More

    ಕಾನೂನು ಪದವೀಧರರೆ? ರಾಜ್ಯ ಹೈಕೋರ್ಟ್‌ನಲ್ಲಿ ನಿಮಗಿದೆ ಅವಕಾಶ- 19 ಹುದ್ದೆಗಳಿಗೆ ಆಹ್ವಾನ

    ಬೆಂಗಳೂರಿನಲ್ಲಿರುವ ಕರ್ನಾಟಕ ಹೈಕೋರ್ಟ್​ನಲ್ಲಿ ಖಾಲಿ ಇರುವ ಲಾ ಕ್ಲರ್ಕ್​ ಕಂ ರಿಸರ್ಚ್​ ಅಸಿಸ್ಟೆಂಟ್​ ಹುದ್ದೆಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯಥಿರ್ಗಳಿಂದ ಅಜಿರ್ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು: 19

    ಲಾ ಕ್ಲರ್ಕ್​ ಕಂ ರಿಸರ್ಚ್​ ಅಸಿಸ್ಟೆಂಟ್​ ಅನ್ನು ಹೈಕೋರ್ಟ್​ನ ಯಾವುದಾದರು ಒಬ್ಬ ನ್ಯಾಯಮೂರ್ತಿಗಳೊಂದಿಗೆ ಕಾರ್ಯ ನಿರ್ವಹಿಸಲು ನೇಮಕ ಮಾಡಲಾಗುವುದು. ನ್ಯಾಯಮೂರ್ತಿಗಳ ನ್ಯಾಯಾಂಗ ಕೆಲಸ ಮಾತ್ರವಲ್ಲದೇ ಆಡಳಿತಾತ್ಮಕ ಕಾರ್ಯದಲ್ಲೂ ಸಹಾಯ ಮಾಡಬೇಕಾಗುತ್ತದೆ.

    ಅರ್ಹತೆಗಳೇನು?: ಕಾನೂನು ಪದವಿ ಪಡೆದಿದ್ದು, ಕನಿಷ್ಠ ಶೇ.50 ಅಂಕ ಪಡೆದಿರಬೇಕು. ಕಂಪ್ಯೂಟರ್​ ಜ್ಞಾನ ಅವಶ್ಯ. ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಕರ್ನಾಟಕ ಸ್ಟೇಟ್​ ಬಾರ್​ ಕೌನ್ಸಿಲ್​ನಲ್ಲಿ ನೋಂದಾಯಿತರಾಗಿರಬೇಕು.

    ಕೆಲಸಗಳೇನು: ಕೇಸ್​ಫೈಲ್​ಗಳನ್ನು ಓದಿ, ಕೇಸ್​ನ ಸಾರಾಂಶ, ಪ್ರಮುಖಾಂಶ ಮತ್ತು ಕೇಸ್​ಗೆ ಸಂಬಂಧಿಸಿದಂತೆ ಕಾನೋರ್ಲಜಿ ಸಿದ್ಧಪಡಿಸಬೇಕು. ಉದ್ಭವಿಸಬಹುದಾದ ಅಥವಾ ಪರಿಹರಿಸಬೇಕಾದ ಸಂಗತಿ, ಸಮಸ್ಯೆ ಮತ್ತು ಪ್ರಶ್ನೆಗಳನ್ನು ಗುರುತಿಸುವುದು, ಪ್ರಕರಣಗಳ ವಿಚಾರಣೆ ಸಮಯದಲ್ಲಿ ನ್ಯಾಯಾಲಯದಲ್ಲಿ ಹಾಜರಾಗುವುದು, ವಾದ ಮತ್ತು ಉಲ್ಲೇಖಗಳ ಟಿಪ್ಪಣಿ ತೆಗೆದುಕೊಳ್ಳುವುದು, ತೀರ್ಪುಗಳ ತಯಾರಿಕೆಯಲ್ಲು ನ್ಯಾಯಮೂರ್ತಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಕೇಸ್​ಗೆ ಸಂಬಂಧಿಸಿದಂತೆ ಕಾನೂನು, ಪುಸ್ತಕ, ಲೇಖನಗಳ ಸಂಶೋಧನೆ ಮಾಡುವುದು, ಭಾಷಣ ಹಾಗೂ ಶೈಕ್ಷಣಿಕ ಪತ್ರಿಕೆಗಳನ್ನು ತಯಾರಿಸಲು ನ್ಯಾಯಮೂರ್ತಿಗಳಿಗೆ ಸಹಾಯ ಮಾಡುವುದು ಸೇರಿ ಇತರ ಕೆಲಸಗಳಿರುತ್ತದೆ.

    ಆಯ್ಕೆ ಪ್ರಕ್ರಿಯೆ: ಅಭ್ಯಥಿರ್ಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ ಹಾಗೂ ಸಂದರ್ಶನದಲ್ಲಿ ಪಾಲ್ಗೊಳ್ಳುವಿಕೆ ಆಧರಿಸಿ ಅಂತಿಮ ಆಯ್ಕೆ ಮಾಡಲಾಗುವುದು.

    ವೇತನ: ಮಾಸಿಕ 20,000 ರೂ.ವೇತನ ನೀಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 29.5.2021
    ಅಧಿಸೂಚನೆಗೆ: https://bit.ly/3aS38ZZ
    ಮಾಹಿತಿಗೆ: https://karnatakajudiciary.kar.nic.in

    ವಿವಿಧ ಪದವೀಧರರಿಗೆ ಹಾಲು ಒಕ್ಕೂಟದಲ್ಲಿ 80 ಹುದ್ದೆಗಳಿಗೆ ಅರ್ಜಿ ಆಹ್ವಾನ

    ವಿವಿಧ ಪದವೀಧರರಿಗೆ ಪೆಟ್ರೋಲಿಯಂ ಸಂಸ್ಥೆಯಲ್ಲಿ ಉದ್ಯೋಗಾವಕಾಶ- 21 ಹುದ್ದೆಗಳಿಗೆ ಆಹ್ವಾನ

    ರೈಲ್ವೆ ಸಚಿವಾಲಯದ ಅಧೀನ ಸಂಸ್ಥೆ ರೈಟ್ಸ್‌ನಲ್ಲಿ 146 ಅಪ್ರೆಂಟಿಸ್‌ಶಿಪ್​ ತರಬೇತಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts