More

    VIDEO: ಮಹಿಳಾ ರಾಜಕಾರಣಿ. ಪ್ರಜಾಪ್ರಭುತ್ವ ಶಬ್ದ ಕೇಳುತ್ತಲೇ ಗಹಗಹಿಸಿ ನಕ್ಕ ತಾಲಿಬಾನಿಗಳು!

    ಕಾಬುಲ್‌: ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಪಾಡು ಸದ್ಯ ಯಾವ ಸ್ಥಿತಿ ತಲುಪಿದೆ ಎನ್ನುವುದು ಎಲ್ಲರಿಗೂ ತಿಳಿದಿರುವಂಥ ವಿಷಯವೇ. ಇಂಥ ಕಠೋರ ಸ್ಥಿತಿಯಲ್ಲಿ ಸಿಎನ್​ಎನ್​ ಇಂಗ್ಲಿಷ್​ ಚಾನೆಲ್​ನ ವರದಿಗಾರ್ತಿ ಕ್ಲಾರಿಸ್ಸಾ ವಾರ್ಡ್​ ಈ ಉಗ್ರರ ಸಂದರ್ಶನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಅಮೆರಿಕನ್‌ ಮೂಲಕ ಕ್ಲಾರಿಸ್ಸಾ ಸದ್ಯ ಬುರ್ಖಾ ಧರಿಸಿಕೊಂಡು ಸಂದರ್ಶನ ಮಾಡುತ್ತಿದ್ದಾರೆ. ಇದೇ ವೇಳೆ ತಾಲಿಬಾನಿಗಳಿಗೆ ಅವರು ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ.
    ಮಹಿಳಾ ರಾಜಕಾರಣಿಗಳಿಗೆ ಮತ ಚಲಾಯಿಸುವ ಹಕ್ಕಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ತಾಲಿಬಾನಿಗಳು ಹೊಟ್ಟೆ ಹುಣ್ಣಾಗುವಂತೆ ನಕ್ಕ ಹಳೆಯ ವಿಡಿಯೋವೊಂದು ಇದೀಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ರೌಂಡ್ಸ್​ ಹಾಕುತ್ತಿದೆ.

    ಮಹಿಳಾ ಪತ್ರಕರ್ತೆ ಹಾಗೂ ತಾಲಿಬಾಲಿನಗಳ ನಡುವೆ ನಡೆದ ಸಂಭಾಷಣೆಯ ವಿಡಿಯೋ ಇದೀಗ ಮತ್ತೊಮ್ಮೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.
    ಪತ್ರಕರ್ತೆ ಕ್ಲಾರಿಸ್ಸಾ, ತಾಲಿಬಾನಿಗಳಿಗೆ ‘ಅಪ್ಘಾನಿಸ್ತಾನದ ಪ್ರಜಾಪ್ರಭುತ್ವದ ಅಡಿಯಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ನಿಮ್ಮ ಅನಿಸಿಕೆ ಏನು’ ಎಂದು ಪ್ರಶ್ನಿಸಿದ್ದಾರೆ. ಆಗ ತಾಲಿಬಾನಿಗಳು ಮಹಿಳೆಯರ ಹಕ್ಕುಗಳು ಇಸ್ಲಾಮಿಕ್ ಶರಿಯಾ ಕಾನೂನಿನ ಅಡಿಯಲ್ಲಿ ಬರಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

    ನಂತರ ಪತ್ರಕರ್ತೆ ಹಾಗಿದ್ದರೆ, ಪ್ರಜಾಪ್ರಭುತ್ವವನ್ನು ತಾಲಿಬಾನಿಗಳು ಒಪ್ಪಿಕೊಳ್ಳುತ್ತಾರೆಯೇ ಹಾಗೂ ಮಹಿಳಾ ರಾಜಕಾರಣಿಗಳಿಗೆ ಮತ ನೀಡಲು ಜನರಿಗೆ ಅವಕಾಶ ನೀಡುತ್ತೀರಾ ಎಂದು ಮುಂದಿನ ಸವಾಲು ಎಸೆದಾಗ ಅಲ್ಲಿದ್ದ ತಾಲಿಬಾನಿಗಳು ಗಹಗಹಿಸಿ ನಕ್ಕಿದ್ದಾರೆ. ಮಾತ್ರವಲ್ಲದೇ ವಿಡಿಯೋ ಶೂಟಿಂಗ್‌ ಮಾಡುತ್ತಿರುವವರ ಬಳಿ ಕೈ ಮಾಡಿ ಸ್ಟಾಪ್‌ ಮಾಡಿ, ಸ್ಟಾಪ್‌ ಮಾಡಿ ಎಂದು ಆವಾಜ್‌ ಹಾಕಿದ್ದಾರೆ. ಈ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್‌ ಆಗಿದೆ.
    ಮಹಿಳೆಯರಿಗೆ ಎಲ್ಲಾ ರೀತಿಯ ಹಕ್ಕು ನೀಡುತ್ತೇವೆ ಎಂದು ಭಾಷಣ ಮಾಡಿರುವ ತಾಲಿಬಾನಿಗಳ ಈ ವಿಡಿಯೋ ನೋಡೊದರೆ, ಅಪ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕಿನ ಸ್ಥಿತಿ ಏನಾಗಬಹುದು, ಅವರ ಭವಿಷ್ಯ ಯಾವ ರೀತಿ ಇರಬಹುದು ಎಂದು ಅಂದಾಜು ಮಾಡಬಹುದು.

    ವಿಡಿಯೋ ಇಲ್ಲಿದೆ ನೋಡಿ:

    VIDEO: ಮೈಕ್​ ಹಿಡಿದು ಜರ್ನಲಿಸ್ಟ್​, ಗನ್​ ಹಿಡಿದು ಟ್ರಾಫಿಕ್​ ಪೊಲೀಸ್​, ತಾಲಿಬಾನಿಗಳ ನಡುವೆ ಪತ್ರಕರ್ತೆ!

    VIDEO: ತಾಲಿಬಾನಿಗಳಿಂದ ಹೆಣ್ಣುಮಕ್ಕಳ ಹರಾಜು! ಭಯಾನಕ ವಿಡಿಯೋ ಹಿಂದಿನ ಅಸಲಿಯತ್ತೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts