More

    ಗಿನ್ನೆಸ್‌ ದಾಖಲೆ ಸೇರಲಿದೆ ಈ ಬಾರಿಯ ಅಯೋಧ್ಯೆಯ ದೀಪಾವಳಿ: ಇದರ ವಿಶೇಷತೆ ಏನು ಗೊತ್ತಾ?

    ಲಖನೌ: ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ. ಎಲ್ಲರೂ ದೀಪ ಬೆಳಗುವ ಮೂಲಕ ಈ ಹಬ್ಬವನ್ನು ಆಚರಿಸಲಿದ್ದಾರೆ. ಅದೇ ರೀತಿ ಅಯೋಧ್ಯೆಯಲ್ಲಿ ಕೂಡ ದೀಪಾವಳಿ ಸಂಭ್ರಮ ಜರುಗಲಿದೆ. ಆದರೆ ಈ ಬಾರಿಯ ದೀಪಾವಳಿ ಸ್ವಲ್ಪ ವಿಭಿನ್ನವಾಗಲಿದೆ. ಏಕೆಂದರೆ ಗಿನ್ನೆಸ್‌ ದಾಖಲೆ ಸೇರುವ ನಿರೀಕ್ಷೆಯಲ್ಲಿದೆ ರಾಮಜನ್ಮಭೂಮಿ.

    ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಅದೇನೆಂದರೆ ಅಯೋಧ್ಯೆಯ ಕೇಂದ್ರ ಬಿಂದು ರಾಮ್ ಪೌಡಿಯಲ್ಲಿ 9 ಲಕ್ಷ ಮತ್ತು ರಾಮ ಜನ್ಮಭೂಮಿ ಸಂಕೀರ್ಣ ಸೇರಿ ನಗರದ ಬೇರೆ ಬೇರೆ ಭಾಗದಲ್ಲಿ ಮೂರು ಲಕ್ಷ ದೀಪ ಅಂದರೆ ಒಟ್ಟಾರೆಯಾಗಿ 12 ಲಕ್ಷ ದೀಪಗಳನ್ನು ಬೆಳಗಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಹೀಗೆ ಆದಲ್ಲಿ ಇದು ಗಿನ್ನೆಸ್‌ ದಾಖಲೆ ಸೇರಲಿದೆ.

    ಇದಾಗಲೇ ಗಿನ್ನೆಸ್‌ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ತಂಡ ಅಯೋಧ್ಯೆಯನ್ನು ತಲುಪಿದೆ. ತಂಡವು ಹಣತೆಗಳ ಎಣಿಕೆ ಕಾರ್ಯವನ್ನು ಶುರು ಮಾಡಿದೆ.

    2017ರಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಅಯೋಧ್ಯೆಯಲ್ಲಿ ದೊಡ್ಡ ಮಟ್ಟದ ದೀಪೋತ್ಸವ ಕಾರ್ಯಕ್ರಮ ಆರಂಭಿಸಿದ್ದರು. ಮೊದಲ ವರ್ಷ ಅಂದರೆ 2017 ರಲ್ಲಿ 1 ಲಕ್ಷದ 80 ಸಾವಿರ ಹಣತೆ, 2018 ರಲ್ಲಿ 3 ಲಕ್ಷದ 01 ಸಾವಿರದ 152, 2019 ರಲ್ಲಿ 5 ಲಕ್ಷದ 50 ಸಾವಿರ, 2020 ರಲ್ಲಿ 5 ಲಕ್ಷದ 51 ಸಾವಿರ ದೀಪಗಳನ್ನು ಬೆಳಗಲಾಗಿತ್ತು. ಈಗ ಒಂದೇ ಸಲಕ್ಕೆ ಇದರ ಸಂಖ್ಯೆಯನ್ನು 12 ಲಕ್ಷಕ್ಕೆ ಏರಿಸಲಾಗಿದೆ.

    ಏಕೈಕ ಪುತ್ರನ ಉಸಿರು ಇನ್ನೇನು ನಿಲ್ಲಲಿದೆ ಎಂದಾಗ ಅಪ್ಪ-ಅಮ್ಮ ತೆಗೆದುಕೊಂಡರು ಬಹು ದೊಡ್ಡ ನಿರ್ಧಾರ…

    ಅಜ್ಜನ ಆಸ್ತಿ ನಿಮ್ಮಮ್ಮನ ಹಕ್ಕು, ಉಳಿದವರು ಕೊಡಲ್ಲ ಎಂದರೂ ಬಂದೇ ಬರುತ್ತದೆ, ಚಿಂತಿಸಬೇಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts