More

    ಡಿಪ್ಲೋಮಾ, ಬಿಇ ಪದವೀಧರರಾ? ಕೊಂಕಣ್ ರೈಲ್ವೆಯಲ್ಲಿದೆ 139 ಹುದ್ದೆಗಳು: ಅರ್ಜಿ ಆಹ್ವಾನ

    ಕೊಂಕಣ್ ರೈಲ್ವೆ ಕಾಪೋರೇಷನ್ ಲಿಮಿಟೆಡ್​ನಲ್ಲಿ (ಕೆಆರ್​ಸಿಎಲ್) ಇಂಜಿನಿಯರಿಂಗ್ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಉದ್ಯೋಗ ತರಬೇತಿ (ಅಪ್ರೆಂಟೀಸ್​ಶಿಪ್) ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ.

    2019, 2020 ಮತ್ತು 2021ರ ಅವಧಿಯಲ್ಲಿ ಇಂಜಿನಿಯರಿಂಗ್ ಅಥವಾ ಡಿಪ್ಲೊಮಾ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಒಂದು ವರ್ಷಕ್ಕಿಂತ ಹೆಚ್ಚು ವೃತ್ತಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ. ಈ ತರಬೇತಿಯು ಒಂದು ವರ್ಷ ಇರಲಿದೆ.

    ಕರ್ನಾಟಕದಲ್ಲಿನ ಹುದ್ದೆಗಳು: 38

    ಸ್ಥಾನಗಳ ವಿವರ

    * ಬಿಇ ಸಿವಿಲ್ – 30 (ಕಾರವಾರದಲ್ಲಿ 8 ಸ್ಥಾನ)

    * ಬಿಇ ಎಲೆಕ್ಟ್ರಿಕಲ್ – 30 (ಕಾರವಾರದಲ್ಲಿ 10)

    * ಬಿಇ ಎಲೆಕ್ಟ್ರಾನಿಕ್ಸ್ ಆಂಡ್ ಟೆಲಿಕಮ್ಯುನಿಕೇಷನ್ – 18 (ಕಾರವಾರದಲ್ಲಿ 3)

    * ಬಿಇ ಮೆಕಾನಿಕಲ್ – 9

    * ಡಿಪ್ಲೊಮಾ ಸಿವಿಲ್ – 24 (ಕಾರವಾರದಲ್ಲಿ 7)

    * ಡಿಪ್ಲೊಮಾ ಎಲೆಕ್ಟ್ರಿಕಲ್ – 28 (ಕಾರವಾರದಲ್ಲಿ 10)

    ಕರ್ನಾಟಕದ ವಿವರ: ಕರ್ನಾಟಕದ ಉತ್ತರಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. 38 ಸ್ಥಾನಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 13 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 11, ಎಸ್ಸಿಗೆ 6, ಎಸ್ಟಿಗೆ 4, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 4 ಸ್ಥಾನ ಮೀಸಲಿರಿಸಲಾಗಿದೆ.
    ವಿದ್ಯಾರ್ಹತೆ: ಎಲೆಕ್ಟ್ರಿಕಲ್, ಮೆಕಾನಿಕಲ್, ಎಲೆಕ್ಟ್ರಿಕಲ್ ಆಂಡ್ ಟೆಲಿಕಮ್ಯುನಿಕೇಷನ್, ಸಿವಿಲ್​ನಲ್ಲಿ ಬಿಇ/ ಬಿ.ಟೆಕ್ ಪದವಿ/ ಡಿಪ್ಲೊಮಾ ಮಾಡಿರಬೇಕು. ನಿಗದಿಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಿಲ್ಲ.

    ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಿದ್ದು, 1.10.1994 ರಿಂದ 1.10.2003ರ ನಡುವೆ ಜನಿಸಿರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ 3 ರಿಂದ 5 ವರ್ಷ ವಯೋಸಡಿಲಿಕೆ ಇದೆ.

    ಸ್ಟೈಪೆಂಡ್: ಪದವೀಧರ ಅಪ್ರೆಂಟೀಸ್​ಗೆ ಮಾಸಿಕ 4,984 ರೂ., ಡಿಪ್ಲೊಮಾ ಅಪ್ರೆಂಟೀಸ್​ಗೆ ಮಾಸಿಕ 3,542 ರೂ. ಗೌರವಧನ ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಮೆರಿಟ್ ಲಿಸ್ಟ್ ಆಧರಿಸಿ ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ದಾಖಲೆ ಪರಿಶೀಲನೆಗೆ ಆಹ್ವಾನಿಸಲಾಗುವುದು.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಮೈನಾರಿಟಿ, ಮಹಿಳಾ, ಆರ್ಥಿಕವಾಗಿ ದುರ್ಬಲವಾಗಿರುವ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 22.11.2021

    ಅಧಿಸೂಚನೆಗೆ: https://bit.ly/3nybwU8

    ಮಾಹಿತಿಗೆ: https://konkanrailway.com/

    ಹಾಸನ ವೈದ್ಯಕೀಯ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: 2.18 ಲಕ್ಷ ರೂ.ವರೆಗೆ ಸಂಬಳ

    ಟ್ರಾನ್ಸ್‌ಲೇಟರ್‌ ಉದ್ಯೋಗ ಹುಡುಕುತ್ತಿರುವಿರಾ? ಇಲ್ಲಿದೆ ಲಕ್ಷ ರೂ.ವರೆಗೆ ಸಂಪಾದಿಸುವ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts