More

    ಮೆಕ್ಯಾನಿಕಲ್​ ಇಂಜಿನಿಯರಿಂಗ್​ ಮುಗಿಸಿದ್ದೀರಾ? ಇಲ್ಲಿದೆ ನಿಮಗೆ ಅವಕಾಶ

    ಮಿನಿ ರತ್ನ ಕಂಪನಿಗಳಲ್ಲಿ ಒಂದಾಗಿರುವ ಕೊಚ್ಚಿನ್ ಶಿಪ್‍ಯಾರ್ಡ್ ಲಿಮಿಟೆಡ್‍ನಲ್ಲಿ (ಸಿಎಸ್‍ಎಲ್) ಶಿಪ್ ಡ್ರಾಟ್ಸ್‍ಮನ್ (ನಕ್ಷೆಗಾರ) ಟ್ರೇನಿಗಳ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 62 ಹುದ್ದೆಗಳು ಇವೆ.

    ಸಿಎಸ್‍ಎಲ್‍ನಲ್ಲಿನ ಹುದ್ದೆಗಳಿಗೆ 2 ವರ್ಷದ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಸಂಸ್ಥೆಯ ಅವಶ್ಯಕತೆಗೆ ತಕ್ಕಂತೆ ದೇಶದ ಯಾವ ಭಾಗದಲ್ಲಿ ಬೇಕಾದರೂ ಕೆಲಸಕ್ಕೆ ನಿಯೋಜಿಸಬಹುದು.
    ಖಾಲಿ ಇರುವ 62 ಹುದ್ದೆಗಳಲ್ಲಿ ಸಾಮಾನ್ಯವರ್ಗಕ್ಕೆ 29, ಇತರ ಹಿಂದುಳಿದ ವರ್ಗಕ್ಕೆ 14, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಕ್ಕೆ 5, ಎಸ್‍ಸಿಗೆ 11, ಎಸ್‍ಟಿ ಅಭ್ಯರ್ಥಿಗಳಿಗೆ 3 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ಬ್ಯಾಕ್‍ಲಾಗ್ ಮಿಸಲಾತಿಯೂ ಒಳಗೊಂಡಿದೆ.

    ಹುದ್ದೆ, ಸಂಖ್ಯೆ ವಿವರ
    * ಶಿಪ್ ಡ್ರಾಫ್ಟ್ಸ್​ಮನ್ ಟ್ರೇನಿ (ಮೆಕ್ಯಾನಿಕಲ್) – 48
    * ಶಿಪ್ ಡ್ರಾಫ್ಟ್ಸ್​ಮನ್ ಟ್ರೇನಿ (ಎಲೆಕ್ಟ್ರಿಕಲ್) – 14

    ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ 3 ವರ್ಷದ ಡಿಪ್ಲೋಮಾದಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು.

    ವಯೋಮಿತಿ: 15.1.2021ಕ್ಕೆ ಗರಿಷ್ಠ 25 ವರ್ಷ. ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಿಲಿಕೆ ಇದೆ.

    ಸ್ಟೈಪೆಂಡ್: ಮೊದಲ ವರ್ಷದ ಅವಧಿಯಲ್ಲಿ ಟ್ರೇನಿಗೆ ಮಾಸಿಕ 12,600 ರೂ. ಸ್ಟೈಪೆಂಡ್ ನೀಡಲಾಗುವುದು. 2ನೇ ವರ್ಷದ ತರಬೇತಿ ಅವಧಿಯಲ್ಲಿ ಮಾಸಿಕ 13,800 ರೂ. ಸ್ಟೈಪೆಂಡ್ ನೀಡಲಾಗುವುದು. ಅಧಿಕ ಅವಧಿಯ ಕಾರ್ಯಕ್ಕೆ ಮಾಸಿಕ 4,450 ರೂ. ಭತ್ಯೆ ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: 2 ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಬಹು ಆಯ್ಕೆ ಮಾದರಿಯ ಆನ್‍ಲೈನ್ ಪರೀಕ್ಷೆ ನಡೆಸಲಾಗುವುದು. ಪಾರ್ಟ್ 1ರಲ್ಲಿ ಸಾಮಾನ್ಯ ಜ್ಞಾನ, ಸಮಾನ್ಯ ಇಂಗ್ಲಿಷ್, ರೀಸನಿಂಗ್, ಕ್ವಾಂಟಿಟೇಟೀವ್ ಆಪ್ಟಿಟ್ಯೂಡ್ ವಿಷಯಗಳಿರುತ್ತವೆ. ಪಾರ್ಟ್ 2ರಲ್ಲಿ ಡಿಸಿಪ್ಲೀನ್ ಸಂಬಂಧಿತ ಪ್ರಶ್ನೆಗಳಿರುತ್ತವೆ. 2ನೇ ಹಂತದಲ್ಲಿ ಆಟೋ ಕ್ಯಾಡ್ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು.

    ಅರ್ಜಿ ಶುಲ್ಕ: ಎಸ್‍ಸಿ, ಎಸ್‍ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳಿಗೆ 300 ರೂ. ಶುಲ್ಕ ನಿಗದಿಯಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 15.1.2021
    ಅಧಿಸೂಚನೆಗೆ: https://bit.ly/2MhyXC1
    ಮಾಹಿತಿಗೆ: http://www.cochinshipyard.com

    ಪಿಯುಸಿ ಪಾಸ್​ ಆಗಿರುವಿರಾ? ಹಾಗಿದ್ದರೆ ಬೆಂಗಳೂರಿನಲ್ಲಿ ಐಸಿಎಂಆರ್​ನಲ್ಲಿವೆ ಉದ್ಯೋಗ

    ನಿರುದ್ಯೋಗಿಗಳಿಗೆ ಬಂಪರ್‌ ಅವಕಾಶ: ಅಂಚೆ ಇಲಾಖೆಯಲ್ಲಿದೆ 2443 ಹುದ್ದೆ- ಕರ್ನಾಟಕದಲ್ಲಿ ಕೆಲಸ

    ಪದವಿ ಮುಗಿಸಿದವರಿಗೆ ಗುಡ್​ ನ್ಯೂಸ್​: ಸ್ಟಾಫ್​ ಸೆಲೆಕ್ಷನ್​ ಕಮಿಷನ್​ನಿಂದ 6,506 ಹುದ್ದೆಗಳ ಭರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts