More

    ಅಮ್ಮಾ… ನಾನು ನಿನ್ನ ಮಗ… ಕೆರೆಯಲ್ಲಿ ಮುಳುಗಿ ಸತ್ತವ… ಪುನರ್ಜನ್ಮ ಪಡೆದ ಬಾಲಕನ ನಂಬಲಸಾಧ್ಯ ಘಟನೆ…

    ನಾಗ್ಲಾ ಸಲೇಹಿ (ಉತ್ತರ ಪ್ರದೇಶ): ಈ ಘಟನೆ ಕೇಳಿದರೆ ಬಹುಶಃ ಹೆಚ್ಚಿನ ಮಂದಿ ನಂಬುವುದು ಅಸಾಧ್ಯವೇ. ಈ ಘಟನೆ ಸುಳ್ಳು ಸುದ್ದಿ ಎನ್ನಲೂ ಬಹುದು. ಆದರೆ ಈ ಸೃಷ್ಟಿಯಲ್ಲಿ ಅದೆಷ್ಟೋ ಘಟನೆಗಳು ಯಾರ ಊಹೆಗೂ ನಿಲುಕದ್ದು ನಡೆಯುತ್ತಲೇ ಇರುತ್ತದೆ. ಪುನರ್ಜನ್ಮ ಕೂಡ ಇಂಥದ್ದೇ ಒಂದು ನಂಬಿಕೆ. ಇದನ್ನು ನಂಬದವರೇ ಹಲವರು. ಆದರೆ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ನಡೆದಿರುವ ಘಟನೆ ಮಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿರುವುದು ಮಾತ್ರವಲ್ಲದೇ, ಇದೊಂದು ಸವಾಲಾಗಿಯೇ ಪರಿಣಮಿಸಿದೆ.

    ಅಷ್ಟಕ್ಕೂ ಔಚಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗ್ಲಾ ಸಲೇಹಿ ಗ್ರಾಮದಲ್ಲಿ ಸುಮಾರು ಎಂಟು ವರ್ಷದ ಬಾಲಕ ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷನಾಗಿದ್ದಾನೆ. ಸೀದಾ ಒಂದು ಮನೆಯೊಳಕ್ಕೆ ಹೋದ ಆತ ಅಮ್ಮಾ ಎಂದು ಕರೆದಿದ್ದಾನೆ. ಪ್ರಮೋದ್ ಕುಮಾರ್ ದಂಪತಿ ಹೊರಕ್ಕೆ ಬಂದಾಗ ಬಾಲಕ ಅಪ್ಪಾ, ಅಮ್ಮಾ… ಎಂದು ಕರೆದಿದ್ದಾನೆ.

    ಆ ಬಾಲಕ ಈ ರೀತಿ ಕರೆಯುತ್ತಿದ್ದುದನ್ನು ನೋಡಿದ ದಂಪತಿಗೆ ತೀರಾ ವಿಚಿತ್ರ ಎನಿಸಿದೆ. ನಂತರ ಬಾಲಕ, ನಾನು 2013ರಲ್ಲಿ 13ನೇ ವಯಸ್ಸಿಗೆ ಕಾಲುವೆಯಲ್ಲಿ ಬಿದ್ದು ಸತ್ತ ನಿಮ್ಮ ಮಗ ರೋಹಿತ್‌ ಎಂದಿದ್ದಾನೆ. ಆದರೆ ಈ ದಂಪತಿಗೆ ಮೊದಲು ಇದೇನೋ ವಿಚಿತ್ರವಾಗಿ ಕಂಡಿದೆ. ಯಾರೋ ಬೇಕಂತಲೇ ತಮ್ಮ ಸತ್ತುಹೋದ ಮಗನ ವಿಷಯವನ್ನು ಈ ಬಾಲಕನಿಗೆ ತಿಳಿಸಿ ತಮ್ಮನ್ನು ಯಾಮಾರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಿಸಿದೆ. ಆದರೂ ಆ ಅಮ್ಮನಿಗೆ ಮಾತ್ರ ಈ ಕಂದನನ್ನು ನೋಡಿ ಕರುಳು ಚುರುಕ್‌ ಎಂದಿದೆ. ಹೋಗಿ ಅಪ್ಪಿಕೊಂಡು ಬಿಟ್ಟಿದ್ದಾರೆ.

    ನಂತರ ಆತನ ಬಗ್ಗೆ ವಿಚಾರಿಸಿದಾಗ, ತಿಳಿದದ್ದು ಇಷ್ಟೇ. ಈಗ ಬಂದಿರುವ ಎಂಟು ವರ್ಷದ ಬಾಲಕನ ಹೆಸರು ಕರ್ಮವೀರ. ಆತ ರಾಮನರೇಶ್‌ ಎಂಬುವವರ ಮಗ. ಅವನು ಬೆಳೆಯುತ್ತಾ ಹೋದಂತೆಲ್ಲಾ ಏನೇನೋ ಬಡಬಡಿಸುತ್ತಿದ್ದ. ತನ್ನ ಮನೆ ಅಲ್ಲಿದೆ, ನನ್ನ ಅಪ್ಪ-ಅಮ್ಮ ಅವರು, ಕೆರೆಯಲ್ಲಿ ಮುಳುಗಿ ಅಚಾನಕ್‌ ಆಗಿ ಸತ್ತಿದ್ದೆ ಎಂತೆಲ್ಲಾ ಹೇಳಿದ್ದಾನೆ. ಇದನ್ನು ಕೇಳಿ ಆತನ ತಂದೆಗೆ ದಿಗಿಲಾಗಿದೆ. ಪರೀಕ್ಷೆ ಮಾಡಿಯೇ ಬಿಡೋಣ ಎಂದುಕೊಂಡು ರಾಮನರೇಶ್ ಅವರು ಬಾಲಕ ಹೇಳಿದ ಜಾಗಕ್ಕೆ ಕರೆದುಕೊಂಡು ಹೋಗಿದ್ದಾರೆ.

    ಇಷ್ಟು ಹೇಳುತ್ತಿದ್ದಂತೆಯೇ ಪ್ರಮೋದ್ ದಂಪತಿಗೆ ಅಚ್ಚರಿಯಾಗಿ ಹೋಗಿದೆ. ಬಾಲಕನ ಈಗಿನ ತಂದೆ ರಾಮನರೇಶ್‌ ಕೂಡ ಅಲ್ಲಿಗೆ ಬಂದಿದ್ದರು. ಈ ಬಾಲಕನ ಕಥೆ ಕೇಳಲು ಗ್ರಾಮಸ್ಥರು ಗುಂಪುಗೂಡಿ ಬೆರಗುಗಣ್ಣುಗಳಿಂದ ನೋಡಿದರು. ಇಷ್ಟೇ ಅಲ್ಲದೇ, ಬಾಲಕ ತಾನು ಹಿಂದಿನ ಜನ್ಮದಲ್ಲಿ ಕಲಿತ ಶಾಲೆ ಹಾಗೂ ಅಲ್ಲಿಯ ಮುಖ್ಯೋಪಾಧ್ಯಾಯರಾದ ಸುಭಾಷ್ ಯಾದವ್ ಅವರ ಮನೆಗೂ ಕರೆದುಕೊಂಡು ಹೋಗಿ ತಾನು ಹಿಂದೆ ಮಾಡುತ್ತಿದ್ದ ಎಲ್ಲಾ ವಿಷಯ ತಿಳಿಸಿದ್ದಾನೆ. ಸದ್ಯ ವಿಜ್ಞಾನಕ್ಕೆ ಇದೊಂದು ದೊಡ್ಡ ಸವಾಲಾಗಿದೆ.

    ನಿತ್ಯಾನಂದ ದಿಢೀರ್‌ ಪ್ರತ್ಯಕ್ಷ- ಶಾಕಿಂಗ್‌ ಹೇಳಿಕೆ ಕೊಟ್ಟು ಮಠಾಧಿಪತಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ ‘ಕೈಲಾಸವಾಸಿ’

    VIDEO: ನಾವು ಬದಲಾಗಿದ್ದೇವೆ ಎಂದರು… ನಂಬಿ ಕಚೇರಿಗೆ ಹೋದೆ.. ಆದರೆ… ಕರಾಳ ಅನುಭವ ಬಿಚ್ಚಿಟ್ಟ ಪತ್ರಕರ್ತೆ

    VIDEO: ತಾಲಿಬಾನಿಗಳಿಂದ ಹೆಣ್ಣುಮಕ್ಕಳ ಹರಾಜು! ಭಯಾನಕ ವಿಡಿಯೋ ಹಿಂದಿನ ಅಸಲಿಯತ್ತೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts