More

    ಬೈಡೆನ್​ಗೆ ಕೊನೆಯ ಪತ್ರ ಬರೆದ ಟ್ರಂಪ್​: ಇದು ಸಿಕ್ರೇಟ್​- ನಾನು ಹೇಳಲ್ಲ ಎಂದ ನೂತನ ಅಧ್ಯಕ್ಷ

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್​ ಟ್ರಂಪ್​ ಅಂತೂ ಇಂತೂ ಹುದ್ದೆ ತ್ಯಜಿಸಿ, ಜೋ ಬೈಡೆನ್​ ಅವರ ಹಾದಿಯನ್ನು ಸುಗಮಗೊಳಿಸಿದ್ದಾರೆ.

    ನಿರ್ಗಮಿಸುವ ಅಧ್ಯಕ್ಷರು ತಮ್ಮ ಉತ್ತರಾಧಿಕಾರಿಗೆ ಓವಲ್ ಕಚೇರಿಯ ರೆಸೊಲ್ಯೂಟ್ ಮೇಜಿನಲ್ಲಿ ಪತ್ರ ಬರೆದಿಟ್ಟು ಹೋಗುವುದು ಅಮೆರಿಕದಲ್ಲಿ ತಲೆತಲಾಂತರಗಳಿಂದ ಬಂದಿರುವ ವಾಡಿಕೆಯಾಗಿದೆ. ಅದರಂತೆಯೇ ಹೊಸ ಅಧ್ಯಕ್ಷರು ಪ್ರಮಾಣ ವಚನ ಸ್ವೀಕಾರ ಮಾಡುವ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷರು ಬರುವುದು ಮಾಮೂಲು.

    ಆದರೆ ನಿನ್ನೆ ಜೋ ಬೈಡೆನ್​ ಅವರು ಅಧಿಕಾರ ಸ್ವೀಕಾರ ಮಾಡುವ ಸಂದರ್ಭದಲ್ಲಿ, ನಿರ್ಗಮಿತ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕಾರ್ಯಕ್ರಮದಿಂದ ದೂರವೇ ಉಳಿದಿದ್ದರು. ಗೈರು ಹಾಜರಿಯಾಗುವ ಮೂಲಕ ಅಮೆರಿಕದ ಹಲವು ಅಧ್ಯಕ್ಷೀಯ ಸಂಪ್ರದಾಯಗಳನ್ನು ಮುರಿದಿದ್ದಾರೆ. ಔಪಚಾರಿಕವಾಗಿ ನೂತನ ಅಧ್ಯಕ್ಷರಿಗೆ ಅಭಿನಂದನೆ ಕೂಡ ಮಾಡದೇ ಸಂಪ್ರದಾಯ ಉಲ್ಲಂಘನೆ ಮಾಡಿದ್ದಾರೆ.

    ಇದರ ಹೊರತಾಗಿಯೂ, ಒಂದೇ ಒಂದು ಸಂಪ್ರದಾಯ ಉಳಿಸಿಕೊಂಡು, ಶ್ವೇತಭವನ ಬಿಟ್ಟು ಹೋಗುವ ಮುನ್ನ ಹೊಸ ಅಧ್ಯಕ್ಷ ಜೋಸೆಫ್​ ಬೈಡೆನ್​ ಅವರಿಗೆ ‘ಉದಾತ್ತ ಪತ್ರ’ ಬರೆದಿದ್ದಾರೆ. ಈ ಕುರಿತು ಖುದ್ದು ಬೈಡೆನ್​ ಅವರೇ ಬಹಿರಂಗವಾಗಿ ಮಾಹಿತಿ ನೀಡಿದ್ದಾರೆ.

    ಡೊನಾಲ್ಡ್ ಟ್ರಂಪ್ ಬಹಳ ಉದಾತ್ತ ಪತ್ರವನ್ನು ಬರೆದಿಟ್ಟು ಹೋಗಿದ್ದಾರೆ. ಖಾಸಗಿಯಾದ ಕಾರಣ ಅದರಲ್ಲಿರುವ ವಿವರಗಳ ಬಗ್ಗೆ ಮಾಹಿತಿ ನೀಡಲು ಬಯಸುವುದಿಲ್ಲ. ಈ ಬಗ್ಗೆ ಅವರ ಜತೆ ಮಾತನಾಡುವವರೆಗೂ ನಾನು ಚರ್ಚಿಸುವುದಿಲ್ಲ ಎಂದು ಬೈಡೆನ್​ ಪತ್ರಕರ್ತರ ಎದುರು ತಿಳಿಸಿದ್ದಾರೆ.

    ಪತ್ರದ ಮಾಹಿತಿಯನ್ನು ಬೈಡೆನ್​ ನೀಡದಿದ್ದರೂ ಕಮೆಂಟಿಗರು ಮಾತ್ರ ಪತ್ರದಲ್ಲಿ ಏನಿದೆ ಎಂಬ ಬಗ್ಗೆ ಸಾಲುಸಾಲಾಗಿ ಕಮೆಂಟ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ನೋಡಿದರೆ ನಿಜವಾಗಿಯೂ ಟ್ರಂಪ್​ ಅವರೇ ಪತ್ರ ಬರೆದಿರಬಹುದು ಎಂದು ಎನ್ನುಕೊಳ್ಳುವಷ್ಟು ತಮ್ಮ ಯೋಚನಾ ಲಹರಿಯನ್ನು ಹರಿಸಿದ್ದಾರೆ.

    ಜೋ ಬೈಡೆನ್​ ನನ್ನನ್ನು ಕ್ಷಮಿಸಿಬಿಡು ಎಂದು ಒಬ್ಬರು ಬರೆದಿದ್ದರೆ, ನಿನ್ನ ಮೇಲೆ ನಾನು ಕೋಪಗೊಂಡಿದ್ದೇನೆ, ಇವತ್ತು ಮತ್ತು ನಾಳೆ ನಾನು ಮಾತನಾಡುವುದಿಲ್ಲ ಎಂದು ಇನ್ನೊಬ್ಬರು ಕಮೆಂಟ್​ ಹಾಕಿದ್ದಾರೆ. ಇಬ್ಬರು ಬೈಡೆನ್​ ನನ್ನನ್ನು ಕ್ಷಮಿಸು, ನನಗೆ ಬರೆಯಲು- ಓದಲು ಬರುವುದಿಲ್ಲ ಎಂದು ಬರೆದಿದ್ದಾರೆ. ಇದರ ಜತೆಗೆ, ಬೈಡೆನ್​ ಅವರ ಹೆಸರು ಕೆಲವು ಮಹಿಳೆಯರ ಜತೆ ಹಿಂದೆ ಕೇಳಿಬಂದಿರುವ ಆರೋಪ ಇರುವ ಕಾರಣ, ಅತ್ಯಂತ ಅಶ್ಲೀಲ ಎನ್ನುವ ಕಮೆಂಟ್​ ಕೂಡ ಹಾಕಿದ್ದು, ಟ್ರಂಪ್​ ಇದನ್ನೇ ಬರೆದಿರುವುದಾಗಿ ಹೇಳಿದ್ದಾರೆ.

    ಒಟ್ಟಿನಲ್ಲಿ, ಟ್ರಂಪ್​ ಪತ್ರದಲ್ಲಿ ಏನು ಬರೆದಿದ್ದಾರೆ ಎನ್ನುವುದನ್ನು ಇನ್ನಷ್ಟೇ ಕಾದುನೋಡಬೇಕಿದೆ.

    ಎರಡನೇ ಹಂತದಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಕರೊನಾ ಲಸಿಕೆ

    VIDEO: ವಿಐಪಿ ಕಾರ್​ ಬಿಟ್ಟು ಆಟೋದಲ್ಲಿ ಪಾಕ್​ ಪ್ರಧಾನಿ​? ಹೀಗೇಕಾಯ್ತೆಂದು ಪ್ರಶ್ನಿಸ್ತಿದ್ದಾರೆ ಜನ!

    ವೀರ್ಯಾಣು ಕೊರತೆಯಿಂದ ಮಕ್ಕಳಾಗದಿದ್ದರೆ ಪತ್ನಿಗೆ ಇನ್ನೊಂದು ಮದುವೆಯಾಗಲು ಕೊಡುವಿರಾ?

    ನಶೆ ತಾರೆಗೆ ಅಂತೂ ಸಿಕ್ತು ಬೇಲ್​: 140 ದಿನಗಳ ಜೈಲುವಾಸದಿಂದ ಹೊರಬರಲಿರುವ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts