More

    ತಟ್ಟೆ- ಲೋಟ ಬಡಿಯುತ್ತ ಬೀದಿಗಿಳಿದ ಮಕ್ಕಳು: ಪಾಲಕರು ಪೊಲೀಸ್​ ಠಾಣೆಯಲ್ಲಿ; ಕಂಗೆಟ್ಟ ಮಕ್ಕಳು ರಸ್ತೆಯಲ್ಲಿ!

    ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ನೌಕರರ ಮುಷ್ಕರ ತೀವ್ರಗೊಂಡಿದೆ.

    ರಾಜ್ಯಾದ್ಯಂತ ನೌಕರರು ಮತ್ತು ಅವರ ಕುಟುಂಬದವರಿಂದ ತಟ್ಟೆ-ಲೋಟ ಹಿಡಿದು ಬೀದಿಗೆ ಇಳಿದಿದ್ದಾರೆ. ರಾಜ್ಯದ ತಾಲೂಕು ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ ಕುಟುಂಬಸ್ಥರು.

    ಸಾರಿಗೆ ನೌಕರರು ಮತ್ತು ಕುಟುಂಬದವರು ಬೆಂಗಳೂರಿನಲ್ಲಿ ಮಕ್ಕಳ ಸಹಿತ ಪ್ರತಿಭಟನೆಗೆ ಆಗಮಿಸಿದ ಇದೀಗ ಪೇಚಿಗೆ ಸಿಲುಕಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ತಲುಪುವುದಕ್ಕೆ ಮುನ್ನ ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರೊನಾ ಸೋಂಕು ಭೀತಿಯಿಂದ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಅದರ ನಡುವೆ ಪ್ರತಿಭಟನೆ ನಡೆಸಿದ್ದಕ್ಕೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಾಲಕರನ್ನು ವಶಕ್ಕೆ ಪಡೆದ ನಂತರ ಏನು ಮಾಡಬೇಕೆಂದು ತಿಳಿಯದೆ ರಸ್ತೆ ಬದಿ ಮಕ್ಕಳು ಅಳುತ್ತಾ ನಿಂತಿರುವ ದೃಶ್ಯ ಕಂಡುಬಂತು. ಅವರನ್ನು ಪೊಲೀಸರು ಸಮಾಧಾನ ಪಡಿಸಿ ತಿಳಿಹೇಳಿದ್ದಾರೆ.

    ಸಾರಿಗೆ ನೌಕರರ ಯುಗಾದಿ ಸಂಭ್ರಮಕ್ಕೆ ಕತ್ತರಿ? ನಾಳೆಯಿಂದ ಕೆಲಸಕ್ಕೆ ಬಂದರೆ ಬೆಲ್ಲ… ಇಲ್ಲದಿದ್ದರೆ ಬೇವು!

    ಬಿಜೆಪಿಯವ್ರು ದುಡ್ಡು ಕೊಟ್ರೂ ತಗೊಳಿ, ಮಹಿಳೆಯರೇ ಕೈಒಡ್ಡಿ… ಆದ್ರೆ ವೋಟ್​ ಮಾತ್ರ ನಮ್ಗೆ ಹಾಕಿ… ಎಂದ ಅಧ್ಯಕ್ಷೆ!

    ಪತ್ನಿಗೆ ಕೋಪ ಬಂದಾಗ ಒದೀತಾಳೆ, ಸೌಟಿನಿಂದ ಹೊಡೀತಾಳೆ, ಸಂಶಯ ಪಿಶಾಚಿ ಬೇರೆ- ನಾ ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts