More

    ಮಾರ್ಚ್​ 31ರವರೆಗೂ 8ನೇ ತರಗತಿವರೆಗೆ ಶಾಲೆಯೂ ಇಲ್ಲ, ಪರೀಕ್ಷೆಯೂ ಇಲ್ಲ ಎಂದ ಸಿಎಂ ಚೌಹಾಣ್​

    ಭೋಪಾಲ್​: ಶಾಲೆ ಯಾವಾಗ ಪ್ರಾರಂಭವಾಗುತ್ತದೆ, ಆರಂಭ ಆಗುತ್ತದೆಯೋ, ಇಲ್ಲವೋ. ಈ ತಿಂಗಳು… ಮುಂದಿನ ತಿಂಗಳು… ಮುಂದಿನ ವರ್ಷ… ಹೀಗೆ ಮಕ್ಕಳಲ್ಲಿ, ಶಿಕ್ಷಕರಲ್ಲಿ, ಪಾಲಕರಲ್ಲಿ ಅಷ್ಟೇ ಏಕೆ ಖುದ್ದು ಸರ್ಕಾರಗಳಲ್ಲಿಯೇ ಗೊಂದಲವಿದೆ.

    ಕರೊನಾ ವೈರಸ್​ ಹಿನ್ನೆಲೆಯಲ್ಲಿ ಯಾವ ರಾಜ್ಯ ಸರ್ಕಾರಗಳು ಕೂಡ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ತುಂಬಾ ಕಷ್ಟವಾಗುತ್ತಿದೆ. ಇನ್ನೇನು ಶಾಲೆ ತೆರೆಯಲು ನಿರ್ಧರಿಸುತ್ತಿದ್ದಂತೆಯೇ ಕರೊನಾ 2ನೇ ಅಲೆ, 3ನೇ ಅಲೆ ಎದ್ದು ಮತ್ತೆ ನಿರ್ಧಾರ ಬದಲಿಸಬೇಕಾದ ವಾತಾವರಣವಿದೆ.

    ಈ ನಡುವೆಯೇ ಸದ್ಯಕ್ಕಂತೂ ಮಧ್ಯಪ್ರದೇಶ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡೇ ಬಿಟ್ಟಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಕುರಿತು ಮಾಹಿತಿ ನೀಡಿದ್ದು, ಮಧ್ಯಪ್ರದೇಶದಲ್ಲಿ 1 ರಿಂದ 8ನೇ ತರಗತಿಯವರೆಗಿನ ಶಾಲೆಗಳನ್ನು 2021ರ ಮಾರ್ಚ್ 31 ರವರೆಗೂ ತೆರೆಯುವುದೇ ಇಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: 80 ವರ್ಷದ ಅತ್ತೆಯನ್ನು ಹೊರದಬ್ಬಿ ಚಳಿಯಲ್ಲಿ ಮಲಗಿಸಿದ ಸೊಸೆ- ವಿಡಿಯೋ ವೈರಲ್

    1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಪರೀಕ್ಷೆಗಳನ್ನು ಎದುರಿಸಬೇಕಾಗಿಲ್ಲ. ಪ್ರೊಜೆಕ್ಟ್ ವರ್ಕ್​ಗಳ ಆಧಾರದ ಮೇಲೆ ಮೌಲ್ಯಮಾಪನ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

    ಶಾಲಾ ಆಡಳಿತ ಮಂಡಳಿಯೊಂದಿಗಿನ ಸಭೆಯ ಬಳಿಕ ಈ ತೀರ್ಮಾನ ಹೊರಡಿಸಲಾಗಿದ್ದು, 2021ರ ಮಾರ್ಚ್ 31ರವರೆಗೂ ಯಾವುದೇ ದೈನಂದಿನ ತರಗತಿಗಳನ್ನು 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾಗುವುದಿಲ್ಲ ಎಂಬ ನಿರ್ಣಯಕ್ಕೆ ಬರಲಾಗಿದೆ.

    9 ಮತ್ತು 11ನೇ ತರಗತಿಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಮ್ಮೆ ಅಥವಾ 2 ಬಾರಿಗೆ ತರಗತಿಗೆ ಹಾಜರಾಗುವಂತೆ ಆದೇಶ ಹೊರಡಿಸಲಾಗಿದೆ. ಬೋರ್ಡ್ ಪರೀಕ್ಷೆ ಕೂಡ ನಡೆಯಲಿದೆ. ಶೀಘ್ರವಾಗಿ 10 ಮತ್ತು 12ನೇಯ ತರಗತಿಗಳನ್ನು ಆರಂಭಿಸಲಾಗುವುದು. ಆದರೇ ಕೋವಿಡ್ ಮಾರ್ಗಸೂಚಿಗಳನ್ನು ಮತ್ತು ಸಾಮಾಜಿಕ ಅಂತರಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

    ಡಿ.8ಕ್ಕೆ ಮತ್ತೊಮ್ಮೆ ಕರ್ನಾಟಕವೂ ಬಂದ್​! ರೈತ ಸಂಘಟನೆಗಳಿಂದ ಕರೆ

    ಬಾಹ್ಯಾಕಾಶದ ರಹಸ್ಯ ಭೇದಿಸುತ್ತಿದ್ದ 900 ಟನ್ ‘ಅರೆಸಿಬೊ’ ಧರೆಗೆ! ಸಿಸಿಟಿವಿಯಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts