ಟೂಲ್​ಕಿಟ್: ದಿಶಾ ನೆರವಿಗೆ ಧಾವಿಸಿದ ದೆಹಲಿ ಮಹಿಳಾ ಆಯೋಗ

ನವದೆಹಲಿ: ರೈತರ ಹೋರಾಟಕ್ಕೆ ಸಂಬಂಧಪಟ್ಟಂತೆ ಟೂಲ್​​ಕಿಟ್ ಹಂಚಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಪರಿಸರ ಹೋರಾಟಗಾರ್ತಿ ಬೆಂಗಳೂರಿನ ದಿಶಾ ರವಿ ನೆರವಿಗೆ ದೆಹಲಿ ಮಹಿಳಾ ಆಯೋಗ ಧಾವಿಸಿದೆ. ಈ ಕುರಿತು ದೆಹಲಿ ಮಹಿಳಾ ಆಯೋಗ ದೆಹಲಿ ಪೊಲೀಸ್ ಕಮೀಷನರ್​ಗೆ ಹಾಗೂ ಅಲ್ಲಿನ ಸೈಬರ್ ಸೆಲ್ ವಿಭಾಗಕ್ಕೆ ನೋಟಿಸ್ ಜಾರಿಗೊಳಿಸಿದೆ. ದಿಶಾ ರವಿ ಬಂಧನವನ್ನು ಖಂಡಿಸಿರುವ ಆಯೋಗ, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ಎಫ್​ಐಆರ್ ಪ್ರತಿಯನ್ನು ಆಯೋಗಕ್ಕೆ ಸಲ್ಲಿಸಲು ಸೂಚಿಸಿದೆ. ಇನ್ನು ದಿಶಾ ರವಿ ಬಂಧನದ ವಿರುದ್ಧ … Continue reading ಟೂಲ್​ಕಿಟ್: ದಿಶಾ ನೆರವಿಗೆ ಧಾವಿಸಿದ ದೆಹಲಿ ಮಹಿಳಾ ಆಯೋಗ