More

    ಸ್ವಾಮಿ ವಿವೇಕಾನಂದ ಸ್ಫೂರ್ತಿಯ ಚಿಲುಮೆ

    ಎನ್.ಆರ್.ಪುರ: ಸ್ವಾಮಿ ವಿವೇಕಾನಂದರು ಯುವಜನರ ಆಶಾಕಿರಣ ಹಾಗೂ ಸ್ಫೂರ್ತಿಯ ಚಿಲುಮೆ ಎಂದು ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್ ಹೇಳಿದರು.

    ಗಾಂಧಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಜ್ಞಾನ ಕುಟೀರ ಉದ್ಘಾಟಿಸಿ ಮಾತನಾಡಿ, ಗಣರಾಜ್ಯೋತ್ಸವ ದಿನದಂದೇ ವಿವೇಕಾನಂದರ ಹೆಸರಿನಲ್ಲಿ ಜ್ಞಾನ ಕುಟೀರ ಉದ್ಘಾಟನೆಯಾಗುತ್ತಿರುವುದು ಅವಿಸ್ಮರಣೀಯ ಎಂದರು.
    ಗ್ರಾಪಂ ಸದಸ್ಯ ರವೀಂದ್ರ ಮಾತನಾಡಿ, ಎಷ್ಟು ವರ್ಷ ಬದುಕಿದೆವು ಎನ್ನುವುದಕ್ಕಿಂತ ಏನು ಸಾಧನೆ ಮಾಡಿದೆವು ಎಂಬುದು ಮುಖ್ಯ. ಸ್ವಾಮಿ ವಿವೇಕಾನಂದರ ಸಾಧನೆಗಳು, ಚಿಂತನೆಗಳು, ಆದರ್ಶಗಳು ಎಲ್ಲ ಕಾಲಕ್ಕೂ ಅನುಕರಣೀಯ. ಭಾರತದ ಸಂಸ್ಕೃತಿ, ಧರ್ಮ, ಸಂಸ್ಕಾರವನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದರು. ಅವರು ತತ್ವಜ್ಞಾನ ಸಂತರಾಗಿದ್ದರು ಎಂದು ಬಣ್ಣಿಸಿದರು.
    ಪಿಡಿಒ ವಿಂದ್ಯಾ ಮಾತನಾಡಿ, ಸ್ವಾಮಿ ವಿವೇಕಾನಂದರು ಹಿಂದು ಧರ್ಮದಲ್ಲಿರುವ ಶಾಂತಿ, ವಿಶ್ವಭ್ರಾತೃತ್ವ ಸಂಬಂಧವನ್ನು ಎತ್ತಿಹಿಡಿದಿದ್ದರು ಎಂದರು.
    ಗಾಂಧಿ ಗ್ರಾಮದ ಕೆ.ಎನ್.ನಾಗರಾಜು ಮಾತನಾಡಿ, ಕುಟೀರವನ್ನು ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ನಿರ್ಮಿಸಲಾಗಿದೆ. ಸುಮಾರು 2 ಲಕ್ಷ ರೂಪಾಯಿ ವೆಚ್ಚವಾಗಿದೆ. ಇಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿಯನ್ನೂ ಸ್ಥಾಪಿಸಲಾಗಿದೆ. ಶಾಲೆ ಶಿಕ್ಷಕ ಸಿ.ತಿಮ್ಮೇಶ್ ಅವರಿಗೆ ರಾಜ್ಯ ಪ್ರಶಸ್ತಿಯಿಂದ ಬಂದ ಹಣವನ್ನು ಇದಕ್ಕೆ ವಿನಿಯೋಗಿಸಿರುವುದು ಮಾದರಿ ಎಂದು ಹೇಳಿದರು.
    ದಾನಿಗಳಾದ ಪ್ರಣೀತ್, ಪಾರ್ವತಿ, ಅಜಂತಾ, ಕೆ.ಎನ್.ನಾಗರಾಜು, ಅಣ್ಣಾಮಲೈ ಮತ್ತು ರಿನೀಶ್ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಅರುಣ್‌ಕುಮಾರ್, ಗ್ರಾಪಂ ಉಪಾಧ್ಯಕ್ಷೆ ಸುನೀಲ್‌ಕುಮಾರ್, ಸದಸ್ಯರಾದ ವಾಣಿ ನರೇಂದ್ರ, ಎ.ಬಿ.ಮಂಜುನಾಥ್, ಅಶ್ವಿನಿ, ಪೂರ್ಣಿಮಾ, ಚಂದ್ರಶೇಖರ್, ಗ್ರಾಪಂ ಮಾಜಿ ಉಪಾಧ್ಯಕ್ಷ ಡಿ.ಜಿ.ಸತೀಶ್, ಸಿಆರ್‌ಪಿ ತಿಮ್ಮಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts