More

    ಭಾರತದ ಗಡಿಯೊಳಕ್ಕೆ ಬಂದ ಪಾಕ್​ ಬಾಲಕಿಯರು- ವಶಕ್ಕೆ ಪಡೆದ ಸೇನೆ

    ಜಮ್ಮು: ಜಮ್ಮು ಹಾಗೂ ಕಾಶ್ಮೀರದ ಪೂಂಛ್​ ಸೆಕ್ಟರ್‌ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಇಬ್ಬರು ಬಾಲಕಿಯರು ಗಡಿ ನಿಯಂತ್ರಣ ರೇಖೆ (ಎಲ್ಒಸಿ)ಮೂಲಕ ಭಾರತದ ಕಡೆ ಬಂದಿದ್ದಾರೆ.

    ಆಕಸ್ಮಿಕವಾಗಿ ಗಡಿ ದಾಟಿ ಬಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಈ ಇಬ್ಬರು ಮಕ್ಕಳು ಸಹೋದರಿಯರಾಗಿದ್ದು ಭಾರತೀಯ ಸೇನೆ ವಶಕ್ಕೆ ಪಡೆದಿದೆ. ಕಾಶ್ಮೀರದ ಗಡಿ ಸಮೀಪದ ಕಹುತಾ ತೆಹ್ಸಿಲ್ ಅಬ್ಬಾಸ್ ಪುರ್ ಗ್ರಾಮದ 17 ವರ್ಷದ ಲೈಬಾ ಜಬೈರ್ ಮತ್ತು 13 ವರ್ಷದ ಸನಾ ಜಬೈರ್ ಎಂದು ಗುರುತಿಸಲಾಗಿದೆ.

    ನಿಯಂತ್ರಣ ರೇಖೆಯ ಉದ್ದಕ್ಕೂ ನಿಯೋಜಿಸಲಾಗಿರುವ ಭಾರತೀಯ ಸೇನೆಯ ಯೋಧರು, ಈ ಬಾಲಕಿಯರು ಗಡಿ ನಿಯತ್ರಣ ರೇಖೆ ದಾಟಿದ್ದನ್ನು ಗಮನಿಸಿ, ಅವರನ್ನು ವಶಕ್ಕೆ ಪಡೆದಿದ್ದಾರೆ.

    ಮಕ್ಕಳನ್ನು ಪಾಕಿಸ್ತಾನದಲ್ಲಿ ಹಸ್ತಾಂತರಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ತಿಳಿಸಿದ್ದಾರೆ.

    ಈ ಮಧ್ಯೆಯೇ, ಶ್ರೀನಗರದ ಹವಾಲ್ ಪ್ರದೇಶದಲ್ಲಿ ಪೊಲೀಸ್ ಮತ್ತು ಸಿಆರ್ ಪಿಎಫ್ ಪಡೆಯ ಮೇಲೆ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಬ್ಬ ಪೊಲೀಸ್ ಕಾನ್ಸ್​ಟೆಬಲ್​ ಹಾಗೂ ಸ್ಥಳೀಯ ನಿವಾಸಿ ಗಾಯಗೊಂಡಿದ್ದಾರೆ. ಇದೀಗ ಸ್ಥಳದಲ್ಲಿ ಉಗ್ರರಿಗಾಗಿ, ಭದ್ರತಾಪಡೆಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

    ಇಂದು ಇದ್ದೇನೆ… ನಾಳೆ ಗೊತ್ತಿಲ್ಲ… ಹುತಾತ್ಮ ಯೋಧನ ಕೊನೆ ಸಂದೇಶ ಸತ್ಯವಾಗಿಯೇ ಹೋಯ್ತು!

    ಮಾರ್ಚ್​ 31ರವರೆಗೂ 8ನೇ ತರಗತಿವರೆಗೆ ಶಾಲೆಯೂ ಇಲ್ಲ, ಪರೀಕ್ಷೆಯೂ ಇಲ್ಲ ಎಂದ ಸಿಎಂ ಚೌಹಾಣ್​

    ಡಿ.8ಕ್ಕೆ ಮತ್ತೊಮ್ಮೆ ಕರ್ನಾಟಕವೂ ಬಂದ್​! ರೈತ ಸಂಘಟನೆಗಳಿಂದ ಕರೆ

    ಇಲ್ಲಿ ವರ ಅವನದ್ದೇ ಮದ್ವೆಗೆ ಹೋಗೋ ಹಾಗಿಲ್ಲ-ವಧುವಿಗೆ ಹೆಣ್ಣೇ ತಾಳಿ ಕಟ್ಟೋದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts