More

    ಇಂಜಿನಿಯರಿಂಗ್‌ ಪದವೀಧರರಿಗೆ ಐಐಟಿಯಲ್ಲಿ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಹಿಮಾಚಲಪ್ರದೇಶದ ಮಂಡಿಯಲ್ಲಿರುವ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್‌​ ಟೆಕ್ನಾಲಜಿಯಲ್ಲಿ (ಐಐಟಿ-ಎಂ) ಬೋಧಕೇತರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.
    ಒಟ್ಟು ಹುದ್ದೆಗಳು: 43

    ಐಐಟಿಯಲ್ಲಿ ಬೋಧಕೇತರ ಹುದ್ದೆಗಳು

    ಐಐಟಿಯ ಸ್ಕೂಲ್​ ಆಫ್‌​ ಇಂಜಿನಿಯರಿಂಗ್​ (ಎಸ್​ಇ), ಆಡಳಿತ ವಿಭಾಗ, ಸ್ಕೂಲ್​ ಆಫ್‌​ ಕಂಪ್ಯೂಟಿಂಗ್​ ಆ್ಯಂಡ್​ ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ (ಎಸ್​ಸಿಇಇ), ಅಡ್ವಾನ್ಸ್ಡ್​ ಮೆಟಿರಿಯಲ್ಸ್​ ರಿಸರ್ಚ್​ ಸೆಂಟರ್​ (ಎಎಂಆರ್​ಸಿ), ನ್ಯಾಷನಲ್​ ನಾಲೆಡ್ಜ್​ ನೆಟ್​ವರ್ಕ್​ (ಎನ್​ಕೆಎನ್​), ಕನ್​ಸ್ಟ್ರಕ್ಷನ್​ ವಿಂಗ್​, ಬಯಾಕ್ಸ್​ ಸೆಂಟರ್​, ಸಿ4ಡಿಎಫ್‌ಇಡಿ, ಸ್ಕೂಲ್​ ಆಫ್‌​ ಬೇಸಿಕ್​ ಸೈನ್ಸ್​ (ಎಸ್​ಬಿಎಸ್​) ವಿಭಾಗಗಳಲ್ಲಿ ಈ ಕೆಳಕಂಡ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು. ಈ ಹುದ್ದೆಗಳು 5 ವರ್ಷದ ಒಪ್ಪಂದಕ್ಕೆ ಒಳಪಟ್ಟಿವೆ. ಹಲವು ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸತಕ್ಕದ್ದು.

    ಹುದ್ದೆ ವಿವರ
    * ಟೆಕ್ನಿಕಲ್​ ಆಫೀಸರ್​ (ವರ್ಕ್​ಶಾಪ್​ ಸೂಪರಿಂಟೆಂಡೆಂಟ್​) – 1
    * ಸ್ಪೋರ್ಟ್ಸ್​ ಆಫೀಸರ್​ – 1
    * ಜೂನಿಯರ್​ ಟೆಕ್ನಿಕಲ್​ ಸೂಪರಿಂಟೆಂಡೆಂಟ್​ – 5
    * ಜೂನಿಯರ್​ ಸೂಪರಿಂಟೆಂಡೆಂಟ್​ – 6
    * ಜೂನಿಯರ್​ ಸೂಪರಿಂಟೆಂಡೆಂಟ್​ (ರಾಜ್​ಭಾಷಾ) – 1
    * ಜೂನಿಯರ್​ ಇಂಜಿನಿಯರ್​ (ಸಿವಿಲ್​) – 3
    * ಜೂನಿಯರ್​ ಲ್ಯಾಬೋರೇಟರಿ ಅಸಿಸ್ಟೆಂಟ್​ (ಟೆಕ್ನಿಕಲ್​) – 14
    * ಜೂನಿಯರ್​ ಅಸಿಸ್ಟೆಂಟ್​ – 12

    ವಿದ್ಯಾರ್ಹತೆ: ಮೆಕ್ಯಾನಿಕಲ್​/ ಪ್ರೊಡಕ್ಷನ್​ ಇಂಜಿನಿಯರಿಂಗ್​, ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಬಿಇ/ ಬಿ.ಟೆಕ್​, ಇಂಜಿನಿಯರಿಂಗ್​ ಡಿಪ್ಲೊಮಾ, ವಿಜ್ಞಾನದಲ್ಲಿ ಪದವಿ/ ಡಿಪ್ಲೊಮಾ, ಯಾವುದೇ ಪದವಿ, ದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದು, ಕಂಪ್ಯೂಟರ್​ ಜ್ಞಾನದ ಜತೆ ಇಂಗ್ಲಿಷ್​ ಜ್ಞಾನವೂ ಅವಶ್ಯ.

    ವಯೋಮಿತಿ: ಜೂನಿಯರ್​ ಲ್ಯಾಬೊರೇಟರಿ ಹಾಗೂ ಜೂನಿಯರ್​ ಅಸಿಸ್ಟೆಂಟ್​ಗೆ ಗರಿಷ್ಠ 30 ವರ್ಷ, ಟೆಕ್ನಿಕಲ್​ ಹಾಗೂ ಸ್ಪೋರ್ಟ್ಸ್​ ಆಫೀಸರ್​ಗೆ ಗರಿಷ್ಠ 40 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 35 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ವೇತನ: ಜೂನಿಯರ್​ ಅಸಿಸ್ಟೆಂಟ್​ಗೆ ಮಾಸಿಕ 21,700-69,100 ರೂ., ಜೂ. ಲ್ಯಾಬೊರೇಟರಿ ಅಸಿಸ್ಟೆಂಟ್​ಗೆ 25,500-81,100 ರೂ., ಟೆಕ್ನಿಕಲ್​ ಹಾಗೂ ಸ್ಪೋರ್ಟ್ಸ್​ ಆಫೀಸರ್​ಗೆ ಮಾಸಿಕ 56,100-1,77,500 ರೂ. ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ 35,400-1,12,400 ರೂ. ವೇತನ ನೀಡಲಾಗುವುದು.

    ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 17 ಸ್ಥಾನ, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 5, ಇತರ ಹಿಂದುಳಿದ ವರ್ಗಕ್ಕೆ 14, ಎಸ್ಸಿಗೆ 4, ಎಸ್ಟಿಗೆ 3 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ಅರ್ಜಿ ಶುಲ್ಕ: ಮೀಸಲಾತಿ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 100 ರೂ. ಶುಲ್ಕ ಪಾವತಿಸಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 4.6.2021
    ಅಧಿಸೂಚನೆಗೆ: https://bit.ly/2SFST4W
    ಮಾಹಿತಿಗೆ: http://www.iitmandi.ac.in

     

    ಪದವಿ ಯಾವುದೇ ಇರಲಿ… ಜಲ ಅಭಿವೃದ್ಧಿ ಸಂಸ್ಥೆಯಲ್ಲಿವೆ ಉದ್ಯೋಗಾವಕಾಶ: 62 ಹುದ್ದೆಗಳಿಗೆ ಆಹ್ವಾನ

    ವಿವಿಧ ಪದವೀಧರರಿಗೆ ಬ್ಯಾಂಕ್​ ನೋಟ್​ ಪ್ರೆಸ್​ನಲ್ಲಿ 135 ಹುದ್ದೆಗಳು: ಲಕ್ಷದವರೆಗೂ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts