More

    ರೂಪಾಂತರಿ ವೈರಾಣು ಪತ್ತೆ- ಕಾಲಿಟ್ಟ ಮೂರನೆಯ ಅಲೆ: ಹೊಸ ಮಾರ್ಗಸೂಚಿಗೆ ಸರ್ಕಾರದ ಸಿದ್ಧತೆ

    ಬೆಂಗಳೂರು: ಬ್ರಿಟನ್, ರಷ್ಯಾದಲ್ಲಿ ಕರೊನಾ ಹೊಸ ರೂಪಾಂತರಿ ವೈರಾಣು ಎವೈ- 4.2 ಪತ್ತೆಯಾಗುವ ಜತೆಗೆ‌ ಕೆಲವು ದೇಶಗಳಲ್ಲಿ ಮೂರನೇ ಅಲೆ ಪ್ರವೇಶಿಸಿರುವುದು ಖಚಿತವಾಗಿದ್ದು, ಹೊಸ ಮಾರ್ಗಸೂಚಿ ಹೊರಡಿಸುವುದಕ್ಕೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

    ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಇಂದು ಮಧ್ಯಾಹ್ನ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ, ಸದಸ್ಯರು ಹಾಗೂ ಇಲಾಖೆ ಅಧಿಕಾರಿಗಳ ಜತೆಗೆ ವಿಡಿಯೋ ಸಂವಾದ ನಡೆಸಲು ನಿರ್ಧರಿಸಿದ್ದಾರೆ.

    ಮೂರನೇ ಅಲೆ ನಿಯಂತ್ರಣ, ಹೊಸ ವೈರಾಣುವಿನಿಂದ ಸೋಂಕಿನ ತೀವ್ರತೆ, ಎರಡು ಡೋಸ್ ಲಸಿಕೆ ತೆಗೆದುಕೊಂಡವರ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಚರ್ಚಿಸಿ, ಹೊಸ ಮಾರ್ಗಸೂಚಿ ರೂಪಿಸಲಿದ್ದು, ನಂತರ ಮುಖ್ಯಮಂತ್ರಿ ಮುಂದೆ ಈ ಪ್ರಸ್ತಾಪ ಮಂಡಿಸಿ ಸೂಕ್ತ ಕ್ರಮಕೈಗೊಳ್ಳಲು ಇಲಾಖೆ ಯೋಚಿಸಿದೆ.

    ಎ ವೈ 4.2 ವೈರಾಣುವಿನ ಬಗ್ಗೆ ದೇಶದಲ್ಲಿ ಅಧ್ಯಯನ ನಡೆದಿದ್ದು, ಸದ್ಯಕ್ಕೆ ಲಭ್ಯ ಮಾಹಿತಿ ಪ್ರಕಾರ ರಷ್ಯಾದಲ್ಲಿ ಕರೊನಾ ನಿರೋಧಕ ಲಸಿಕೆ ಎರಡು ಡೋಸ್ ತೆಗೆದುಕೊಂಡವರಿಗೆ‌ ಈ ವೈರಾಣು ಬಾಧಿಸಿಲ್ಲ. ಲಸಿಕೆ ತೆಗೆದುಕೊಳ್ಳದವರು ಸೋಂಕು ಪೀಡಿತರಾಗಿದ್ದಾರೆ.

    ರಾಜ್ಯದಲ್ಲಿ ಎರಡು ಶಂಕಿತ ಪ್ರಕರಣಗಳು ವರದಿಯಾಗಿದ್ದು, ವಾಸ್ತವಾಂಶದ ಖಚಿತತೆಗೆ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸ್ ಪ್ರಯೋಗಾಲಯಕ್ಕೆ ರವಾನಿಸಿದ್ದು, ವರದಿ ಇನ್ನೂ ಬರಬೇಕಾಗಿದೆ.

    VIDEO: ಸಿಎಂ ತಾತಾ ಪಾಕೆಟ್‌ ಮನಿ ಕೊಡುವೆ, ರಸ್ತೆ ರಿಪೇರಿ ಮಾಡಿಸಿ ಪ್ಲೀಸ್‌… ಬೊಮ್ಮಾಯಿಗೆ ಬಾಲೆಯ ಮನವಿ

    ಅಮ್ಮಾ ಸಾಯಿಸ್ಬೇಡ… ಬಿಟ್ಬಿಡು.. ಎಂದ್ರೂ ಕೇಳಲಿಲ್ಲ; ಮಕ್ಕಳಿಗೂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts