More

    ಟ್ರಾನ್ಸ್‌ಲೇಟರ್‌ ಉದ್ಯೋಗ ಹುಡುಕುತ್ತಿರುವಿರಾ? ಇಲ್ಲಿದೆ ಲಕ್ಷ ರೂ.ವರೆಗೆ ಸಂಪಾದಿಸುವ ಅವಕಾಶ

    ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್​ನ (ಐಎಸ್​ಆರ್​ಒ-ಇಸ್ರೋ) ಅಂಗವಾದ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (ಎಚ್​ಎಸ್​ಎಫ್​ಸಿ) ಬೆಂಗಳೂರಿನ ಸ್ಪೇಸ್ ವಿಭಾಗದಲ್ಲಿರುವ 6 ಜೂನಿಯರ್ ಟ್ರಾನ್ಸ್​ಲೇಷನ್ ಆಫೀಸರ್ (ಜೆಟಿಒ) ಹುದ್ದೆಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

    ಪ್ರಸ್ತುತ ಬೆಂಗಳೂರಿನಲ್ಲಿರುವ ಇಸ್ರೋದ ಮುಖ್ಯ ಕಚೇರಿಯಲ್ಲೇ ಎಚ್​ಎಸ್​ಎಫ್​ಸಿ ಕಚೇರಿ ಇದ್ದು, ಮುಂದಿನ ದಿನಗಳಲ್ಲಿ ದೇಶದ ಯಾವುದೇ ಭಾಗಕ್ಕೆ ಬೇಕಾದರೂ ಕಚೇರಿಯನ್ನು ಸ್ಥಳಾಂತರಿಸಬಹುದಾಗಿದೆ ಎಂದು ತಿಳಿಸಲಾಗಿದೆ. ಆನ್​ಲೈನ್ ಅರ್ಜಿಗೆ ಮಾತ್ರ ಮಾನ್ಯತೆ ಎಂದು ತಿಳಿಸಲಾಗಿದೆ.


    ಹುದ್ದೆ ವಿವರ

    * ಜೂನಿಯರ್ ಟ್ರಾನ್ಸ್​ಲೇಷನ್ ಆಫೀಸರ್

    ಮೀಸಲಾತಿ: 6 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಸಾಮಾನ್ಯವರ್ಗದ ಅಭ್ಯರ್ಥಿಗೆ 5 ಸ್ಥಾನ ಹಾಗೂ ಎಸ್ಟಿಗೆ 1 ಸ್ಥಾನ ಕಾಯ್ದಿರಿಸಲಾಗಿದೆ. ಇದರಲ್ಲಿ ಬೆಂಗಳೂರಿನಲ್ಲಿ 1 ಸ್ಥಾನ, ಭೋಪಾಲ್​ನ ಇಸ್ರೋ ಘಟಕಕ್ಕೆ 4 ಸ್ಥಾನ (1 ಎಸ್ಟಿ) ಹಾಗೂ ದೆಹಲಿಯ ಡಿಒಎಸ್ ಘಟಕಕ್ಕೆ 1 ಸ್ಥಾನವನ್ನು ನಿಗದಿಪಡಿಸಲಾಗಿದೆ.


    ಶೈಕ್ಷಣಿಕ ಅರ್ಹತೆ: ಹಿಂದಿ ಅಥವಾ ಇಂಗ್ಲಿಷ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಹಿಂದಿ ಅಥವಾ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಅಥವಾ ಹಿಂದಿ/ ಇಂಗ್ಲಿಷ್ ಮಾಧ್ಯಮದಲ್ಲಿ ಅಧ್ಯಯನ ಮಾಡಿರಬೇಕು ಹಾಗೂ ಹಿಂದಿಯಿಂದ ಇಂಗ್ಲಿಷ್​ಗೆ ಅಥವಾ ಇಂಗ್ಲಿಷ್​ನಿಂದ ಹಿಂದಿಗೆ ಭಾಷಾಂತರ ಮಾಡುವ ಪ್ರಮಾಣ ಪತ್ರದ ಕೋರ್ಸ್ ಅಥವಾ ಡಿಪ್ಲೊಮಾ ಮಾಡಿರಬೇಕು ಅಥವಾ ಭಾಷಾಂತರದಲ್ಲಿ 2 ವರ್ಷದ ವೃತ್ತಿ ಅನುಭವ ಹೊಂದಿರಬೇಕು.

    ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಕೌಶಲ ಪರೀಕ್ಷೆ ನಡೆಸಿ ಅಂತಿಮ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳ ಮೇಲ್ ಐಡಿಗೆ ಪರೀಕ್ಷೆಗಳ ಮಾಹಿತಿ ನೀಡಲಾಗುವುದು. ಬೆಂಗಳೂರು ಹಾಗೂ ದೆಹಲಿಯಲ್ಲಿ ಪರೀಕ್ಷಾ ಕೇಂದ್ರ ಇರಲಿದೆ.

    ವಯೋಮಿತಿ: 20.11.2021ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

    ವೇತನ: ಪೇ ಮೆಟ್ರಿಕ್ಸ್ ಅನ್ವಯ 6ನೇ ಹಂತದಲ್ಲಿ ವೇತನ ನಿಗದಿಪಡಿಸಿದ್ದು, ಮಾಸಿಕ 35,400-1,12,400 ರೂ. ವೇತನ ಜತೆ, ಪ್ರಯಾಣ ಭತ್ಯೆ, ನಿಗದಿತ ಮನೆ ಬಾಡಿಗೆ ಭತ್ಯೆ, ರಜೆ ಭತ್ಯೆ, ಗುಂಪು ವಿಮಾ, ವೈದ್ಯಕೀಯ ಸೌಲಭ್ಯ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.

    ಅರ್ಜಿ ಶುಲ್ಕ: ಸಾಮಾನ್ಯವರ್ಗ ಹಾಗೂ ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 250ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 20.11.2021

    ಅಧಿಸೂಚನೆಗೆ: http://–https://bit.ly/3mAAD9q

    ಮಾಹಿತಿಗೆ: http://www.isro.gov.in

    ಅಂಬುಲೆನ್ಸ್‌ ಏಕೆ ಕೊಟ್ಟಿಲ್ಲ, ಕೂಡಲೇ ಏಕೆ ಕಳುಹಿಸಿಲ್ಲ… ಅಪ್ಪು ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೆ ಡಾ.ರಮಣ ಉತ್ತರಿಸಿದ್ದು ಹೀಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts