More

    ಭಾರತದ ವಿರುದ್ಧ ಮಹಾಸಂಚು ಆರೋಪ: ದಿಶಾ ಮುಗ್ಧೆ ಎಂದ ರಮ್ಯಾ, ಬಿಡುಗಡೆ ಮಾಡದಿದ್ರೆ ಹೋರಾಟ ಎಂದ ರೈತ ಮುಖಂಡ

    ಬೆಂಗಳೂರು: ಇದೀಗ ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ’ಟೂಲ್‌ಕಿಟ್‌’ ಶಬ್ದ ಭಾರಿ ಕುತೂಹಲ ಮೂಡಿಸಿದೆ. ಟೂಲ್‌ಕಿಟ್‌ ಹಗರಣ ಬಹಿರಂಗವಾದುದಕ್ಕೆ ಅತ್ತ ಪಾಕಿಸ್ತಾನ ಟೆನ್ಷನ್‌ನಲ್ಲಿದ್ದರೆ, ಇತ್ತ ಕೆಲವು ಭಾರತೀಯರು ಈ ಹಗರಣದಲ್ಲಿ ಸಿಲುಕಿರುವ ಆರೋಪಿಗಳ ಪರವಾಗಿ ನಿಂತಿದ್ದಾರೆ.

    ಭಾರತದ ವಿರುದ್ಧ ಮಹಾಸಂಚು ರೂಪಿಸಿ, ವಿಶ್ವಮಟ್ಟದಲ್ಲಿ ಭಾರತಕ್ಕೆ ಕಪ್ಪುಮಸಿ ಬಳಿಯಲು ರೈತರ ಪ್ರತಿಭಟನೆಯ ನೆಪದಲ್ಲಿ ಹೇಗೆಲ್ಲಾ ಸಂಚು ರೂಪಿಸಬಹುದು ಎಂಬ ಮಾಹಿತಿ ಇರುವ ಟೂಲ್‌ಕಿಟ್‌ ಹಗರಣದಲ್ಲಿ ಸಿಲುಕಿ ಬಂಧಿತಳಾಗಿರುವ ಸಾಮಾಜಿಕ ಹೋರಾಟಗಾರ್ತಿ ದಿಶಾ ರವಿ ಪರವಾಗಿ ಇರುವ ಕೆಲವರು ಆಕೆಯ ಬಿಡುಗಡೆಗೆ ಒತ್ತಾಯಿಸುತ್ತಿದ್ದಾರೆ.

    ದಿಶಾ ರವಿ ಪರವಾಗಿ ಟ್ವೀಟ್‌ ಮಾಡಿರುವ ನಟಿ ರಮ್ಯಾ, ದಿಶಾ ರವಿ ಬೆಂಗಳೂರಿನ ಯುವತಿ, ಕನ್ನಡತಿ, ಆಕೆ ಮುಗ್ದೆ, ರೈತರ ಪರ ನಿಲ್ಲುವುದು ಕ್ರೈಂ ಅಲ್ಲ, ನಾವು ಅವಳ ಪರ ನಿಲ್ಲಬೇಕು” ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

    ಭಾರತದ ವಿರುದ್ಧ ಮಹಾಸಂಚು ಆರೋಪ: ದಿಶಾ ಮುಗ್ಧೆ ಎಂದ ರಮ್ಯಾ, ಬಿಡುಗಡೆ ಮಾಡದಿದ್ರೆ ಹೋರಾಟ ಎಂದ ರೈತ ಮುಖಂಡ
    ಪರಿಸರ ಹೋರಾಟಗಾರ್ತಿಯಾಗಿರುವ ದಿಶಾ ಇಂದು ಜೈಲಿನಲ್ಲಿದ್ದರೆ ಅದಕ್ಕೆ ನಾವೆಲ್ಲರೂ ಸಾಮೂಹಿಕವಾಗಿ ಜವಾಬ್ದಾರರು. ನಮ್ಮ ದೇಶದಲ್ಲಿ ಈ ಬಗೆಯ ಕೃತ್ಯಕ್ಕೆ ನಾವೆಲ್ಲ ಬಹಳ ಸಮಯದಿಂದ ಮೂಕ ಪ್ರೇಕ್ಷಕರಾಗಿದ್ದೇವೆ.ಈ ಬಗ್ಗೆ ನಾವು ಜವಾಬ್ದಾರಿಯುತ ನಾಗರಿಕರಾಗಿ ಕಡೆಯ ಬಾರಿಗೆ ಮಾತನಾಡಿದ್ದು ಯಾವಾಗ? ನಾವು ಜನರ ಶಕ್ತಿಯನ್ನು ಮರೆತಿದ್ದೇವೆಯೇ? ಈ ದೇಶವು ನಮ್ಮದು ಎಂದು ನಾವು ಮರೆತಿದ್ದೇವೆಯೇ?” ರಮ್ಯಾ ಪ್ರಶ್ನೆ ಮಾಡಿದ್ದಾರೆ.

    ಅದೇ ಇನ್ನೊಂದೆಡೆ, ದಿಶಾಳನ್ನು ಬಿಡುಗಡೆ ಮಾಡದಿದ್ದರೆ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.

    ಸರ್ವಾಧಿಕಾರಿಯಂತೆ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ರೈತರ ಪ್ರತಿಭಟನೆಗೆ ಬೆಂಬಲಿಸಿದ ದಿಶಾ ರವಿಯನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ. ಹೀಗಾಗಿ ತಕ್ಷಣವೇ ಆಕೆಯನ್ನು ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಗ್ರೆಟಾ ಜತೆ ದಿಶಾ ಸಂಭಾಷಣೆ ಹೇಗಿತ್ತು ಗೊತ್ತಾ? ಟೂಲ್​ಕಿಟ್​ನಲ್ಲಿತ್ತು ಈ ಎಲ್ಲ ಮಾಹಿತಿಗಳು!

    ಗ್ರೆಟಾ ಜತೆ ದಿಶಾ ಸಂಭಾಷಣೆ ಹೇಗಿತ್ತು ಗೊತ್ತಾ? ಟೂಲ್​ಕಿಟ್​ನಲ್ಲಿತ್ತು ಈ ಎಲ್ಲ ಮಾಹಿತಿಗಳು!

    ದಿಶಾ ರವಿ ಬಂಧನದಿಂದಾಗಿ ಕೆರಳಿದ ಪಾಕ್​! ಬಾಯಿ ಮುಚ್ಚಿಸುವ ಕೆಲಸ ನಿಮ್ಮದು ಎಂದ ಇಮ್ರಾನ್​ ಖಾನ್​

    ಟೂಲ್​ಕಿಟ್: ದಿಶಾ ನೆರವಿಗೆ ಧಾವಿಸಿದ ದೆಹಲಿ ಮಹಿಳಾ ಆಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts