More

    ಗೌತಮ ಬುದ್ಧನ ಸಂದೇಶ ಸಾರ್ವಕಾಲಿಕ

    ದಾವಣಗೆರೆ : ಸಹಾನುಭೂತಿ, ದಯೆ ಮತ್ತು ಪ್ರೀತಿಯ ಮೇಲೆಯೆ ಜಗತ್ತು ನಿಂತಿದೆ ಎನ್ನುವ ಗೌತಮ ಬುದ್ಧನ ಸಂದೇಶ ಸಾರ್ವಕಾಲಿಕ ಹಾಗೂ ಸದಾ ಅನುಕರಣೀಯ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಹೇಳಿದರು.
     ನಗರದ ಕೆ.ಬಿ. ಬಡಾವಣೆಯಲ್ಲಿರುವ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಕಾರ್ಯಾಲಯದಲ್ಲಿ ಗುರುವಾರ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಅಹಿಂಸೆ, ಜೀವನದ ಗೌರವ ಮತ್ತು ಮಹಿಳೆಯರಿಗೆ ಸಮಾನತೆಯ ಬೋಧನೆಗಳಿಂದಾಗಿ ಬೌದ್ಧ ಧರ್ಮವು ಜನಪ್ರಿಯತೆ ಗಳಿಸಿತು. ಭಾರತವನ್ನು ಜಗತ್ತಿನ ಇತರೆ ದೇಶಗಳು ಇಂದಿಗೂ ಬುದ್ಧನ ನಾಡು ಎಂದೇ ಗುರುತಿಸುತ್ತವೆ. ಬುದ್ಧ ಕೇವಲ ನೆನಪಲ್ಲ, ಅದು ಸಮಾಜದ ಶಕ್ತಿಯ ಸೂಚಕ ಎಂದರು.
     ಕ್ರೌರ್ಯ, ಮೌಢ್ಯ, ಅಸಮಾನತೆ, ಕಂದಾಚಾರಗಳಂತಹ ಸ್ಥಾಪಿತ ಆಚರಣೆಗಳಿಂದ ನರಳುತ್ತಿದ್ದ ಜಗತ್ತಿಗೆ ಗೌತಮ ಬುದ್ಧ ಜ್ಞಾನದ ಬೆಳಕಾಗಿ ಶಾಂತಿ, ಸಮಾನತೆಯ ಹಾದಿಯನ್ನು ತೋರಿದರು. ಮನುಷ್ಯನ ಬಗ್ಗೆ ಮಾತನಾಡಿ ಮಾನವ ಬದುಕಿಗೆ ಘನತೆ ತಂದುಕೊಟ್ಟರು ಎಂದು ಹೇಳಿದರು.
     ನಿವೃತ್ತ ಉಪನ್ಯಾಸಕಿ ಎಸ್.ಎಂ. ಮಲ್ಲಮ್ಮ ಮಾತನಾಡಿ, ಬುದ್ಧ, ಬಸವರ ಚಿಂತನೆಗಳು ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ. ಅಹಿಂಸೆ ಮತ್ತು ಕರುಣೆಯ ಸಮಾಜವನ್ನು ಗೌತಮ ಬುದ್ಧ ಬಯಸಿದ್ದರು ಎಂದರು.
     ಕವಯಿತ್ರಿ ಸತ್ಯಭಾಮಾ ಮಂಜುನಾಥ ಮಾತನಾಡಿ, ಬುದ್ಧ ಮಾನವೀಯ ಮೌಲ್ಯಗಳನ್ನು ಪಸರಿಸಿದ ಮನುಕುಲದ ಮಹಾಬೆಳಕು ಎಂದು ವರ್ಣಿಸಿದರು.
     ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ , ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಪರಮೇಶ್ವರಪ್ಪ ಸಿರಿಗೆರೆ, ಕುಮಾರ ಅನೆಕೊಂಡ, ಸಾಹಿತಿ ಎಸ್.ಸಿದ್ದೇಶ್ ಕುರ್ಕಿ, ವಕೀಲ ಆರ್. ಯೋಗೀಶ್ವರಪ್ಪ ಇದ್ದರು. ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಎನ್.ಎಸ್. ರಾಜು ಸ್ವಾಗತಿಸಿದರು. ರಂಗಭೂಮಿ ಕಲಾವಿದರಾದ ಶಿವಾಜಿ ರಾವ್, ಮಾರ್ತಾಂಡಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts