More

    70 ಲಕ್ಷ ರೂ. ಮೌಲ್ಯದ ಆಭರಣ ಕದ್ದ, ಲಾಕ್‌ಡೌನ್‌ನಿಂದ ಸಿಕ್ಕಿಬಿದ್ದ ಪಕ್ಕದ್‌ಮನೆ ಕಳ್ಳ!

    ಬೆಂಗಳೂರು: ಆರ್ಮಿ ಆಫೀಸರ್ ಮನೆಯೊಂದರಿಂದ ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಿರುವ ನೇಪಾಳಿ ಗ್ಯಾಂಗ್‌ ಒಂದನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಡಿಜೆ ಹಳ್ಳಿ ಪೊಲೀಸರಿಂದ ನೇಪಾಳಿ ಗ್ಯಾಂಗ್ ಅರೆಸ್ಟ್ ಆಗಿದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇವರು ಸಿಕ್ಕಿಬಿದ್ದಿದ್ದಾರೆ. ಶ್ರೀಮಂತರ ಮನೆಯನ್ನೇ ಗುರಿ ಮಾಡಿಕೊಂಡು ಈ ಗ್ಯಾಂಗ್ ಕಳ್ಳತನಕ್ಕೆ ಇಳಿಯುತ್ತಿತ್ತು. ಈಚೆಗೆ ಬೆಂಗಳೂರಿನ ಡಿಜೆ ಹಳ್ಳಿಯ ಎಂಎಂ ಲೇಔಟ್‌ನಲ್ಲಿ ಇರುವ ಆರ್ಮಿ ಆಫೀಸರ್‌ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಲಾಗಿತ್ತು.

    ಕರೊನಾ ಹಿನ್ನೆಲೆಯಲ್ಲಿ ಮಗಳ ಮನೆಗೆ ಈ ಮನೆಯ ಮಾಲೀಕರು ಹೋಗಿದ್ದರು. ಮನೆಗೆ ವಾಪಸಾದಾಗ ಮನೆಯಲ್ಲಿದ್ದ 70 ಲಕ್ಷ ಮೌಲ್ಯದ ವಜ್ರದ ಆಭರಣ, ಚಿನ್ನದ ಆಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಪೊಲೀಸರಲ್ಲಿ ದೂರು ದಾಖಲಿದ್ದರು.

    ಇದರ ಬೆನ್ನತ್ತಿ ಹೋದಾಗ ಅವರ ಮನೆಯ ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ನೇಪಾಳಿ ವ್ಯಕ್ತಿ ಮತ್ತು ಆತನ ತಂಡದಿಂದ ಕಳ್ಳತನ ಆಗಿರುವುದು ತಿಳಿದುಬಂದಿದೆ. ಸೆಕ್ಯುರಿಟಿ ಗಾರ್ಡ್ ಪ್ರಕಾಶ್ ಬಹದ್ದೂರ್, ಮನೋಜ್, ವಿಕ್ರಮ್ ಹಾಗೂ ಕೇಶವ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪು ಒಪ್ಪಿಕೊಂಡಿದ್ದಾರೆ.

    ಕಳ್ಳತನದ ಬಳಿಕ ಸ್ಟ್ರಿಕ್ಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಆಭರಣ ವಿಲೇವಾರಿ ಮಾಡುವುದು ಕಷ್ಟವಾಗಿ ತಮ್ಮಲ್ಲಿಯೇ ಇಟ್ಟುಕೊಂಡಿದ್ದರು. ಬಳಿಕ ಮೂವರು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರೆ, ಕಳ್ಳ ವಿಕ್ರಮ್ ಕದ್ದ ಚಿನ್ನಾಭರಣ‌ ಪಡೆದು ನೇಪಾಳಕ್ಕೆ ಹೊರಟಿದ್ದ. ಇವರಿಂದ ಅಷ್ಟೂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುಂಬೈನಿಂದ ನೇಪಾಳಕ್ಕೆ ಹೋಗುವ ಮಾರ್ಗದಲ್ಲಿ ಪೊಲೀಸರು ಇವರನ್ನು ಬಂಧಿಸಿದ್ದಾರೆ.

    ಮೂರ್ನಾಲ್ಕು ಸಾವಿರ ರೂ. ಕೊಟ್ರೆ ಪಾಸಿಟಿವ್‌ನೂ ಆಗ್ತಿತ್ತು ನೆಗೆಟಿವ್‌- ಸಿಕ್ಕಿಬಿದ್ದ ಕಿಂಗ್‌ಪಿನ್‌!

    ಅಸಹಿಷ್ಣುತೆಯನ್ನು ಮುಸ್ಲಿಂ ಸಮುದಾಯಗಳು ತ್ಯಜಿಸಬೇಕು- ಹೈಕೋರ್ಟ್‌

    ಜೀವನ ಪರ್ಯಂತ ಮದ್ವೆನೇ ಆಗಲ್ಲ ಎಂದು ಸಿನಿಮಾ ಮಾದರಿಯಲ್ಲಿ ಧಮ್ಕಿ ಹಾಕಬಹುದಿತ್ತಲ್ವಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts