು ಹೆಲಿಕಾಪ್ಟರ್ ಬುಕಿಂಗ್ ಆರಂಭಸಲಾಗುತ್ತಿದೆ. ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕುಮಾರ್ ಜಂಗಿದ್ ತಿಳಿಸಿದ್ದಾರೆ.

    ಇದನ್ನೂ ಓದಿ: ಎರಡ್ಮೂರು ತಿಂಗಳಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ; ಸಿಎಂ ಯಡಿಯೂರಪ್ಪ

    ನಿಯಮಗಳು ಇಂತಿವೆ
    * ಆನ್‌ಲೈನ್ ನೋಂದಣಿ ಹೊಂದಿರುವ ಭಕ್ತರಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.

    * ಭಕ್ತರು ತಮಗೆ ಕರೊನಾ ನೆಗೆಟಿವ್‌ ಇರುವ ಬಗ್ಗೆ ಪರೀಕ್ಷಾ ವರದಿಯನ್ನು ತರಬೇಕು. ಅದು ಯಾತ್ರೆಗೆ 48 ಗಂಟೆ ಮುಂಚಿತವಾಗಿ ಪರೀಕ್ಷೆಯ ವರದಿ ಇರಬೇಕು.
    * 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರವೇಶವಿಲ್ಲ.

    * 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಗರ್ಭಿಣಿಯರು ಮತ್ತು ಸಹ-ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳಿಗೆ ಕರೊನಾ ವೈರಸ್‌ ಮುನ್ನೆಚ್ಚರಿಕೆಗಳ ಕ್ರಮವಾಗಿ ದೇವಾಲಯಕ್ಕೆ ಭೇಟಿ ನೀಡಲು ಅನುಮತಿ ನೀಡಲಾಗುವುದಿಲ್ಲ.

    * ಪ್ರಸ್ತುತ 2,000 ಮಂದಿ ಭಕ್ತರಿಗೆ ಈ ದೇವಾಲಯಕ್ಕೆ ಭೇಟಿ ನೀಡಲು ಅವಕಾಶವಿದೆ, ಅದರಲ್ಲಿ 1,900 ನಿವಾಸಿಗಳು ಜಮ್ಮು ಮತ್ತು ಕಾಶ್ಮೀರದವರು ಮತ್ತು 100 ಮಂದಿ ಕೇಂದ್ರಾಡಳಿತ ಪ್ರದೇಶದ ಹೊರಗಿನವರು. ಆದರೆ ಹೊರಗಿನವರ ಸಂಖ್ಯೆಯನ್ನು ಹೆಚ್ಚಿಸಲು ಚಿಂತಿಸಲಾಗಿದ್ದು, ಅದು ಯಾವುದೇ ಕಾರಣಕ್ಕೂ 500 ಸಂಖ್ಯೆಯನ್ನು ಮೀರುವುದಿಲ್ಲ.

    ಕರೊನಾಕ್ಕೂ ಹೆದರಲಿಲ್ಲ, ವಿಕೋಪಕ್ಕೂ ಜಗ್ಗಲಿಲ್ಲ- ಪುರುಷರ ದಾಖಲೆ ಮುರಿದ ಸಾಹಸಿ ಮಹಿಳೆಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts