More

    ಬಿಇಎಲ್‍ನಲ್ಲಿ ಡಿಪ್ಲೋಮಾ ಉತ್ತೀರ್ಣರಿಗೆ ಭರಪೂರ ಅವಕಾಶ- ಕರ್ನಾಟಕದವರಿಗೆ ಆದ್ಯತೆ

    ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ, ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ನ (ಬಿಇಎಲ್) ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಶಾಖೆಯಲ್ಲಿ ಅಂಪ್ರೆಟೀಸ್‍ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಒಟ್ಟು ಸ್ಥಾನಗಳು 305 ಇದ್ದು, ಕರ್ನಾಟಕದವರಿಗೆ ಮಾತ್ರ ಆದ್ಯತೆ ಇದೆ.

    ಬಿಇಎಲ್‍ನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳು 1 ವರ್ಷದ ಗುತ್ತಿಗೆ ಆಧಾರಕ್ಕೆ ಒಳಪಟ್ಟಿದ್ದು, ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈಗಾಗಲೇ ಅಪ್ರೆಂಟೀಸ್ ತರಬೇತಿ ಪಡೆದಿರುವ/ ಪಡೆಯುತ್ತಿರುವ, ಒಂದು ವರ್ಷಕ್ಕಿಂತ ಹೆಚ್ಚು ಅಪ್ರೆಂಟೀಸ್‍ಗಳಾಗಿ ಅನುಭವ ಇರುವ ಅಭ್ಯರ್ಥಿಗಳಿಗೆ ಅವಕಾಶ ಇಲ್ಲ.

    ಕೋರ್ಸ್ಸ್ಥಾ ನಗಳು
    * ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ – 25
    * ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ – 150
    * ಮೆಕ್ಯಾನಿಕಲ್ ಇಂಜಿನಿಯರಿಂಗ್ – 100
    * ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ – 25
    * ಕೆಮಿಕಲ್ ಇಂಜಿನಿಯರಿಂಗ್ – 5

    ಶೈಕ್ಷಣಿಕ ಅರ್ಹತೆ: ಸ್ಟೇಟ್ ಕೌನ್ಸಿಲ್ ಅಥವಾ ಟೆಕ್ನಿಕಲ್ ಎಜುಕೇಷನ್, ವಿಶ್ವವಿದ್ಯಾಲಯ, ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿ ವಿಷಯದಲ್ಲಿ ಡಿಪೆÇ್ಲಮಾ.

    ವಯೋಮಿತಿ: ಗರಿಷ್ಠ ವಯೋಮಿತಿ 22 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

    ಗೌರವಧನ: ಮಾಸಿಕ 10,400 ರೂ. ಗೌರವಧನ (ಸ್ಟೈಪೆಂಡ್) ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಆಯ್ದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಆಹ್ವಾನಿಸಲಾಗುವುದು. ದಾಖಲೆ ಪರಿಶೀಲನೆ ದಿನಾಂಕ ಹಾಗೂ ಸಂಬಂಧಿತ ಮಾಹಿತಿಯನ್ನು ಆಯ್ಕೆಯಾದ ಆಭ್ಯರ್ಥಿಗಳ ಇಮೇಲ್‍ಗೆ ಹಾಗೂ ಬಿಇಎಲ್ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗುವುದು. ಆಯ್ದ ಅಭ್ಯರ್ಥಿಗಳ ಪಟ್ಟಿಯನ್ನು ದಿನಾಂಕ 27.1.2021ರಂದು ಪ್ರಕಟಿಸಲಾಗುವುದು. ದಾಖಲೆ ಪರಿಶೀಲನೆ ಸಂಭಾವ್ಯ ದಿನಾಂಕ 3.2.2021.

    ಇತರ ಸೌಲಭ್ಯಗಳು: ಕನಿಷ್ಠ ಬೆಲೆಯಲ್ಲಿ ಕ್ಯಾಂಟೀನ್ ಹಾಗೂ ಪ್ರವಾಸ ಸೌಲಭ್ಯ ನೀಡಲಾಗುವುದು. ಕಂಪನಿ ಮಾನದಂಡದ ಪ್ರಕಾರ ಉಚಿತ ಒಪಿಡಿ ವೈದ್ಯಕೀಯ ಸೌಲಭ್ಯ, 5 ಲಕ್ಷ ರೂ. ಮೌಲ್ಯದ ಉಚಿತ ಅಪಘಾತ ವಿಮೆ ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 19.1.2021 
    ಅಧಿಸೂಚನೆಗೆ: https://bit.ly/3nbZ2PE

    ಇನ್ನೂ ಹೆಚ್ಚಿನ ಉದ್ಯೋಗದ ಮಾಹಿತಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ನಿರುದ್ಯೋಗಿಗಳಿಗೆ ಬಂಪರ್‌ ಅವಕಾಶ: ಅಂಚೆ ಇಲಾಖೆಯಲ್ಲಿದೆ 2443 ಹುದ್ದೆ- ಕರ್ನಾಟಕದಲ್ಲಿ ಕೆಲಸ

    ಪದವಿ ಮುಗಿಸಿದವರಿಗೆ ಗುಡ್​ ನ್ಯೂಸ್​: ಸ್ಟಾಫ್​ ಸೆಲೆಕ್ಷನ್​ ಕಮಿಷನ್​ನಿಂದ 6,506 ಹುದ್ದೆಗಳ ಭರ್ತಿ

    ಮೆಕ್ಯಾನಿಕಲ್​ ಇಂಜಿನಿಯರಿಂಗ್​ ಮುಗಿಸಿದ್ದೀರಾ? ಇಲ್ಲಿದೆ ನಿಮಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts