More

    VIDEO: ಮೈಕ್​ ಹಿಡಿದು ಜರ್ನಲಿಸ್ಟ್​, ಗನ್​ ಹಿಡಿದು ಟ್ರಾಫಿಕ್​ ಪೊಲೀಸ್​, ತಾಲಿಬಾನಿಗಳ ನಡುವೆ ಪತ್ರಕರ್ತೆ!

    ಕಾಬುಲ್​: ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡ ನಂತರ ತಾಲಿಬಾನ್​ಗಳ ಹುಚ್ಚಾಟ ಮುಂದುವರೆದಿದೆ. ಚಿತ್ರ ವಿಚಿತ್ರವಾಗಿ ವರ್ತಿಸುತ್ತಿರುವ ತಾಲಿಬಾನ್​ಗಳು ಇದೀಗ ತಮ್ಮ ಆಡಳಿತವನ್ನು ಶುರು ಮಾಡಿದ್ದಾರೆ.
    ಒಂದೆಡೆ ಗನ್​ ಹಿಡಿದುಕೊಂಡು ಟ್ರಾಫಿಕ್​ ಕಂಟ್ರೋಲ್​ ಮಾಡುತ್ತಾ ಟ್ರಾಫಿಕ್​ ಪೊಲೀಸ್​ ಆಗಿದ್ದರೆ, ಇನ್ನೊಂದೆಡೆ ಕೈಯಲ್ಲಿ ಮೈಕ್​ ಹಿಡಿದು ಜರ್ನಲಿಸ್ಟ್​ ಆಗಿರುವ ತಾಲಿಬಾನಿಗಳು, ಇಂದಿನ ಪರಿಸ್ಥಿತಿಯ ಬಗ್ಗೆ ಜನಸಾಮಾನ್ಯರಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

    ಇದೂ ಸಾಲದು ಎಂಬಂತೆ ಲೇಡಿ ಆ್ಯಂಕರ್​ಗಳು ಯಾವ ದೇಶದವರೇ ಆಗಿದ್ದರೂ ಅವರಿಗೆ ಹಿಜಾಬ್​ (ಬುರ್ಖಾ) ಕಡ್ಡಾಯವಾಗಿದೆ. ಇದಾಗಲೇ ಬುರ್ಖಾ ಹಾಕದ ಮಹಿಳೆಯನ್ನು ಶೂಟ್​ಔಟ್​ ಮಾಡಿರುವ ಉಗ್ರರು, ನೌಕರಿಗೆ ಹೋಗಲು ಮಹಿಳೆಯರಿಗೆ ನಿರ್ಬಂಧ ಹೇರಿದ್ದಾರೆ. ಆದರೆ ಕೆಲವು ಮಹಿಳಾ ಪತ್ರಕರ್ತರಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ.

    ಈ ಉಗ್ರರ ನಡುವೆ ಧೈರ್ಯದಿಂದ ಮುನ್ನುಗ್ಗಿ ವರದಿ ಮಾಡುತ್ತಿರುವ ಸಿಎನ್​ಎನ್​ ಇಂಗ್ಲಿಷ್​ ಚಾನೆಲ್​ನ ವರದಿಗಾರ್ತಿ ಕ್ಲಾರಿಸ್ಸಾ ವಾರ್ಡ್​ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ದೇಶದಲ್ಲಿ ಈಗ ಮಹಿಳಾ ವರದಿಗಾರರು ಆಗುವುದು ಹೇಗೆ ಎಂದು ಹೇಳಿಕೊಂಡಿರುವ ಕ್ಲಾರಿಸ್ಸಾ, ತಾವು ಈಗ ಹಿಜಾಬ್​ ಧರಿಸುತ್ತಿರುವುದಾಗಿ ಮಾತನಾಡಿದ್ದಾರೆ.

    ತಾಲಿಬಾನಿಗಳು ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್​ಗೆ ನುಗ್ಗುತ್ತಿರುವ ಸಮಯದಲ್ಲಿಯೇ ಹಿಜಾಬ್​ ಧರಿಸಿ ಅದನ್ನು ವರದಿ ಮಾಡಿರುವ ದಿಟ್ಟೆ ಇವರು. ಅಮೆರಿಕದ ರಾಯಭಾರ ಕಚೇರಿ ಎದುರು ನಿಂತು ತಾಲಿಬಾನಿಗಳು ವಿಜಯ ಘೋಷಿಸುತ್ತಿರುವ ಸಮಯದಲ್ಲಿ ಅಲ್ಲಿಯೇ ನಿಂತು ಇವರು ವರದಿ ಮಾಡಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ನಾನು ಹಿಜಾಬ್​ ಧರಿಸಿದ್ದೇನೆ. ಬೀದಿಗಳಲ್ಲಿ ಬಂದೂಕು ಹಿಡಿದಿರುವ ತಾಲಿಬಾನಿಗಳು ಬಿಟ್ಟರೆ ಮಹಿಳೆಯರು ಒಬ್ಬರೂ ಕಾಣುತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಈ ವರದಿಗಾರ್ತಿಯ ದಿಟ್ಟತನಕ್ಕೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು, ಈಕೆ ಸಾಮಾನ್ಯ ಹೆಣ್ಣಲ್ಲ ಎಂದು ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.

    ಇಲ್ಲಿದೆ ನೋಡಿ ತಾಲಿಬಾನಿಗಳ ಹುಚ್ಚಾಟ:

    ಉಗ್ರರ ನಡುವೆ ಪತ್ರಕರ್ತೆಯ ವಿಡಿಯೋ ಇಲ್ಲಿದೆ ನೋಡಿ:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts