More

    ವೈಜ್ಞಾನಿಕ ಚಿಂತನೆಯಿಂದ ಸಮಾಜ ಅಭಿವೃದ್ಧಿ

    ಕೋಲಾರ: ಯುವಕರು ಮೂಢನಂಬಿಕೆಗಳಿಂದ ದೂರ ಉಳಿದು, ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​ ಹೇಳಿದರು.

    ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಜಿಲ್ಲಾ ಸಮಿತಿಯಿಂದ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿ, ಜ್ಞಾನ ವಿಜ್ಞಾನ ಸಮಾಜದ ಪ್ರಗತಿಗಾಗಿ ಎಲ್ಲ ವಿದ್ಯಾರ್ಥಿಗಳಲ್ಲಿ ಸೌಹಾರ್ಧ ವಾತಾವರಣ ನಿರ್ಮಿಸಲು ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದರು.
    ವಿಜ್ಞಾನ ಕ್ಷೇತ್ರದಲ್ಲಿ ಸಿಎನ್​ಆರ್​. ರಾವ್​, ವಿಶ್ವೇಶ್ವರಯ್ಯ ಅವರ ಹಾದಿಯಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ವಿಜ್ಞಾನ ಕಲಿ, ಪ್ರಯೋಗ ಕಲಿ, ವಿಜ್ಞಾನಿಗಳ ನೆನಪು ಮುಂತಾದ ಪ್ರಾಯೋಗಿಕ ಪ್ರಯತ್ನಗಳನ್ನು ನಿರಂತರವಾಗಿ ನಡೆಸಿದಾಗ ಜಿಲ್ಲೆ ವಿಜ್ಞಾನದಲ್ಲೂ ಸಾಧನೆ ಮಾಡಲು ಸಾಧ್ಯ ಎಂದರು.
    ಸಮಗ್ರ ಶಿಕ್ಷಣ ಕರ್ನಾಟಕದ ಸಹಾಯಕ ಉಪ ಸಮನ್ವಯಾಧಿಕಾರಿ ಎಚ್​.ಕೆ.ಮೋಹನ್​ ಬಾಬು ಮಾತನಾಡಿ, ತಾಲೂಕು ಮಟ್ಟದಿಂದ ರಾಜ್ಯ ಮಟ್ಟಕ್ಕೆ ಜಿಲ್ಲೆಯನ್ನು ಪ್ರತಿನಿಧಿಸಿರುವ ವಿದ್ಯಾರ್ಥಿಗಳ ಪ್ರಗತಿಗೆ ಸ್ಪಂದಿಸುತ್ತಿರುವ ಪಾಲಕರು ಮತ್ತು ಶಿಕ್ಷಕರ ನೆರವು ಶ್ಲಾಘನೀಯ. ಇಂತಹ ಸಹಕಾರದಿಂದ ಯುವ ವಿಜ್ಞಾನಿಗಳ ಸೃಷ್ಟಿ ಸಾಧ್ಯ ಎಂದರು.
    ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್​ ಮಾತನಾಡಿ, ವಿಜ್ಞಾನಿಗಳು ಚಂದ್ರಯಾನ, ಮಂಗಳಯಾನ ಮಟ್ಟಕ್ಕೆ ವಿಜ್ಞಾನ ಯುಗವನ್ನು ಕೊಂಡೊಯ್ಯುದಿದ್ದು, ವಿದ್ಯಾರ್ಥಿಗಳು ಓದುವ ಸಂದರ್ಭದಲ್ಲಿಯೇ ವಿಜ್ಞಾನಿಗಳ ಮತ್ತು ಪ್ರಯೋಗಗಳ ಪರಿಚಯ ಮಾಡಿಕೊಂಡು ವಿದ್ಯಾರ್ಥಿ ವಿಜ್ಞಾನಿಗಳಾಗಲು ಗುರಿ ಹೊಂದಬೇಕು ಎಂದು ಕಿವಿಮಾತು ಹೇಳಿದರು.
    ಸಮಿತಿಯಿಂದ ಏರ್ಪಡಿಸಿದ್ದ ರಸಪ್ರಶ್ನೆ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಕ ಶಿಕ್ಷಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
    ಸಮಿತಿಯ ಉಪಾಧ್ಯಕ್ಷೆ ಕೆ.ಸಿ.ಪದ್ಮಾವತಿ, ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಜಮಾದಾರ್​, ಸಂಚಾಲಕ ಡಿ.ಎನ್​.ಮುಕುಂದ, ಖಜಾಂಚಿ ಕೆ.ವಿ.ಜಗನ್ನಾಥ, ಸಹಕಾರ್ಯದರ್ಶಿ ಎಸ್​.ಸುರೇಶ್​ ಕುಮಾರ್​, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಸ್​. ನಂದೀಶ್​ ಕುಮಾರ್​, ಸಮಾಜ ಸೇವಕ ಶ್ರೀನಿವಾಸ್​ ಯಾದವ್​ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts