More

    ಟೀಮ್​ ಇಂಡಿಯಾ ಕೋಚ್​ ಹುದ್ದೆ ನಿರಾಕರಿಸಿದ ಆಸೀಸ್​ನ ಮಾಜಿ ನಾಯಕ

    ನವದೆಹಲಿ: ಟಿ20 ವಿಶ್ವಕಪ್​ ಟೂರ್ನಿಯ ಬಳಿಕ ತೆರವಾಗಲಿರುವ ಟೀಮ್​ ಇಂಡಿಯಾ ಮುಖ್ಯಕೋಚ್​ ಹುದ್ದೆಗೆ ಆಸ್ಟ್ರೆಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್​ ಅವರನ್ನು ನೇಮಕ ಮಾಡಲು ಬಿಸಿಸಿಐ ಆಸಕ್ತಿ ತೋರಿದ್ದು, ಬಿಸಿಸಿಐ ನೀಡಿದ ಆರ್​ ಅನ್ನು ನಿರಾಕರಿಸಿರುವುದಾಗಿ ರಿಕಿ ಪಾಂಟಿಂಗ್​ ಬಹಿರಂಗಪಡಿಸಿದ್ದಾರೆ.

    ಐಪಿಎಲ್​ ಟೂರ್ನಿಯ ವೇಳೆ ಕೋಚ್​ ಹುದ್ದೆಗೆ ಸಂಬಂಧಿಸಿದಂತೆ ಕೆಲ ಚರ್ಚೆಗಳು ನಡೆದವು. ಕೋಚಿಂಗ್​ನಲ್ಲಿ ನನಗೆ ಆಸಕ್ತಿ ಇದೆಯೇ ಅಥವಾ ಹುದ್ದೆಯನ್ನು ನಿಭಾಯಿಸುವ ಬಗ್ಗೆ ಅಭಿಪ್ರಾಯ ಪಡೆಯಲಾಯಿತು.ರಾಷ್ಟ್ರೀಯ ತಂಡದ ಹಿರಿಯ ತರಬೇತುದಾರನಾಗಲು ಇಷ್ಟಪಡುತ್ತೇನೆ, ಆದರೆ ನನ್ನ ಜೀವನದಲ್ಲಿ ನಾನು ಹೊಂದಿರುವ ಇತರ ವಿಷಯಗಳೊಂದಿಗೆ ಮತ್ತು ವೈಯಕ್ತಿಕ ಹಾಗೂ ಕುಟುಂಬಕ್ಕೆ ಸ್ವಲ್ಪ ಸಮಯವನ್ನು ನೀಡಲು ಬಯಸುತ್ತೇನೆ. ಜತೆಗೆ ಟೀಮ್​ ಇಂಡಿಯಾದ ಕೋಚ್​ ಆಗಿ ನೇಮಕಗೊಂಡರೆ ಐಪಿಎಲ್​ ತಂಡದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಹುದ್ದೆಯನ್ನು ಹೊಂದಲು ನಿರಾಕರಿಸಿದೆ ಎಂದು ಪಾಂಟಿಂಗ್​ ತಿಳಿಸಿದರು.

    ಪ್ರಸ್ತುತ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ನ ತಂಡದ ಮುಖ್ಯಕೋಚ್​ ಆಗಿ ಏಳು ವರ್ಷ ಪೂರ್ಣಗೊಳಿಸಿರುವ ಪಾಂಟಿಂಗ್​, ಬಿಗ್​ ಬಾಷ್​ನಲ್ಲಿ ಹೋಬಾರ್ಟ್​ ಹರಿಕೇನ್ಸ್​ ತಂಡದ ಕಾರ್ಯತಂತ್ರದ ಮುಖ್ಯಸ್ಥ, ಎಂಎಲ್​ಸಿ ಲೀಗ್​ನಲ್ಲಿ ವಾಷಿಂಗ್ಟನ್​ ಫ್ರೀಡಂ ತಂಡದ ಮುಖ್ಯ ತರಬೇತುದಾರರಾಗಿ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಪಾಂಟಿಂಗ್​ ಈ ಹಿಂದೆ ಆಸ್ಟ್ರೆಲಿಯಾದ ಹಂಗಾಮಿ ಟಿ20 ಕೋಚ್​ ಆಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts