More

    ಮೂರು ಲಕ್ಷ ಕೊಟ್ಟರೆ ನೀವು ಬಚಾವ್​… ಇಲ್ಲಾಂದ್ರೆ ಅಷ್ಟೇ ಎಂದು ಚಾಕು ತೋರಿಸಿದ ‘ಸಿಸಿಬಿ ಅಧಿಕಾರಿಗಳು’

    ಬೆಂಗಳೂರು: ಸ್ಟೇಷನರಿ ಅಂಗಡಿ ಮಾಲೀಕ ಮತ್ತು ಗ್ರಾಹಕನಿಗೆ ಚಾಕು ತೋರಿಸಿ ಸಿಸಿಬಿ ಪೊಲೀಸರೆಂದು ಬೆದರಿಸಿ ಸುಲಿಗೆ ಮಾಡುತ್ತಿದ್ದ ಎಂಟು ಮಂದಿಯನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.

    ಕೆ.ಆರ್.ಪುರದ ಅಪ್ರೋಜ್ ಖಾನ್ (29), ರೂಹಿದ್ (20), ಸಾದೀಕ್ (19), ಮನ್ಸೂರ್ (22), ಕುರಮ್ (25), ಶೇಖ್ ಸಲ್ಮಾನ್ (29) ಹಾಗೂ ಸಂಚುರೂಪಿಸಿದ್ದ ರುದ್ರೇಶ್ (39), ಮುಸ್ತಾರ್ ಆಲಿ (39) ಬಂಧಿತರು. 9 ಮೊಬೈಲ್, 1 ಡ್ರ್ಯಾಗರ್, 2 ಸಾವಿರ ರೂ. 2 ಬೈಕ್, ನಕಲಿ ಪೊಲೀಸ್ ಐಡಿ ಕಾರ್ಡ್, 1 ಕಾರು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಾರ್ಚ್ 31ರ ಮಧ್ಯಾಹ್ನ 3 ಗಂಟೆಯಲ್ಲಿ ರಾಮಮೂರ್ತಿನಗರ ಕಲ್ಕೇರೆ ಮುಖ್ಯ ರಸ್ತೆಯಲ್ಲಿ ಇರುವ ಸ್ಟೇಷನರಿ ಅಂಗಡಿ ಬಳಿಗೆ ಕಾರು ಮತ್ತು ಬೈಕ್‌ಗಳಲ್ಲಿ ಆರೋಪಿಗಳು ಬಂದಿದ್ದಾರೆ. ಅಂಗಡಿ ಮಾಲೀಕ ನಿಹಾಲ್ ಸಿಂಗ್ ಎಂಬಾತನಿಗೆ ನಿಮ್ಮ ಅಂಗಡಿಯಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ನಾವು ಸಿಸಿಬಿ ಪೊಲೀಸರು ಅಂಗಡಿ ಪರಿಶೀಲನೆ ನಡೆಸಬೇಕೆಂದು ಹೇಳಿದ್ದಾರೆ. 3 ಲಕ್ಷ ರೂ. ಕೊಟ್ಟರೇ ಸುಮ್ಮನೆ ಹೋಗುತ್ತೆವೆ. ಇಲ್ಲವಾದರೆ ಅಂಗಡಿ ಒಳಗೆ ಡ್ರಗ್ಸ್ ಇಟ್ಟು ಸುಳ್ಳು ಕೇಸು ದಾಖಲಿಸಿ ಜೈಲಿಗೆ ಕಳುಹಿಸುತ್ತೆವೆ ಎಂದು ಅಂಗಡಿ ಮಾಲೀಕನಿಗೆ ಬೆದರಿಸಿದ್ದಾರೆ.

    ಅದೇ ವೇಳೆ ಅಂಗಡಿಗೆ ಬಂದ ಸಾದೀಕ್ ಎಂಬಾತನಿಗೆ ಡ್ರಾಗರ್ ತೋರಿಸಿ ಹಲ್ಲೆ ಮಾಡಿ ಮೊಬೈಲ್ , 2 ಸಾವಿರ ರೂ. ಮತ್ತು ಬೈಕ್ ಕಿತ್ತುಕೊಂಡು ಏನಾದರೂ ಪೊಲೀಸರಿಗೆ ದೂರು ಕೊಟ್ಟರೇ ಡ್ರಗ್ಸ್ ಖರೀದಿಗೆ ಬಂದಿದ್ದ ಗಿರಾಕಿ ಎಂದು ನಿನ್ನ ಮೇಲೂ ಕೇಸ್ ದಾಖಲಿಸುವುದಾಗಿ ಹೆದರಿಸಿ ಹೋಗಿದ್ದಾರೆ.

    ನೊಂದ ಅಂಗಡಿ ಮಾಲೀಕ ನಿಹಾಲ್ ಸಿಂಗ್, ಕೆ.ಆರ್.ಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಅಂಬರೀಶ್ ನೇತೃತ್ವದ ತಂಡ ಗುರುವಾರ ಬೆಳಗಿನ ಜಾವ ಆರೋಪಿಗಳನ್ನು ಬಂಧಿಸಿದೆ. ಕುಖ್ಯಾತ ದರೋಡೆಕೋರ ಅಪ್ರೋಜ್, ತನ್ನ ಸಹಚರರೊಂದಿಗೆ ನಗರ ಮತ್ತು ಸುತ್ತಮುತ್ತ ಹಲವೆಡೆ ಕೃತ್ಯ ಎಸಗಿದ್ದ.

    ಮಮತಾ ಬ್ಯಾನರ್ಜಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಬಿಜೆಪಿ ಮುಖಂಡ ನೇಣುಬಿಗಿದ ಸ್ಥಿತಿಯಲ್ಲಿ!

    ಬಿಯರ್​ ಪ್ರೇಮಿಗಳಿಗೆ ಇಲ್ಲಿ ಸಿಕ್ತು ಭರ್ಜರಿ ಗುಡ್​ನ್ಯೂಸ್​- ವಿದೇಶಿ ಮದ್ಯಪ್ರಿಯರಿಗೆ ಸರ್ಕಾರ ನೀಡಿತು ಶಾಕ್​!

    ಮುಖ್ಯಮಂತ್ರಿಯನ್ನು ಕಟ್ಟಿಹಾಕಲು ನಡೀತಿದೆ ಕೈ ನಾಯಕರ ಮಹತ್ವದ ಸಭೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts