More

    ಬೈಡೆನ್​ ಗದ್ದುಗೆ ಏರುತ್ತಿದ್ದಂತೆಯೇ ಚಿಗುರಿದ ಚೀನಾ: 28 ಅಧಿಕಾರಿಗಳಿಗೆ ನಿರ್ಬಂಧ

    ಬೀಜಿಂಗ್: ಜೋಸೆಫ್​ ಬೈಡೆನ್​ ಅವರು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾಗಲೇ ಅವರ ವಿರೋಧಿಗಳು ಹೇಳುತ್ತಿದ್ದ ಒಂದು ಪ್ರಮುಖ ಮಾತೆಂದರೆ, ಅವರು ಚೀನಾದ ಪರವಾಗಿದ್ದಾರೆ ಎನ್ನುವುದು. ಅದರಿಂದಲೇ ಅವರಿಗೆ ಪ್ರಬಲ ವೈರಿಗಳೂ ಹುಟ್ಟಿಕೊಂಡಿದ್ದಿದೆ. ಇದೀಗ ಎಲ್ಲಾ ಮುಳ್ಳುಹಾದಿಗಳನ್ನು ಬದಿಗೆ ಸರಿಸಿ ನಿನ್ನೆ ಅವರು ಅಧ್ಯಕ್ಷ ಸ್ಥಾನದ ಗದ್ದುಗೆ ಏರಿದ್ದಾರೆ.

    ಅವರು ಇತ್ತ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ, ಅತ್ತ ಚೀನಾ ಚಿಗುರಿದೆ. ಕುತಂತ್ರಿ ಚೀನಾದ ವಿರುದ್ಧ ಕಣ್ಣಿಟ್ಟಿದ್ದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಚೀನಾ ಸರ್ಕಾರಕ್ಕೆ ಹಲವಾರು ನಿರ್ಬಂಧಗಳನ್ನು ವಿಧಿಸಿದ್ದರು.

    ಆದರೆ ಅವರು ಅತ್ತ ಹುದ್ದೆಯಿಂದ ಕೆಳಕ್ಕೆ ಇಳಿಯುತ್ತಿದ್ದಂತೆಯೇ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಮೈಕ್ ಪೊಂಪಿಯೋ ಮತ್ತು ಇತರ 27 ಮಂದಿ ಉನ್ನತ ಅಧಿಕಾರಿಗಳ ಮೇಲೆ ಚೀನಾ ಸರ್ಕಾರ ನಿರ್ಬಂಧ ವಿಧಿಸಿದೆ.
    ನೆರೆ ರಾಷ್ಟ್ರಗಳ ಮೇಲೆ ಕತ್ತಿಮಸೆಯುತ್ತಿರುವ ಚೀನಾದ ವಿರುದ್ಧ ಕೆಲವು ಅಮೆರಿಕದ ಅಧಿಕಾರಿಗಳು ಟ್ರಂಪ್​ ಅವಧಿಯಲ್ಲಿ ಸರಣಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಆದ್ದರಿಂದ ಎಲ್ಲರನ್ನೂ ಈಗ ಚೀನಾ ನಿರ್ಬಂಧಿಸುವ ಮೂಲಕ ಹೆಮ್ಮೆಯಿಂದ ಮೆರೆಯುತ್ತಿದೆ.

    ವಾಣಿಜ್ಯ ಮತ್ತು ಉತ್ಪಾದನಾ ಪಾಲಿಸಿ ಕಚೇರಿಯ ಮಾಜಿ ನಿರ್ದೇಶಕ ಪೀಟರ್ ನವಾರ್ರೋ, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ರೋಬರ್ಟ್ ಓಬ್ರೈಯನ್, ಮಾಜಿ ಅಸಿಸ್ಟೆಂಟ್ ಸೆಕ್ರಟರೊ ಡೇವಿಡ್ ಆರ್ ಸ್ಟಿಲ್ ವೆಲ್, ಮಾಜಿ ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ಮ್ಯಾಥ್ಯೂ ಪೊಟ್ನಿಗರ್, ಹೆಲ್ತ್ ಆಯಂಡ್ ಹ್ಯೂಮನ್ ಸರ್ವೀಸ್ ನ ಮಾಜಿ ಕಾರ್ಯದರ್ಶಿ ಅಲೆಕ್ಸ್ ಅಝರ್, ಆರ್ಥಿಕಾಭಿವೃದ್ದಿ ಮಾಜಿ ಕಾರ್ಯದರ್ಶಿ ಕೈಥ್ ಜೆ ಕ್ರಾಚ್, ಕೆಲ್ಲಿ ಕ್ರಾಫ್ಟ್, ಜಾನ್ ಬೋಲ್ಟನ್, ಸ್ಟೀಫನ್ ಬಾನ್ನೊನ್ ಮೇಲೆ ನಿರ್ಬಂಧ ವಿಧಿಸಿರುವುದಾಗಿ ಚೀನಾ ಹೇಳಿದೆ.

    ಈ ಎಲ್ಲ ಅಧಿಕಾರಿಗಳಿಗೆ ಸಂಬಂಧಪಟ್ಟ ಕಂಪೆನಿಗಳು, ಸಹ ಸಂಸ್ಥೆಗಳು ಕೂಡಾ ಚೀನಾದಲ್ಲಿ ವ್ಯವಹಾರ ನಡೆಸುವುದಕ್ಕೆ ನಿರ್ಬಂಧ ವಿಧಿಸಿರುವುದಾಗಿ ತಿಳಿಸಿದೆ.

    ಬೈಡೆನ್​ಗೆ ಕೊನೆಯ ಪತ್ರ ಬರೆದ ಟ್ರಂಪ್​: ಇದು ಸಿಕ್ರೇಟ್​- ನಾನು ಹೇಳಲ್ಲ ಎಂದ ನೂತನ ಅಧ್ಯಕ್ಷ

    ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಇನ್ನು ಅಮೆರಿಕದಲ್ಲಿ ಸುಲಭ ಪ್ರವೇಶ- ಇದು ಬೈಡೆನ್​ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts