More

    ಇಂಜಿನಿಯರಿಂಗ್​ ಪದವೀಧರರಿಗೆ ರೈಲ್ವೆ ಸಚಿವಾಲಯದಿಂದ ಅರ್ಜಿ ಆಹ್ವಾನ- ಕರ್ನಾಟದಲ್ಲಿಯೂ ಅವಕಾಶ

    ಐಆರ್​ಸಿಒಎನ್ ಇಂಟರ್​ನ್ಯಾಷನಲ್ ಲಿಮಿಟೆಡ್ ಸಾರ್ವಜನಿಕ ವಲಯವಾಗಿದ್ದು, ರೈಲ್ವೇ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು ಹುದ್ದೆಗಳು: 74

    ಐಆರ್​ಸಿಒಎನ್ ಕೈಗೊಳ್ಳುತ್ತಿರುವ ಹಲವು ಯೋಜನೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕರ್ನಾಟಕ, ಛತ್ತೀಸ್‍ಗಢ, ಜಾರ್ಖಂಡ್, ರಾಜಸ್ಥಾನ್, ಬಿಹಾರ್, ಸಿಕ್ಕಿಂ, ಜಮ್ಮು-ಕಾಶ್ಮೀರ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ತ್ರಿಪುರ, ಗುಜರಾತ್, ಒಡಿಸ್ಸಾದಲ್ಲಿನ ಕಚೇರಿ/ ಯೋಜನೆಗಳಲ್ಲಿ ಅಭ್ಯರ್ಥಿಗಳನ್ನು ನಿಯೋಜಿಸಲಾಗುವುದು.

    ಹುದ್ದೆ ವಿವರ
    * ವರ್ಕ್ಸ್ ಇಂಜಿನಿಯರ್/ ಸಿವಿಲ್ – 60
    ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿದ್ದು, ಪದವಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು.ಸಿವಿಲ್ ಕನ್‍ಸ್ಟ್ರಕ್ಷನ್‍ನಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಅವಶ್ಯ.

    * ವರ್ಕ್ಸ್ ಇಂಜಿನಿಯರ್/ ಎಸ್ ಆ್ಯಂಡ್ ಟಿ – 14
    ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‍ಸ್ಟ್ರುಮೆಂಟೇಷನ್, ಇನ್‍ಸ್ಟ್ರುಮೆಂಟೇಷನ್ ಆ್ಯಂಡ್ ಕಂಟ್ರೋಲ್ ಇಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಸೈನ್ಸ್‍ನಲ್ಲಿ ಪದವಿ ಪಡೆದಿದ್ದು, ಪದವಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು. ರೈಲ್ವೇ ಸಿಗ್ನಲಿಂಗ್ ವಕ್ಸ್ ಅಥವಾ ಒಎïಸಿ ಬೇಸ್ಡ ಕಮ್ಯುನಿಕೇಷನ್ ಆ್ಯಂಡ್ ನೆಟ್‍ವರ್ಕಿಂಗ್ ಸಿಸ್ಟಮ್ಸ್‍ನಲ್ಲಿ ಕನಿಷ್ಠ ಒಂದು ವರ್ಷದ ವೃತ್ತಿ ಅನುಭವ ಅವಶ್ಯ.

    ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 35 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 19, ಎಸ್ಸಿಗೆ 9, ಎಸ್ಟಿಗೆ 5, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 6 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ವಯೋಮಿತಿ: 1.3.2021ಕ್ಕೆ ಅನ್ವಯವಾಗುವಂತೆ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

    ವೇತನ: ಮಾಸಿಕ 36,000 ರೂ. ವೇತನ ಇದೆ. ಪಿಎï, ವೈದ್ಯಕೀಯ ಭತ್ಯೆಗಳನ್ನು ನೀಡಲಾಗುವುದು. ಬೇರೆ ಊರಿಗೆ ಕೆಲಸದ ನಿಮಿತ್ತ ಹೋದಾಗ ಟಿಎ/ಡಿಎ ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು ವೈದ್ಯಕೀಯವಾಗಿ ಫಿಟ್ ಇರತಕ್ಕದ್ದು, ಅಭ್ಯರ್ಥಿಗಳಿಗೆ ಬಣ್ಣಗುರುಡು ಇರಬಾರದು. ಆರೋಗ್ಯ ವಿಷಯದಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ. ಅಭ್ಯರ್ಥಿಗಳನ್ನು 1:7ರ ಅನುಪಾತದಲ್ಲಿ ಶಾರ್ಟ್‍ಲಿಸ್ಟ್ ಮಾಡಲಾಗುವುದು.

    ಸೂಚನೆ: ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಅದರ ಪ್ರತಿಯನ್ನು ಈಎI/ಏ್ಕI, ಐ್ಟ್ಚಟ್ಞ ಐ್ಞಠಿಛ್ಟ್ಞಿZಠಿಜಿಟ್ಞZ್ಝ ಔಠಿb., ಇ4, ಈಜಿoಠ್ಟಿಜ್ಚಿಠಿ ಇಛ್ಞಿಠ್ಟಿಛಿ, ಖZhಛಿಠಿ, ಘೆಛಿಡಿ ಈಛ್ಝಿeಜಿ 110017 ವಿಳಾಸಕ್ಕೆ ದಿನಾಂಕ 28.4.2021ರ ಒಳಗಾಗಿ ಪೆÇೀಸ್ಟ್ ಮಾಡಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 18.4.2021
    ಅಧಿಸೂಚನೆಗೆ: https://bit.ly/39drNYg
    ಮಾಹಿತಿಗೆ: http://www.ircon.org

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಬಿಇ, ಬಿ.ಟೆಕ್ ಪದವೀಧರರಿಗೆ ಇನ್​ಸ್ಟೆಮ್​ನಲ್ಲಿದೆ ಉದ್ಯೋಗ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ವಿವಿಧ ವಿಷಯಗಳಲ್ಲಿ ಇಂಜಿನಿಯರಿಂಗ್​ ಮುಗಿಸಿರುವಿರಾ? ನಿಮಗಾಗಿ ಕಾದಿವೆ 120 ಹುದ್ದೆಗಳು

    ವಿವಿಧ ಪದವೀಧರರಿಗೆ ಎನ್​ಐಎಫ್​ಟಿಯಲ್ಲಿ ಭರ್ಜರಿ ಅವಕಾಶ: ಪ್ರೊಫೆಸರ್​ ಹುದ್ದೆಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts