More

    ಸಾಮಾನ್ಯ ಶಿಕ್ಷಕನಿಗೆ 7 ಕೋಟಿ ಜಾಗತಿಕ ಅವಾರ್ಡ್​- ಪ್ರಶಸ್ತಿಯನ್ನೂ ಹಂಚಿಕೊಂಡು ಎಲ್ಲರ ಹುಬ್ಬೇರಿಸಿದ ಟೀಚರ್​

    ಲಂಡನ್: ಇಡೀ ಭಾರತವೇ ಹೆಮ್ಮೆ ಪಟ್ಟುಕೊಳ್ಳುವಂಥ ಸಾಧನೆ ಮಾಡಿದ್ದಾರೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿತೆವಡಿ ಗ್ರಾಮದ ಸಾಮಾನ್ಯ ಶಿಕ್ಷಕ.

    32 ವರ್ಷದ ರಂಜೀತ್ ಸಿಂಹ ದಿಸಾಳೆ ಎನ್ನುವವರು ಮಾಡಿರುವ ಈ ಸಾಧನೆಗೆ ಇದೀಗ ಜಾಗತಿಕ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಲಂಡನ್ನಿನ ವರ್ಕಿ ಫೌಂಡೇಶನ್ ನೀಡುವ ಪ್ರಶಸ್ತಿಗೆ ಶಿಕ್ಷಕ ರಂಜೀತ್​ ಆಯ್ಕೆಯಾಗಿದ್ದಾರೆ. ಇವರ ಸಾಧನೆಗಾಗಿ 7.3 ಕೋಟಿ ರೂ. ಮೊತ್ತದ ಪ್ರಶಸ್ತಿ ಲಭಿಸಿದೆ.

    ಬಾಲಕಿಯರ ಶಿಕ್ಷಣಕ್ಕೆ ಉತ್ತೇಜನ ಮತ್ತು ಭಾರತದಲ್ಲಿ ಕ್ವಿಕ್ ರೆಸ್ಪಾನ್ಸ್ (QR) ಕೋಡ್ ಪಠ್ಯಪುಸ್ತಕದ ಕ್ರಾಂತಿ ಮಾಡಿದ್ದಾಗಿ ಈ ಪ್ರಶಸ್ತಿ ಇವರ ಪಾಲಿಗೆ ಬಂದಿದೆ. ಅಂತಿಮ ಸುತ್ತಿನಲ್ಲಿದ್ದ 10 ಶಿಕ್ಷಕರ ಪೈಕಿ ರಂಜೀತ್​ ಆಯ್ಕೆಯಾಗಿದ್ದಾರೆ.

    ಜಾಗತಿಕವಾಗಿ ತಮ್ಮ ವೃತ್ತಿಯಲ್ಲಿ ಅಸಾಧಾರಣ ಸೇವೆ ಸಲ್ಲಿಸುವ ಶಿಕ್ಷಕರನ್ನ ಗುರುತಿಸಿ ಗೌರವಿಸುವ ದೃಷ್ಟಿಯಿಂದ 2014ರಲ್ಲಿ ಈ ಪ್ರಶಸ್ತಿಯನ್ನು ಆರಂಭಿಸಲಾಗಿದೆ. 140 ದೇಶಗಳಿಂದ 12 ಸಾವಿರ ಮಂದಿಯನ್ನು ಮೀರಿಸಿ, ರಂಜೀತ್​ ಆಯ್ಕೆಯಾಗಿದ್ದಾರೆ. ಆನ್​ಲೈನ್​ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ತಮ್ಮ ಹೆಸರನ್ನು ಘೋಷಿಸುತ್ತಿದ್ದಂತೆಯೇ ರಂಜೀತ್​ ಅವರು ಕುಣಿದು ಕುಪ್ಪಳಿಸಿದ್ದಾರೆ.

    ಪ್ರಶಸ್ತಿ ಸಿಕ್ಕ ಮೇಲೆ ಅದನ್ನು ತಾವೊಬ್ಬರೇ ಇಟ್ಟುಕೊಳ್ಳದೇ ಆ ಪ್ರಶಸ್ತಿಯ ಶೇ.50ರಷ್ಟನ್ನು ತಮ್ಮ ಜತೆ ಅಂತಿಮ ಸುತ್ತಿಗೆ ಬಂದಿದ್ದ ಶಿಕ್ಷಕರಿಗೆ ನೀಡುವ ನಿರ್ಧಾರ ಮಾಡಿರುವ  ರಂಜೀತ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಜಾಗತಿಕವಾಗಿ ಶಿಕ್ಷಣ ವ್ಯವಸ್ಥೆ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಕಷ್ಟದ ದಿನಗಳಲ್ಲಿ ಮಕ್ಕಳು ತಮ್ಮ ಹುಟ್ಟಿನಿಂದಲೇ ಪಡೆದ ಶಿಕ್ಷಣದ ಹಕ್ಕನ್ನು ಒದಗಿಸಲು ಶಿಕ್ಷಕರು ಶ್ರಮಪಟ್ಟಿದ್ದಾರೆ ಎಂದು ದಿಸಾಳೆ ಅಭಿಪ್ರಾಯಪಟ್ಟಿದ್ದಾರೆ.

    ಶಿಕ್ಷಕರ ಬದುಕು ಎನ್ನುವುದು ಸೀಮೆಸುಣ್ಣ ಮತ್ತು ಸವಾಲುಗಳ ಜತೆಯೇ ಇರುತ್ತದೆ. ಅನೇಕ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಜೀವನವನ್ನು ಬದಲಿಸಲು ಸಾಕಷ್ಟು ಶ್ರಮ ಪಡುತ್ತಾರೆ. ಅವರು ಯಾವಾಗಲೂ ಕೊಡುವುದು ಮತ್ತು ಹಂಚುವುದರಲ್ಲಿ ನಂಬಿಕೆ ಇಟ್ಟಿರುತ್ತಾರೆ. ಹೀಗಾಗಿ, ನನ್ನ ಜತೆ ಅಂತಿಮ ಸುತ್ತಿಗೆ ಬಂದಿದ್ದ ಶಿಕ್ಷಕರಿಗೆ ಅವರ ಅಸಾಧಾರಣ ಕೆಲಸ ಮುಂದುವರಿಸಲು, ಶೇ.50 ರಷ್ಟನ್ನು ಉಳಿದ 9 ಮಂದಿಗೆ ಸಮನಾಗಿ ಹಂಚಿಕೆ ಮಾಡಲು ನಿರ್ಧರಿಸಿರುವೆ. ನಾವೆಲ್ಲರೂ ಒಂದಾಗಿ ಈ ಜಗತ್ತನ್ನ ಬದಲಿಸುವ ನಂಬಿಕೆ ನನಗಿದೆ. ಏಕೆಂದರೆ, ಹಂಚುವುದೆಂದರೆ, ಬೆಳೆಯುವುದು” ಹೇಳಿದ್ದಾರೆ.

    ದಿಸಾಳೆ ಅವರ ಉದಾರತೆಯಿಂದಾಗಿ ಅಂತಿಮ ಸುತ್ತಿಗೆ ಬಂದಿದ್ದ ಎಲ್ಲ ಶಿಕ್ಷಕರು ತಲಾ 36 ಲಕ್ಷ ರೂಪಾಯಿ ಪಡೆಯಲಿದ್ದಾರೆ.

    ಹೈದರಾಬಾದ್​ ಪಾಲಿಕೆ ರಿಸಲ್ಟ್​: ಮಾಜಿ ಮೇಯರ್​ಗೆ ವಿಜಯದ ಮಾಲೆ- ಬಿಜೆಪಿಗೆ ಮುನ್ನಡೆ

    ದಂಡ ಕಟ್ವಿಲ್ವಾ? ಪಾರ್ಕಿಂಗ್​ ಜಾಗದಿಂದ್ಲೇ ನಿಮ್ ಗಾಡಿ ‘ಮಾಯ’ ಆಗ್ಬೋದು ಎಚ್ಚರ!

    ಕಿಟಕಿಯಲ್ಲಿ ವಧು, ಅಂಗಳದಲ್ಲಿ ವರ- ಮಧ್ಯೆ ಹಗ್ಗ! ಇದಕ್ಕೆ ಕಾರಣ ತುಂಬಾ ಇಂಟರೆಸ್ಟಿಂಗ್​

    ಮಾರ್ಚ್​ನಲ್ಲಿ ಚುನಾವಣೆ? 6 ವಾರಗಳಲ್ಲಿ ವೇಳಾಪಟ್ಟಿ ಹೊರಡಿಸಲು ಬಿಬಿಎಂಪಿಗೆ ಕೋರ್ಟ್​ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts