More

    ಸೋಂಕಿತರ ಜೀವನದ ಜತೆ ಚೆಲ್ಲಾಟ? ಕಾಂಗ್ರೆಸ್‌ನ ರಹಸ್ಯ ಟೂಲ್‌ಕಿಟ್‌ನಲ್ಲಿ ಅಡಗಿದೆ ಬೆಚ್ಚಿ ಬೀಳಿಸೋ ಷಡ್ಯಂತ್ರ!

    ನವದೆಹಲಿ: ರೈತರ ಪ್ರತಿಭಟನೆಯ ಹೆಸರಿನಲ್ಲಿ ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನಿ ಮೋದಿಯವರಿಗೆ ಕಳಂಕ ತರಲು ಹೇಗೆಲ್ಲಾ ಕಾರ್ಯಾಚರಣೆ ಮಾಡಬಹುದು ಎಂಬ ಅಂಶಗಳುಳ್ಳ ಟೂಲ್‌ಕಿಟ್‌ ಕೆಲ ತಿಂಗಳ ಹಿಂದೆ ಬಹಿರಂಗಗೊಂಡು ಭಾರಿ ವಿವಾದವನ್ನೇ ಸೃಷ್ಟಿಸಿತ್ತು. ತಮ್ಮ ಸಮುದಾಯ, ಗುಂಪು, ಪಕ್ಷಗಳ ನಡುವೆ ಮುಂದೆ ನಡೆಸಲು ಉದ್ದೇಶಿಸಿರುವ ಕಾರ್ಯತಂತ್ರಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಿ ಹೊರಗಡೆ ಸೋರಿಕೆಯಾಗದಂತೆ ತಮ್ಮ ತಮ್ಮ ನಡುವೆಯಷ್ಟೇ ದಾಖಲೆಯ ರೂಪದಲ್ಲಿ ಇರಬೇಕಾಗಿದ್ದ ಈ ‘ಟೂಲ್‌ ಕಿಟ್‌’ ಇಡೀ ದೇಶದಲ್ಲಿ ಆಗ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು.

    ಆದರೆ ಇದೀಗ ಕಾಂಗ್ರೆಸ್‌ನ ರಹಸ್ಯಮಯ ಎನ್ನಲಾಗುವ ಟೂಲ್‌ಕಿಟ್‌ ಸೋರಿಕೆಯಾಗಿಬಿಟ್ಟಿದ್ದು, ಇದರಲ್ಲಿ ಕೋವಿಡ್‌ ಆಸ್ಪತ್ರೆಗಳ ಬೆಡ್‌ಬ್ಲಾಕ್‌ನ ಭಯಾನಕ ಮುಖ ಬಯಲಾಗಿದೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಮಸಿ ಬಳಿಯುವ ಸಲುವಾಗಿ ಕೋವಿಡ್‌ ಬಿಕ್ಕಟ್ಟನ್ನೇ ಬಂಡವಾಳ ಮಾಡಿಕೊಂಡಿರುವ ಬೆಚ್ಚಿ ಬೀಳಿಸುವ ಮಾಹಿತಿಗಳನ್ನು ಕಾಂಗ್ರೆಸ್‌ನವರು ತಯಾರು ಮಾಡಿದ್ದಾರೆ ಎನ್ನಲಾದ ಈ ಟೂಲ್‌ಕಿಟ್‌ ಒಳಗೊಂಡಿದೆ.

     ಕಾಂಗ್ರೆಸ್ ನಾಯಕರು ಸ್ಥಳೀಯ ನಾಯಕರೊಂದಿಗೆ ಸಹಭಾಗಿತ್ವದಲ್ಲಿ ಕೆಲವು ಕೋವಿಡ್‌ ಆಸ್ಪತ್ರೆಗಳಲ್ಲಿ ಬೆಡ್‌ಬ್ಲಾಕ್‌ ಮಾಡಿದ್ದು, ಆಸ್ಪತ್ರೆಗಳಲ್ಲಿ ಖಾಲಿ ಇರುವ ಹಾಸಿಗೆಗಳನ್ನು ತಮ್ಮ ನಿರ್ದೇಶದನ ಮೇಲಷ್ಟೇ ತಾವು ತಿಳಿಸಿರುವವರಿಗೆ ನೀಡುವಂತೆ ಸೂಚಿಸಬೇಕು ಎಂದು ಈ ಟೂಲ್‌ಕಿಟ್‌ನಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ.
    ಸೋಂಕಿತರ ಜೀವನದ ಜತೆ ಚೆಲ್ಲಾಟ? ಕಾಂಗ್ರೆಸ್‌ನ ರಹಸ್ಯ ಟೂಲ್‌ಕಿಟ್‌ನಲ್ಲಿ ಅಡಗಿದೆ ಬೆಚ್ಚಿ ಬೀಳಿಸೋ ಷಡ್ಯಂತ್ರ!

    ಈ ಮೂಲಕ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸೌಲಭ್ಯಗಳು ಇಲ್ಲವೆಂದು ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ದೂಷಿಸಲು ಕಾರ್ಯತಂತ್ರ ರೂಪಿಸಲಾಗಿದೆ ಎಂದು ಸೋರಿಕೆಯಾಗಿರುವ ಈ ಟೂಲ್‌ಕಿಟ್‌ನಿಂದ ತಿಳಿದುಬರುತ್ತಿದೆ. ಹೇಗಾದರೂ ಮಾಡಿ ಬಿಜೆಪಿಯನ್ನು ಅಸಮರ್ಥರೆಂದು ಬಿಂಬಿಸುವ ಪ್ರಯತ್ನದಲ್ಲಿ ಇಂಥದ್ದೊಂದು ನಿರ್ದೇಶನವನ್ನು ತಮ್ಮವರಿಗೆ ಕಾಂಗ್ರೆಸ್‌ ಮುಖಂಡರು ನೀಡಿದ್ದಾರೆ ಎನ್ನಲಾಗಿದೆ.


    ಅಷ್ಟೇ ಅಲ್ಲದೇ, ಕುಂಭ ಮೇಳವನ್ನು ಕರೊನಾ ಸೂಪರ್‌ ಸ್ಪ್ರೆಡರ್ ಎಂದು ಕರೆಯಿರಿ, ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಆದರೆ ಈದ್ ಮಾರ್ಕೆಟ್‌ಗಳು ಹಾಗೂ ಸಂಭ್ರಮಾಚರಣೆಯನ್ನು ಯಾವ ಸಾಮಾಜಿಕ ಜಾಲತಾಣಗಳಲ್ಲೂ ಹಾಕಬೇಡಿ ಎಂದು ನಿರ್ದೇಶನ ನೀಡಿರುವುದು ಈ ಟೂಲ್‌ಕಿಟ್‌ನಿಂದ ಬಹಿರಂಗಗೊಂಡಿದೆ. ಈ ಟೂಲ್‌ಕಿಟ್‌ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗುತ್ತಿದ್ದಂತೆಯೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ಶುರುವಾಗಿದೆ. ಇದು ತಾವು ರಚನೆ ಮಾಡಿರುವ ಟೂಲ್‌ಕಿಟ್‌ ಅಲ್ಲ ಎಂದಿರುವ ಕಾಂಗ್ರೆಸ್ ಪಕ್ಷ, ಈ ಸಂಬಂಧ ಬಿಜೆಪಿ ಮುಖಂಡರಾದ ಜೆ.ಪಿ. ನಡ್ಡಾ, ಸಂಭೀತ್‌ ಪಾತ್ರಾ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದೆ. ತಮ್ಮ ವಿರುದ್ಧ ಸುಖಾ ಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಇದರ ಸತ್ಯಾಸತ್ಯತೆ ಇನ್ನಷ್ಟೇ ಹೊರಬರಬೇಕಿದೆ!

    ‘ಗೋಡೆ ತೆಳ್ಳಗಿದ್ದು, ಸೆಕ್ಸ್‌ ಮಾಡುವಾಗ ಪ್ಲೀಸ್‌ ಸೌಂಡ್‌ ಮಾಡಬೇಡಿ, ಅಕ್ಕಪಕ್ಕದವರಿಗೆ ಒಂಥರಾ ಆಗುತ್ತೆ’

    ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಖ್ಯಾತ ನಟ ವಿಜಯಕಾಂತ್‌: ಆರೋಗ್ಯ ಸ್ಥಿತಿ ಗಂಭೀರ

    ಸಾಮಾಜಿಕವಾಗಿ, ನೈತಿಕವಾಗಿ ಒಪ್ಪದ ಸಂಬಂಧ ಲಿವ್‌ ಇನ್‌ ರಿಲೇಷನ್‌ ಎಂದ ಹೈಕೋರ್ಟ್‌- ಜೋಡಿ ಅರ್ಜಿ ವಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts