More

    ಬಾಂಗ್ಲಾ ದಾಟಿ ರೈಲಿನಲ್ಲಿ ಬೆಂಗಳೂರಿಗೆ ನಕಲಿ ನೋಟುಗಳ ಎಂಟ್ರಿ: ಕೆದಕಿದ್ದಷ್ಟೂ ಭಯಾನಕ ಸತ್ಯಗಳು ಬಹಿರಂಗ

    ಬೆಂಗಳೂರು: ಮಾದನಾಯಕನಹಳ್ಳಿ ನಕಲಿ ನೋಟು ಪ್ರಕರಣದಲ್ಲಿ ಬಂಧಿತ ಪಶ್ಚಿಮ ಬಂಗಾಳ ಮೂಲದ ಆರೋಪಿ ವಿರುದ್ಧ ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ) ಅಧಿಕಾರಿಗಳು ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿದ್ದಾರೆ.

    ಪಶ್ಚಿಮ ಬಂಗಾಳ ಮುರ್ಷಿದಾಬಾದ್ ಮೂಲದ ಎಸ್.ಕೆ. ಜಹಿರುದ್ದಿನ್ ಅಲಿಯಾಸ್ ಜಹೀರ್, 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಜೂನ್ 25ರಂದು ಎನ್‌ಐಎ ಅಧಿಕಾರಿಗಳು ಮಾಲ್ಡಾದಲ್ಲಿ ಜಹೀರ್‌ನ್ನು ಬಂಧಿಸಿದ್ದರು. ಕಿಂಗ್‌ಪಿನ್ ಪಶ್ಚಿಮ ಬಂಗಾಳ ಮೂಲದ ಶಬಿರುದ್ದೀನ್ (46) ಜತೆ ಸೇರಿಕೊಂಡು ಜಹೀರ್, ಬಾಂಗ್ಲಾಗಡಿ ದಾಟಿಸಿ ನಕಲಿ ನೋಟಗಳನ್ನು ರೈಲು ಮೂಲಕ ತಂದು ಮಾದನಾಯಕನಹಳ್ಳಿ ಮತ್ತು ಶ್ರೀರಾಂಪುರದ ಮನೆಯಲ್ಲಿ ಸಂಗ್ರಹಿಸಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆಗೆ ಸರಬರಾಜು ಮಾಡುತ್ತಿದ್ದರು.

    ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ 2018ರ ಆ.7 ರಂದು ಮಾದನಾಯಕನಹಳ್ಳಿಯ ಆಲೂರು ಹತ್ತಿರದ ಬಿಡಿಎ ಲೇಔಟ್ ಮನೆ ಮೇಲೆ ದಾಳಿ ನಡೆಸಿ ವಿಜಯಪುರದ ಎಂ.ಜಿ. ರಾಜು, ಬಾಗಲಕೋಟೆಯ ಮುಧೋಳದ ಗಂಗಾಧರ್ ಕೋಲ್ಕರ್ ಮತ್ತು ಪಶ್ಚಿಮ ಬಂಗಾಳದ ಮಹಮ್ಮದ್ ಸಜ್ಜದ್ ಆಲಿ ಎಂಬುವರನ್ನು ಬಂಧಿಸಿದ್ದರು.

    ಈ ವೇಳೆ 2 ಸಾವಿರ ರೂ. ಮುಖಬೆಲೆಯ 4.34 ಲಕ್ಷ ರೂ. ನಕಲಿ ನೋಟು ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ಈಗಾಗಲೇ 6 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದೀಗ ಜಹೀರ್ ವಿರುದ್ಧ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೊನೆಗೂ ಸಿಕ್ಕಿಬಿದ್ದ ಡಿಜೆಹಳ್ಳಿ ಗಲಭೆಕೋರ- ವಾಹನಗಳಿಗೆ ಬೆಂಕಿ ಹಚ್ಚಿ ಎಸ್ಕೇಪ್‌ ಆಗಿದ್ದ!

    ಮುಡಿ ಮಾಡಿಸಿಕೊಂಡು ಬರುವ ಭಕ್ತರಿಗಿಲ್ಲಾ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದರ್ಶನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts