More

    ನಾನು ಚುನಾವಣೆಯಲ್ಲಿ ಸೋತರೆ ದೇಶಬಿಟ್ಟು ಹೋಗಬೇಕಾಗತ್ತೆ- ಟ್ರಂಪ್​

    ವಾಷಿಂಗ್ಟನ್‌: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಭರಾಟೆ ಶುರುವಾಗಿದೆ. ಇನ್ನೇನು ಚುನಾವಣೆ 15 ದಿನ ಇದ್ದು, ಮತದಾರರನ್ನು ಓಲೈಕೆ ಮಾಡಲು ಕೊನೆಕ್ಷಣದ ಕಸರತ್ತು ನಡೆಯುತ್ತಿವೆ.

    ಈ ನಡುವೆಯೇ, ಫ್ಲೋರಿಡಾ ಹಾಗೂ ಜಾರ್ಜಿಯಾದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಿದರೆ ನೀವು ನನ್ನನ್ನು ಮತ್ತೆ ನೋಡಬಹುದು, ಅಕಸ್ಮಾತ್​ ನಾನು ಸೋಲನುಭವಿಸಿದರೆ ಈ ದೇಶವನ್ನೇ ತೊರೆಯಬೇಕಾಗುತ್ತದೆ ಎಂದು ಭಾವುಕರಾಗಿ ನುಡಿದಿದ್ದಾರೆ.

    “ಡೆಮಾಕ್ರಾಟ್‌ ಅಭ್ಯರ್ಥಿ ಜೋ ಬಿಡೆನ್‌ ಅವರೇನಾದರೂ ಗೆದ್ದರೆ, ದೇಶದಲ್ಲಿ ಕಮ್ಯೂನಿಸಂ ಮತ್ತು ಕ್ರಿಮಿನಲ್‌ ವಲಸಿಗರ ಪ್ರವಾಹವೇ ಉಂಟಾಗಲಿದೆ. ಆದ್ದರಿಂದ ನನಗೆ ಮತಹಾಕಿ. ಒಂದು ವೇಲೆ ನಾನೇನಾದರೂ ಈ ಚುನಾವಣೆಯಲ್ಲಿ ಸೋತರೆ ಏನಾಗಬಹುದು ಎಂದು ಯೋಚಿಸಿದ್ದೀರಾ? ನಾನು ಈ ದೇಶ ಬಿಟ್ಟೇ ಹೋಗಬೇಕಾಗಬಹುದು’ ಎಂದು ಟ್ರಂಪ್‌ ಮತದಾರರಿಗೆ ಹೇಳಿದ್ದಾರೆ.

    ಇದನ್ನೂ ಓದಿ: ‘ನಡು ರಸ್ತೆಯಲ್ಲಿ ಕಂಗನಾಳನ್ನು ಅತ್ಯಾಚಾರ ಮಾಡಬೇಕು’ ಎಂದ ವಕೀಲ; ಮುಂದೆ ನಡೆದಿದ್ದೇ ಬೇರೆ!!

    ನಾನು ಅಂದುಕೊಂಡಂತೆ ಯಾವುದು ನಡೆಯುತ್ತಿಲ್ಲ ಎಂಬುದನ್ನು ಒಪ್ಪಿಕೊಂಡ ಡೊನಾಲ್ಡ್​ ಟ್ರಂಪ್, “ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಾಜಕೀಯ ಇತಿಹಾಸದಲ್ಲಿ ಒಬ್ಬ ಕೆಟ್ಟ ಅಭ್ಯರ್ಥಿಯ ವಿರುದ್ಧ ಸ್ಫರ್ಧಿಸಿರುವುದು ನನ್ನ ಮೇಲೆ ಒತ್ತಡ ಉಂಟುಮಾಡಿದೆ. ಡೊನಾಲ್ಡ್‌ ಟ್ರಂಪ್‌ ಯಾರೆಂದು ನಿಮಗೆಲ್ಲರಿಗೂ ಗೊತ್ತು. ಈಗ ನೀವು ಯಾರೆಂದು ತೋರಿಸುವ ಸಮಯ ಬಂದಿದೆ. ನಾವು ಭಯದ ಬದಲಿಗೆ ಭರವಸೆಯನ್ನೂ, ವಿಭಜನೆಯ ಬದಲಿಗೆ ಏಕತೆಯನ್ನೂ, ಕಲ್ಪನೆಯ ಬದಲಿಗೆ ವಿಜ್ಞಾನವನ್ನೂ, ಸುಳ್ಳುಗಳ ಬದಲಿಗೆ ಸತ್ಯವನ್ನು ಆಯ್ಕೆ ಮಾಡುವವರು’ ಎಂದು ಹೇಳಿದ್ದಾರೆ.

    ಟ್ರಂಪ್ ಇಂತಹ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಬಾರಿ ಚುನಾವಣಾ ಪ್ರಚಾರದ ವೇಳೆ ಇದೇ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎನ್ನಲಾಗಿದೆ.

    ಇದಕ್ಕೆ ಜೋ ಬಿಡೆನ್​ ಅವರ ಟ್ವಿಟರ್​ನಲ್ಲಿ ನಿಜವಾಗಿಯೂ ಹೀಗೆ ಮಾಡುತ್ತೀರಾ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.

    ಈ ದೀಪಾವಳಿ ಚೀನಾದಲ್ಲಿ ಕತ್ತಲೋ ಕತ್ತಲು… ₹40 ಸಾವಿರ ಕೋಟಿ ಕಾಣದೇ ಕಂಗಾಲು!

    ಇವಳು ನನ್ನ ಮುದ್ದು ಮಗಳೇ… ಆದರೆ ಸತ್ತಿದ್ದಾಳೆ… ನನಗೆ ಬೇಡ… ಭಯಾನಕ ಕೊಲೆಯ​ ಸುತ್ತ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts