More

    ‘ಹುಲಿ ಎರಡು ಹೆಜ್ಜೆ ಹಿಂದೆ ಹೋದರೆ ಅದು ಬೇಟೆಗಾಗಿ… ತಾಲಿಬಾನಿಗಳ ಜತೆ ಪಾಕಿಗಳಿಗೂ ಬುದ್ಧಿಕಲಿಸುವೆ’

    ಕಾಬುಲ್: ಇಡೀ ಅಫ್ಘನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ ಅಲ್ಲಿಯ ಅಧ್ಯಕ್ಷ ದೇಶ ಬಿಟ್ಟು ಪಲಾಯನ ಮಾಡಿದ್ದರೂ ಸಾಧ್ಯವಾದಷ್ಟು ಮಟ್ಟಿಗೆ ತಾಲಿಬಾನಿಗಳನ್ನು ಎದುರಿಸುವ ಪ್ರಯತ್ನ ಮಾಡಿದವರು ಇಲ್ಲಿಯ ಏಕೈಕ ಮಹಿಳಾ ಮೇಯರ್‌ ಎನಿಸಿಕೊಂಡಿರುವ ಜರೀಫಾ ಗಫ್ರಿ. ನೌಕರಿಯಲ್ಲಿ, ರಾಜಕೀಯದಲ್ಲಿ ಇರುವ ಮಹಿಳೆಯರನ್ನು ಸಿಕ್ಕಸಿಕ್ಕಲ್ಲಿ ಗುಂಡು ಹಾಕಿ ಕೊಲೆ ಮಾಡುತ್ತಿದ್ದ ತಾಲಿಬಾನಿಗಳಿಂದ ಕೊನೆಗೂ ಬಚಾವಾಗಿ ಸದ್ಯ ಜರ್ಮನಿಯಲ್ಲಿ ಆಶ್ರಯ ಪಡೆದಿದ್ದಾರೆ ಜರೀಫಾ.

    ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ತಾಲಿಬಾನಿಗಳು ನನ್ನನ್ನು ಹುಡುಕುತ್ತಾ ನಮ್ಮ ಮನೆಗೆ ಬಂದಿದ್ದರು. ಮನೆಯಲ್ಲಿದ್ದ ನನ್ನ ತಂದೆ ಮತ್ತು ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ ಹೋಗಿದ್ದಾರೆ. ವಿಷಯ ತಿಳಿಯುತ್ತಲೇ ಅಲ್ಲಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದೇನೆ. ಸದ್ಯ ಸುರಕ್ಷಿತವಾಗಿದ್ದೇನೆ ಎಂದಿದ್ದಾರೆ ಜರೀಫಾ.

    ಅಫ್ಘನ್‌ ಪ್ರಜೆಗಳ ಅದರಲ್ಲಿಯೂ ಮಹಿಳೆಯರ ಸದ್ಯದ ಸ್ಥಿತಿ ನೆನೆನಸಿಕೊಂಡರೆ ಭಯವಾಗುತ್ತದೆ. ಅವರ ಭವಿಷ್ಯದ ಬಗ್ಗೆ ಉತ್ತರವಿಲ್ಲ. ಅಫ್ಘಾನಿಸ್ತಾನದ ಜನರನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಅವರು ಯಾವುದಕ್ಕೂ ಹೆದರಲ್ಲ. ತಾಲಿಬಾನಿ ಉಗ್ರರು ಎಷ್ಟೇ ಜನರನ್ನು ಕೊಂದರೂ ನಮ್ಮ ಹೋರಾಟ ನಿಲ್ಲಲ್ಲ. ಕಳೆದ 20 ವರ್ಷಗಳಲ್ಲಿ ನಾವು ಪಡೆದುಕೊಂಡಿದ್ದು ಎಲ್ಲವೂ ನಮ್ಮೊಂದಿಗೆ ಇಲ್ಲ. ನನ್ನ ದೇಶದ ಮಣ್ಣು ಮಾತ್ರ ಬಳಿಯಲ್ಲಿದೆ ಎಂದಿದ್ದಾರೆ.

    ಇದೇ ವೇಳೆ ತಮಗೆ ಆಶ್ರಯ ನೀಡಿರುವ ಜರ್ಮನಿ ಸರ್ಕಾರಕ್ಕೂ ಧನ್ಯವಾದ ಸಲ್ಲಿಸಿರುವ ಅವರು, ಜರ್ಮನಿಯಲ್ಲಿರುವ ನಾನು ಇಲ್ಲಿರುವ ಶೇ.99 ಅಫ್ಘನ್ನರು ಮತ್ತು ಮಹಿಳೆಯರ ಧ್ವನಿಯಾಗಿರುತ್ತೇನೆ. ವಿಶ್ವದ ಮುಂದೆ ತಾಲಿಬಾನಿಗಳನ್ನು ಅನಾವರಣಗೊಳಿಸುವ ಕೆಲಸ ಮಾಡಲಿದ್ದೇನೆ. ಮಹಿಳೆಯರನ್ನು ಸದೃಢಗೊಳಿಸಿ ತಾಲಿಬಾನಿಗಳ ನಾಶಕ್ಕೆ ಮುನ್ನುಡಿ ಬರೆಯುವ ಕೆಲಸ ಮಾಡುವೆ. ಇಲ್ಲಿಂದಲೇ ನನ್ನ ಮುಂದಿನ ಕೆಲಸಗಳನ್ನು ಆರಂಭಿಸಲಿದು, ಅವರ ವಿರುದ್ಧ ಧ್ವನಿ ಎತ್ತುತ್ತೇನೆ ಎಂದು ಹೇಳಿದ್ದಾರೆ.

    ಈಗ ನಾವು ಹಿಂದಕ್ಕೆ ಸರಿದಿರಬಹುದು. ಬೇಟೆಗೂ ಮುನ್ನ ಹುಲಿ ಎರಡು ಹೆಜ್ಜೆ ಹಿಂದೆ ಹಾಕೋದು ಭಯದಿಂದಲ್ಲ. ತನ್ನ ಪೂರ್ಣ ಶಕ್ತಿಯನ್ನು ಪ್ರಯೋಗಿಸಲು ಎಂಬುದನ್ನ ಅಲ್ಲಿದ್ದವರು ಅರ್ಥ ಮಾಡಿಕೊಳ್ಳಬೇಕು. ಇಂದು ನಾವು ಎರಡು ಹೆಜ್ಜೆ ಹಿಂದೆ ಬಂದಿರೋದು ಇದೇ ಕಾರಣ ಎಂದು ಹೇಳಿದರು.

    ಇದೇ ವೇಳೆ ಪಾಕಿಸ್ತಾನದ ವಿರುದ್ಧ ಕಿಡಿಕಾರಿರುವ ಜರೀಫಾ, ಇಂದಿನ ಅಫ್ಘಾನಿಸ್ತಾನದ ಸ್ಥಿತಿಗೆ ಜನರು, ರಾಜಕೀಯ ಮುಖಂಡರು ಮತ್ತು ನಮ್ಮ ವಿಶ್ವವೇ ಕಾರಣ. ಸ್ಥಳೀಯ ಜನರು ಒಮ್ಮೆಯೂ ಒಗ್ಗಟ್ಟಾಗಿ ಉಗ್ರರ ವಿರುದ್ಧ ಧ್ವನಿ ಎತ್ತುವ ಪ್ರಯತ್ನ ಮಾಡಲಿಲ್ಲ. ಪಾಕಿಸ್ತಾನ ಏನು ಮಾಡಿದೆ ಅನ್ನೋ ವಿಷಯ ಅಫ್ಘಾನಿಸ್ತಾನದ ಪ್ರತಿ ಮಗುವಿಗೆ ಗೊತ್ತಿದೆ. ಪಾಕಿಸ್ತಾನದಂಥ ಉಗ್ರ ರಾಷ್ಟ್ರದಿಂದಲೇ ಇಂಥ ಗತಿ ಬಂದಿರುವುದು. ಅದಕ್ಕೂ  ಬುದ್ಧಿಕಲಿಸುವ ಕಾಲ ಬಂದಿದೆ. ಎಲ್ಲರನ್ನೂ ಒಗ್ಗಟ್ಟು ಮಾಡಿ ತಾಲಿಬಾನಿಗಳ ಜತೆ ಪಾಕಿಸ್ತಾನದವರಿಗೂ ಬುದ್ಧಿಕಲಿಸುವೆ ಎಂದರು.

    ಅಫ್ಘನ್​ ಸೈನಿಕರ ಶಸ್ತ್ರಾಸ್ತ್ರ ಪಾಕ್​ಗೆ ಪೂರೈಕೆ – ಭಾರತದ ಉಗ್ರರಿಗೆ ತಲುಪಿಸಲು ನಡೆದಿದೆ ತಾಲಿಬಾನಿಗಳ ಸಿದ್ಧತೆ!

    ಲಕ್ಷ ಲಕ್ಷ ಕೊಟ್ಟರೂ ತೀರಲಿಲ್ಲ ಹಣದ ದಾಹ: ಬೆಂಗಳೂರಿನ ಗೃಹಿಣಿ ಆತ್ಮಹತ್ಯೆ- ತಬ್ಬಲಿಯಾಯ್ತು 5 ವರ್ಷದ ಕಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts