More

    ಭಾರತೀಯ ವಾಯುಪಡೆಯಲ್ಲಿದೆ 317 ಕಮಿಷನ್ಡ್ ಆಫೀಸರ್ ಹುದ್ದೆ: 1.70 ಲಕ್ಷ ರೂ.ವರೆಗೆ ಸಂಬಳ

    ಭಾರತೀಯ ವಾಯುಪಡೆಯ ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ (ಟೆಕ್ನಿಕಲ್ ಮತ್ತು ನಾನ್​ಟೆಕ್ನಿಕಲ್) ವಿಭಾಗದಲ್ಲಿ ಕಮಿಷನ್ಡ್ ಆಫೀಸರ್ಸ್ ಹುದ್ದೆಗೆ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    2023ರ ಜನವರಿಯಲ್ಲಿ ಆರಂಭಿಸುತ್ತಿರುವ ಹೊಸ ಕೋರ್ಸ್​ಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಶಾರ್ಟ್ ಸರ್ವಿಸ್ ಕಮಿಷನ್ (ಎಸ್​ಎಸ್​ಸಿ) ಮತ್ತು ಪರ್ಮನೆಂಟ್ ಕಮಿಷನ್ (ಪಿಸಿ) ವಿಭಾಗದ ಏರ್​ಪೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ (ಎಎಫ್​ಸಿಎಟಿ) ಎಂಟ್ರಿ ಮತ್ತು ಎನ್​ಸಿಸಿ ಸ್ಪೆಷಲ್ ಎಂಟ್ರಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಪರ್ಮನೆಂಟ್ ಕಮಿಷನ್ ಅಧಿಕಾರಿ ಹುದ್ದೆಗೆ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇರಲಿದೆ. ಎಸ್​ಎಸ್​ಸಿ ಅಧಿಕಾರಿ ಹುದ್ದೆಗೆ ಮಹಿಳೆ ಹಾಗೂ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳ ದೇಹದಲ್ಲಿ ಟ್ಯಾಟೂ (ಹಚ್ಚೆ) ಇರಬಾರದು ಎಂದು ತಿಳಿಸಲಾಗಿದೆ.

     

    ಹುದ್ದೆ ವಿವರ

    – ಎಎಫ್​ಸಿಎಟಿ ಎಂಟ್ರಿ

    * ಪ್ಲೈಯಿಂಗ್ – ಎಸ್​ಎಸ್​ಸಿ – 77

    * ಗ್ರೌಂಡ್ ಡ್ಯೂಟಿ (ಟೆಕ್ನಿಕಲ್) (ಎಸ್​ಎಸ್​ಸಿ 103, ಪಿಸಿ 26) – 129

    * ಗ್ರೌಂಡ್ ಡ್ಯೂಟಿ (ನಾನ್ ಟೆಕ್ನಿಕಲ್) (ಎಸ್​ಎಸ್​ಸಿ 89, ಪಿಸಿ 22) – 111

     

    – ಎನ್​ಸಿಸಿ ಸ್ಪೆಷಲ್ ಎಂಟ್ರಿ

    * ಪ್ಲೈಯಿಂಗ್ – ಸಿಡಿಎಸ್​ಸಿ ಖಾಲಿ ಇರುವ ಹುದ್ದೆಯ ಶೇ.10ರಷ್ಟು ಪಿಸಿಗೆ ಮತ್ತು ಎಎಫ್​ಸಿಎಟಿಯಲ್ಲಿ ಖಾಲಿ ಇರುವ ಹುದ್ದೆಯ ಶೇ.10 ಎಸ್​ಎಸ್​ಸಿಗೆ

     ವಯೋಮಿತಿ: 1.1.2023ಕ್ಕೆ ಅನ್ವಯವಾಗುವಂತೆ ಫ್ಲೈಯಿಂಗ್ ವಿಭಾಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 20 ರಿಂದ 24 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, 1999ರ ಜ.2 ಹಾಗೂ 2003ರ ಜ.1ರ ನಡುವೆ ಜನಿಸಿರಬೇಕು. ಗ್ರೌಂಡ್ ಡ್ಯೂಟಿ (ಟೆಕ್ನಿಕಲ್/ನಾನ್-ಟೆಕ್ನಿಕಲ್) ವಿಭಾಗದ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 20 ರಿಂದ 26 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, 1997ರ ಜ.2 ರಿಂದ 2003ರ ಜ.1ರ ನಡುವೆ ಜನಿಸಿರಬೇಕು.

    ತರಬೇತಿ ವಿವರ: 2023ರ ಜನವರಿ ಮೊದಲ ವಾರದಲ್ಲಿ ತರಬೇತಿ ಆರಂಭವಾಗಲಿದ್ದು, ಹೈದರಾಬಾದ್​ನ ಡುಂಡಿಗಲ್​ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ನಡೆಯಲಿದೆ. ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಟೆಕ್ನಿಕಲ್ ವಿಭಾಗಕ್ಕೆ 74 ವಾರದ ತರಬೇತಿ, ನಾನ್ ಟೆಕ್ನಿಕಲ್ ವಿಭಾಗಕ್ಕೆ 52 ವಾರಗಳ ತರಬೇತಿ ನೀಡಲಾಗುವುದು. ಪ್ಯಾನ್​ಕಾರ್ಡ್, ಎಸ್​ಬಿಐ ಖಾತೆ, ಆಧಾರ್ ಸಂಖ್ಯೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಹೊಂದಿರಬೇಕು.

     
    ಗೌರವಧನ: ಕನಿಷ್ಠ ವೇತನ 15,500 ರೂ. ಇರಲಿದ್ದು, ಮೊದಲ ವರ್ಷದ ತರಬೇತಿ ಪೂರ್ಣಗೊಳಿಸಿದ ನಂತರ ಮಾಸಿಕ 56,100-1,77,500 ರೂ. ಇರಲಿದೆ. ಸರ್ವಿಂಗ್ ಆಫೀಸರ್​ಗೆ 1 ಕೋಟಿ ಮೌಲ್ಯದ ವಿಮೆ ಹಾಗೂ ಫ್ಲೈಯಿಂಗ್ ವಿಭಾಗದ ಅಧಿಕಾರಿಗಳಿಗೆ 12 ಲಕ್ಷ ರೂ, ಮೌಲ್ಯದ ವಿಮೆ ಇರಲಿದೆ.

    ವೈವಾಹಿಕ ಮಾನದಂಡ: 25 ವರ್ಷದೊಳಗಿನ ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು, 25 ವರ್ಷದೊಳಗಿನ ವಿಧವೆ/ ವಿಧುರ, ವಿಚ್ಛೇದಿತ ಅಭ್ಯರ್ಥಿಗಳಿಗೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.

    ಅರ್ಜಿ ಶುಲ್ಕ: ಎಎಫ್​ಸಿಎಟಿ ವಿಭಾಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆನ್​ಲೈನ್ ಪರೀಕ್ಷೆ ನಡೆಸುವುದರಿಂದ ಪರೀಕ್ಷಾ ಶುಲ್ಕವಾಗಿ 250 ರೂ. ಪಾವತಿಸತಕ್ಕದ್ದು. ಎನ್​ಸಿಸಿ ಸ್ಪೆಷಲ್ ಎಂಟ್ರಿ ವಿಭಾಗದ ಅಭ್ಯರ್ಥಿಗಳಿಗೆ ಅರ್ಜಿಶುಲ್ಕ ಇರುವುದಿಲ್ಲ.

     

    ಅರ್ಜಿ ಸಲ್ಲಿಸಲು ಕೊನೇ ದಿನ: 30.12.2021

    ಅಧಿಸೂಚನೆಗೆ: https://bit.ly/3EfejZi

    ಮಾಹಿತಿಗೆ: http://www.careerindianairforce.cdac.in

    ವಿವಿಧ ಸ್ನಾತಕೋತ್ತರ ಪದವೀಧರರಿಂದ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ: ಎರಡೇ ದಿನ ಬಾಕಿ

    ವಿವಿಧ ತಾಂತ್ರಿಕ ಪದವೀಧರರಿಗೆ ಅಣುವಿದ್ಯುತ್‌ಸ್ಥಾವರದಲ್ಲಿದೆ ಉದ್ಯೋಗ- 21 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts