More

    ವಜಾಗೊಂಡ ಸಾರಿಗೆ ನೌಕರರ ಮರು ನೇಮಕಕ್ಕೆ ಚಾಲನೆ- 700 ಸಿಬ್ಬಂದಿ ಮೊಗದಲ್ಲಿ ನಗು

    ಬೆಂಗಳೂರು: ಪ್ರತಿಭಟನೆ ವೇಳೆ ವಜಾ ಆಗಿದ್ದ ನೌಕರರ ಮರು ನೇಮಕಾತಿಗೆ ಚಾಲನೆ ನೀಡಲಾಗಿದೆ. ಈಗ 100 ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
    1610 ಸಿಬ್ಬಂದಿ ಮುಷ್ಕರದಿಂದ ಕೆಲಸ ಕಳೆದುಕೊಂಡಿದ್ದರು. ಮುಖ್ಯಮಂತ್ರಿ ಅಣತಿ ಮೇರೆಗೆ ಇದೀಗ ಮರು ನೇಮಕಾತಿ ಆಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಮುಷ್ಕರದಿಂದ ರಾಜಕೀಯ ಪ್ರತಿನಿಧಿಗಳು ಲಾಭ ಪಡೆದುಕೊಳ್ಳುತ್ತಾರೆ. ಒಮ್ಮೆ ಮುಷ್ಕರ ಆದರೆ ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಮುಷ್ಕರಕ್ಕೆ ಹೋಗುವ ಮುನ್ನ ಸರ್ಕಾರದ ಜತೆ ಚರ್ಚಿಸಬೇಕು ಎಂದರು. 1520 ಸಿಬ್ಬಂದಿ ಮರು ನೇಮಕ ಮಾಡುವ ಕೆಲಸ ಮುಂದೆ ಆಗಲಿದೆ. ಕಾನೂನಲ್ಲಿ ಅವಕಾಶ ಇಲ್ಲದಿದ್ದರೂ ಮರು ನೇಮಕ ಮಾಡಿಕೊಳ್ಳಲಾಗುತ್ತಿದೆ. ಕಾಯಂ ನೌಕರ ಅಲ್ಲದಿದ್ದರೂ ಮರು ನೇಮಕ ಮಾಡುವ ಕೆಲಸ ನಡೆದಿದೆ ಎಂದು ತಿಳಿಸಿದರು.

    ಲೋಕ್‌ ಅದಾಲತ್ ಮಾಡುವ ಮೂಲಕ 100 ಜನರ ಮರು ನೇಮಕಾತಿ ಮಾಡಲಾಗಿದೆ. ಕಾಂಪ್ರಮೈಸ್ ಪಿಟಿಷನ್ ಮೂಲಕ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಬಾರದು ಎಂಬ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಷರತ್ತಿನ ಆಧಾರದ ಮೇಲೆ ಮರು ನೇಮಕಾತಿ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಭಟನೆ ಆದ್ರೆ ಮತ್ತೆ ವಜಾ ಮಾಡಲಾಗುವುದು ಎಂದು ಎಚ್ಚರಿಸಿದರು.

    ಮುಂದಿನ ದಿನಗಳಲ್ಲಿ ತಿಂಗಳ ಅಂತ್ಯಕ್ಕೆ ವೇತನ ನೀಡುವ ಕೆಲಸ ಆಗಲಿದೆ. ಇಂದು 100, ನಾಳೆಯ ಮೆಗಾ ಅದಾಲತ್ ನಲ್ಲಿ 200 ಮಂದಿಗೆ ಮರು ನೇಮಕಾತಿ ಆಗಲಿದೆ. ತಿಂಗಳಾಂತ್ಯಕ್ಕೆ 700 ಮಂದಿ ಮರು ನೇಮಕಾತಿ ಆಗಲಿದೆ ಎಂದು ಅವರು ತಿಳಿಸಿದರು.

    ಎಲೆಕ್ಟ್ರಿಕ್ ಬಸ್‌ಗಳಿಗೆ ಖಾಸಗಿ ಚಾಲಕರ ಬಳಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎಷ್ಟೇ ಎಲೆಕ್ಟ್ರಿಕ್ ಬಸ್ ಬಂದರೂ ನಮ್ಮ ಸಿಬ್ಬಂದಿ ವಜಾ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಸ್ ಪ್ರಯಾಣ ದರ ಹೆಚ್ಚಳ ವಿಚಾರವಾಗಿ, ‘ನಮ್ಮದು ಸೇವಾಭಾವನೆಯಿಂದ ಸೇವೆ ನೀಡುವ ಸಂಸ್ಥೆಗಳು. ಸದ್ಯ 800 ವೋಲ್ವೋ ಬಸ್ ಗಳು ಓಡಾಡದೆ ನಿಂತಿವೆ. 3000 ಕೋಟಿ ರೂ. ಸರ್ಕಾರದಿಂದ ಇದೀಗ ಇಲಾಖೆಗೆ ಬಂದಿದೆ. ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ’ ಎಂದು ಹೇಳಿದರು.

    ಪ್ರೇಮಿಗಳ ದಿನದಂದು ನಡೆಯಲಿದೆ ಈ ವಿಶೇಷ ಜೋಡಿಯ ಮದುವೆ! ಅದರಲ್ಲೇನು ಸ್ಪೆಷಲ್‌ ಅಂತೀರಾ?

    VIDEO: ಬುರ್ಕಾಧಾರಿ ಹಿಂದೆ ಹೋದ ಎಸ್‌ಪಿ ಕಾರ್ಯಕರ್ತ ಮಾಡಿದ್ದೇನು ನೋಡಿ! ಜಾಲತಾಣದಲ್ಲಿ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts