More

    ನಮಗೆ ಮಾತ್ರ ಪರೀಕ್ಷೆ ಶಿಕ್ಷೆ ಏಕೆ? ರದ್ದು ಮಾಡಿ, ಇಲ್ಲವೇ ಎಲ್ಲರಿಗೂ ಎಕ್ಸಾಂ ಮಾಡಿ… ಕೋರ್ಟ್‌ಗೆ ಹೋದ ವಿದ್ಯಾರ್ಥಿಗಳು

    ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಈ ಬಾರಿ ರದ್ದು ಮಾಡಿರುವ ಬೆನ್ನಲ್ಲೇ ಕಳೆದ ವರ್ಷ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ಅಥವಾ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಈಗ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

    ಇದಕ್ಕೆ ಕಾರಣ, ಈ ವರ್ಷದ ಪರೀಕ್ಷೆಯನ್ನು ಸರ್ಕಾರ ರದ್ದು ಮಾಡಿದ್ದರೂ, ಕಳೆದ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಒಂದು ಅಥವಾ ಕೆಲವು ವಿಷಯಗಳಲ್ಲಿ ಅನುತ್ತೀರ್ಣಾದ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದು ಮಾಡುವುದು ಸರಿಯಲ್ಲ ಎಂದು ನಿರ್ಧರಿಸಿರುವ ಸರ್ಕಾರ, ಅವರಿಗೆ ಆ ವಿಷಯಗಳ ಪರೀಕ್ಷೆಯನ್ನು ಮಾಡಲು ನಿರ್ಧರಿಸಿರುವುದು ಈ ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿದೆ.

    ಈ ವರ್ಷ ಎಲ್ಲಾ ಮಕ್ಕಳು ತೇರ್ಗಡೆಯಾಗಿ ಮುಂದಿನ ತರಗತಿಗೆ ಹೋಗುತ್ತಿರುವಾಗ ತಾವು ಮಾತ್ರ ಪುನಃ ಪರೀಕ್ಷೆ ಬರೆದು ಫಲಿತಾಂಶವನ್ನು ಕಾಯುವಂತಾಗುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಈ ವಿದ್ಯಾರ್ಥಿಗಳ ಪ್ರಶ್ನೆ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

    ಎಸ್.ವಿ.ಸಿಂಗ್ರೇಗೌಡ ಎಂಬುವವರ ಪರವಾಗಿ ವಕೀಲರಾದ ಆರ್.ಪಿ.ಸೋಮಶೇಖರಯ್ಯ ಹಾಗೂ ಆರ್.ಎಲ್.ರಂಗ ಸ್ವಾಮ್ಯ ಅವರು ಅರ್ಜಿ ಸಲ್ಲಿಸಿದ್ದಾರೆ. ರಿಪೀಟರ್ಸ್‌ ವಿದ್ಯಾರ್ಥಿಗಳು ಸುಮಾರು 95 ಸಾವಿರ ಇದ್ದು, ಅವರಿಗೆ ಸರ್ಕಾರದ ಈ ದ್ವಂದ್ವ ನಿಲುವಿನಿಂದ ತೊಂದರೆಯಾಗಿದೆ. ರೆಗ್ಯುಲರ್‌ ವಿದ್ಯಾರ್ಥಿಗಳಿಗೆ ಒಂದು ನ್ಯಾಯ, ರಿಪೀಟರ್ಸ್‌ಗೆ ಇನ್ನೊಂದು ನ್ಯಾಯ ಏಕೆ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

    ಪರೀಕ್ಷೆ ರದ್ದು ಮಾಡಿದರೆ ಎಲ್ಲಾ ವಿದ್ಯಾರ್ಥಿಗಳಿಗೂ ರದ್ದು ಮಾಡಿ, ಇಲ್ಲದಿದ್ದರೆ ಎಲ್ಲರಿಗೂ ಪರೀಕ್ಷೆ ನಡೆಸಿ ಎಂದು ಅರ್ಜಿದಾರರು ಕೋರಿದ್ದಾರೆ.

    ಸಿಇಟಿ ಪರೀಕ್ಷೆಯ ದಿನಾಂಕ ಫಿಕ್ಸ್‌: ಈ ಅಂಕಗಳ ಆಧಾರದ ಮೇಲೆಯೇ ರ‍್ಯಾಂಕ್- ಎಕ್ಸಾಂ ವಿಶೇಷತೆಗಳೇನು?

    ದ್ವಿತೀಯ ಪಿಯುಸಿ ಪರೀಕ್ಷೆ ರದ್ದು- ಹಾಗಿದ್ದರೆ ಅಂಕ ಹೇಗೆ? ಇಲ್ಲಿದೆ ನೋಡಿ ಮಾಹಿತಿ…

    ಜುಲೈ 3ನೇ ವಾರ ಎಸ್‌ಎಸ್ಎಲ್‌ಸಿ ಪರೀಕ್ಷೆ: ಆದರೆ ಮುಂಚಿನಂತೆ ಅಲ್ಲ- ಏನೇನು ವಿಶೇಷತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts