More

    ಸರ್ಕಾರಿ ಆಸ್ಪತ್ರೆ ಬಂದ್ ಮಾಡಿ ಮುಷ್ಕರ

    ಅಥಣಿ: ಅಪಘಾತ ಪ್ರಕರಣದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ಸರಿಯಾಗಿ ಆರೈಕೆ ಮಾಡಲಿಲ್ಲ ಎನ್ನುವ ಕಾರಣಕ್ಕೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಅಥಣಿ ಸರ್ಕಾರಿ ವೈದ್ಯರು ಸೇರಿ 200 ಸಿಬ್ಬಂದಿ ಆಸ್ಪತ್ರೆ ಬಂದ್ ಮಾಡಿ ಬುಧವಾರ ಪ್ರತಿಭಟಿಸಿದರು.

    ತಾಲೂಕು ಸರ್ಕಾರಿ ಆಸ್ಪತ್ರೆ ಬೆಳಗ್ಗೆ 8 ಗಂಟೆಯಿಂದ ಬಂದ್ ಮಾಡಿ ವೈದ್ಯಾಧಿಕಾರಿಗಳು, ಸಿಬ್ಬಂದಿ, ಮತ್ತು ಆಶಾ ಕಾರ್ಯಕರ್ತರು ಆರೋಪಿ ಬಂಧಿಸಲು ಒತ್ತಾಯಿಸಿದರು. ರಸ್ತೆ ಅಪಘಾತದಲ್ಲಿ ಗಾಯಗೊಂಡು ಅಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಮಂಗಳವಾರ ದಾಖಲಾಗಿದ್ದ ತೀರ್ಥ ಗ್ರಾಮದ ಶ್ರೀಧರ ಸುರೇಶ ಕಾಂಬಳೆ ಅವರನ್ನು ವೈದ್ಯರು ಉಪಚರಿಸುತ್ತಿದ್ದ ವೇಳೆ ಬೇವನೂರಿನ ದಯಾನಂದ ವಾಘಮೋರೆ, ಶುಶ್ರೂಷ ಅಧಿಕಾರಿ ಬಸವರಾಜ ಧೂಳಪ್ಪನವರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ ಮಾತನಾಡಿ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ ಹಾಗೂ ಎಲ್ಲ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ವಾಣಿ ಯು. ಹಾಗೂ ಡಿವೈಎಸ್‌ಪಿ ಶ್ರೀಪಾದ ಜಲ್ದೆ ಅವರಿಗೆ ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದರು.

    ತಾಲೂಕು ವೈದ್ಯಾಧಿಕಾರಿ ಬಸನಗೌಡ ಕಾಗೆ, ಡಾ.ಸಿ.ಎಸ್.ಪಾಟೀಲ, ಡಾ.ಎಚ್.ಬಿ. ಕಲಮಡಿ, ಡಾ.ಸಂಜು ಗುಂಜಿಗಾಂವಿ, ಡಾ. ಗುರುಸಿದ್ದಪ್ಪ, ಡಾ.ಅವಟಿ, ಡಾ.ಮಲ್ಲಿಕಾರ್ಜುನ ಹಂಜಿ, ಡಾ.ಎ.ಎ.ಪಾಂಗಿ, ಡಾ.ರವಿ ಚೌಗಲಾ, ಡಾ.ರಮೇಶ ಗುಳ್ಳ, ಸಿಬ್ಬಂದಿ ಪ್ರಕಾಶ ನರಹಟ್ಟಿ, ರಫೀಕ್ ಮುಜಾವರ್, ಅಡವಯ್ಯ ಹಿರೇಮಠ, ಆಶಾ ಕಾರ್ಯಕರ್ತೆ ಅಮತಾ ಡಂಗಿ, ಎಸ್.ಬಿ.ಕಾಡಮಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts