More

    ಮನೆಯಲ್ಲಿದ್ದ 90 ಲಕ್ಷ ರೂ. ಕದ್ದು ಸಿಕ್ಕಿಬಿದ್ದರು- ಕಳುವಾಗಿದ್ದು ಮಾಲೀಕನಿಗೆ ತಿಳಿದದ್ದು ದುಡ್ಡು ಸಿಕ್ಕಮೇಲೆ!

    ಬೆಂಗಳೂರು: ಚಿಂದಿ ಆಯುವ ನೆಪದಲ್ಲಿ ಬಂದು ಮನೆಯೊಂದಕ್ಕೆ ಕನ್ನ ಹಾಕಿ 90 ಲಕ್ಷ ರೂಪಾಯಿ ಎರಗಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಾಂಗ್ಲಾ ಮೂಲದ ಈ ಕಳ್ಳರನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ವಿಚಿತ್ರ ಎಂದರೆ ಈ ಖದೀಮರು ಸಿಕ್ಕಿಬಿದ್ದ ಮೇಲಷ್ಟೇ ಮನೆ ಮಾಲೀಕರಿಗೆ ತಮ್ಮ ಮನೆಯಲ್ಲಿ ಕಳುವಾಗಿರುವ ವಿಷಯ ತಿಳಿದಿದೆ.

    ಕಳೆದ ಮೇ 2 ರಂದು ಬಾಗಲುಗುಂಟೆಯ ಎಂಎಚ್‌ಆರ್‌ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಮನೆ ಮಾಲೀಕ ಈರಪ್ಪನವರು ಚಿಂತಾಮಣಿಯಲ್ಲಿರುವ ತಮ್ಮ ಮಗಳ ಮನೆಗೆ ಹೋಗಿದ್ದರು. ಮನೆಯ ರಿನೋವೇಷನ್ ಹಾಗೂ ಮೊಮ್ಮಗನನ ಎಂಬಿಬಿಎಸ್‌ ವಿದ್ಯಾಭ್ಯಾಸಕ್ಕೆ 90 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡಿದ್ದ ಅವರು ಅದನ್ನು ಬೀರುವಿನಲ್ಲಿಯೇ ಇಟ್ಟು ಹೋಗಿದ್ದರು.

    ಮನೆಗೆ ಬೀಗ ಹಾಕಿದ್ದನ್ನು ಕಂಡ ಬಾಂಗ್ಲಾದೇಶ ಮೂಲದ ಆರೋಪಿಗಳಾದ ಸಂಜು ಸಹಾ ಹಾಗೂ ಶುಭಂಕರ್ ಶಿಲ್ಲು ಎಂಬುವವರು ನಕಲಿ ಕೀಯಿಂದ ಮನೆಯನ್ನು ಪ್ರವೇಶಿಸಿದ್ದರು. ಲಾಕ್‌ಡೌನ್‌ ಇದ್ದ ಹಿನ್ನೆಲೆಯಲ್ಲಿ ಬಸ್ಸು ಇರದ ಕಾರಣ ಬೆಂಗಳೂರಿನಿಂದ ಕೆ.ಆರ್ ಪುರ ಮಾರ್ಗವಾಗಿ ಕೋಲ್ಕತಾಕ್ಕೆ ಬಾಡಿಗೆ ಕಾರಿನಲ್ಲಿ ಹೋಗಿದ್ದರು. 40 ಸಾವಿರ ರೂಪಾಯಿ ಮಾತು ಮಾಡಿಕೊಂಡು ಹೋಗಿದ್ದರು.

    ಬೇರೆ ರಾಜ್ಯವಾಗಿರುವ ಹಿನ್ನೆಲೆಯಲ್ಲಿ ಆಂಧ್ರದ ಪಲಂನೂರಿನಲ್ಲಿ ವಾಹನಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಕಾರಿನಲ್ಲಿದ್ದ ದುಡ್ಡು ಅವರ ಗಮನಕ್ಕೆ ಬಂದಿದೆ. ಸರಿಯಾಗಿ ವಿಚಾರಣೆ ಮಾಡಿದಾಗ ಕಕ್ಕಾಬಿಕ್ಕಿಯಾದ ಆರೋಪಿಗಳು ವಿಷಯವನ್ನು ತಿಳಿಸಿದ್ದಾರೆ. ಕೂಡಲೇ ಆಂಧ್ರಪ್ರದೇಶದ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳಿಂದ ಮನೆಯ ಗುರುತು ಪತ್ತೆ ಹಚ್ಚಲಾಗಿದೆ. ನಂತರ ಇದರ ಮಾಲೀಕ ಈರಪ್ಪನವರ ದೂರವಾಣಿ ಸಂಖ್ಯೆಯನ್ನೂ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಅಚ್ಚರಿಯ ವಿಷಯವೆಂದರೆ ಪೊಲೀಸರ ಕರೆ ಬರುವವರೆಗೂ ಈರಪ್ಪನವರಿಗೆ ತಮ್ಮ ಮನೆಯಲ್ಲಿ ಕಳುವಾಗಿರುವ ವಿಷಯ ತಿಳಿದೇ ಇರಲಿಲ್ಲ. ಕೂಡಲೇ ಪೊಲೀಸರ ಸಲಹೆ ಮೇರೆಗೆ ಅವರು ದೂರು ದಾಖಲು ಮಾಡಿದ್ದಾರೆ.

    ಅಲ್ಲಿಯವರೆಗೆ ಆರೋಪಿಗಳು 1600 ರೂಪಾಯಿಗಳನ್ನು ಮಾತ್ರ ಖರ್ಚು ಮಾಡಿದ್ದರು. 90 ಲಕ್ಷ ರೂಪಾಯಿ ಸಿಕ್ಕ ಖುಷಿಯಲ್ಲಿ ಬೇರೆ ಯಾವುದೇ ವಸ್ತುಗಳನ್ನೂ ಖದೀಮರು ಮುಟ್ಟಿರಲಿಲ್ಲ. ಅಂತೂ ಕೊನೆಗೆ ನಗದು ಈರಪ್ಪನವರ ಕೈಸೇರಿದೆ.

    ನಮಗೆ ಮಾತ್ರ ಪರೀಕ್ಷೆ ಶಿಕ್ಷೆ ಏಕೆ? ರದ್ದು ಮಾಡಿ, ಇಲ್ಲವೇ ಎಲ್ಲರಿಗೂ ಎಕ್ಸಾಂ ಮಾಡಿ… ಕೋರ್ಟ್‌ಗೆ ಹೋದ ವಿದ್ಯಾರ್ಥಿಗಳು

    ಅವಿವಾಹಿತ ಇಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಅವಕಾಶ: 189 ಹುದ್ದೆಗಳಿಗೆ ಆಹ್ವಾನ

    ಪಕ್ಕದಲ್ಲಿ ಮದುಮಗನಿರುವಾಗ್ಲೇ ಕ್ಯಾಮೆರಾದತ್ತ ಮದುಮಗಳ ಸಿಗ್ನಲ್‌ ಪಾಸ್‌- ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts