More

    ಅಫ್ಘನ್​ ಸೈನಿಕರ ಶಸ್ತ್ರಾಸ್ತ್ರ ಪಾಕ್​ಗೆ ಪೂರೈಕೆ – ಭಾರತದ ಉಗ್ರರಿಗೆ ತಲುಪಿಸಲು ನಡೆದಿದೆ ತಾಲಿಬಾನಿಗಳ ಸಿದ್ಧತೆ!

    ನವದೆಹಲಿ: ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿದ್ದ ಸೈನಿಕರು ಸಂಪೂರ್ಣ ಶರಣಾಗಿದ್ದಾರೆ. ಇದಾಗಲೇ ತಾಲಿಬಾನಿಗಳು ಬಹುತೇಕ ಸೈನಿಕರನ್ನು ಕೊಂದು ಹಾಕಿದ್ದಾರೆ. ಇದೀಗ ಅವರಿಂದ ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಲ್ಲಿ ರಾಜಾರೋಷವಾಗಿ ಮೆರೆಯುತ್ತಿರುವ ಉಗ್ರರಿಗೆ ಸರಬರಾಜು ಮಾಡುತ್ತಿರುವುದಾಗಿ ಭಾರತದ ಉನ್ನತ ಮಿಲಿಟರಿ ಅಧಿಕಾರಿಗಳು ಹೇಳುತ್ತಿದ್ದಾರೆ.

    ಇದಾಗಲೇ ಈ ಬಗ್ಗೆ ಸೇನೆಗೆ ಮಾಹಿತಿ ಲಭ್ಯವಾಗಿದ್ದು, ಈ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಲ್ಲಿ ಐಎಸ್‌ಐ ಭಯೋತ್ಪಾದಕರು ಹಿಂಸಾಚಾರಕ್ಕೆ ಬಳಸಬಹುದು ಎಂದು ಅಂದಾಜಿಸಿದ್ದಾರೆ. ಇದರಿಂದಾಗಿ ಉಗ್ರರ ಚಟುವಟಿಕೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಭಾರತೀಯ ಸೇನಾಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಮಾತ್ರವಲ್ಲದೇ ಭಾರತದ ಒಳಗೆ ಅಡಗಿಕುಳಿತಿರುವ ಭಯೋತ್ಪಾದಕರಿಗೆ ಈ ಶಸ್ತ್ರಾಸ್ತ್ರಗಳನ್ನು ಕಳ್ಳಮಾರ್ಗದಲ್ಲಿ ತಲುಪಿಸುವ ಬಗ್ಗೆ ಸೇನೆಗೆ ಗುಪ್ತ ಮಾಹಿತಿ ಲಭ್ಯವಾಗಿದೆ. ಇದಾಗಲೇ ಯಾವ್ಯುದ್ಯಾವುದೋ ರೂಪದಲ್ಲಿ ಭಾರತದ ಒಳಗೆ ನುಸುಳಿರುವ ಈ ಉಗ್ರರು, ಇಲ್ಲಿ ಭಾರಿ ಸ್ಫೋಟದ ಸಂಚು ರೂಪಿಸುತ್ತಿರುವುದು ಹೊಸ ವಿಷಯವೇನಲ್ಲ. ಇವರ ಈ ಭಯೋತ್ಪಾದನಾ ಕೃತ್ಯಕ್ಕೆ ಅಫ್ಘಾನ್​ನ ಸೈನಿಕರ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಮುನ್ಸೂಚನೆ ದೊರೆತಿದೆ.

    ಈ ಬಗ್ಗೆ ಮಾತನಾಡಿರುವ ಮಿಲಿಟರಿ ಅಧಿಕಾರಿಗಳು, ಇಂಥವುಗಳಿಗೆ ನಾವು ಅವಕಾಶ ನೀಡುವುದಿಲ್ಲ. ಒಂದು ವೇಳೆ ಆ ಶಸ್ತ್ರಾಸ್ತ್ರ ಭಾರತದಲ್ಲಿ ನುಸುಳಿಸಲು ಪ್ರಯತ್ನಿಸಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭದ್ರತಾ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿವೆ ಎಂದಿದ್ದಾರೆ.

    ಅಷ್ಟಕ್ಕೂ ಅಫ್ಘಾನಿಸ್ತಾನದ ಸೈನಿಕರ ಬಳಿ ಅಮೆರಿಕದಿಂದ ಪೂರೈಕೆಯಾಗುತ್ತಿದ್ದ ಶಸ್ತ್ರಾಸ್ತ್ರಗಳು ಇದ್ದವು. ಕಳೆದ 20 ವರ್ಷಗಳಲ್ಲಿ ಆಫ್ಘನ್ ಸೈನಿಕರಿಗೆ ಅಮೆರಿವು ಎಂ-16 ಮತ್ತು ಎಂ-4 ದಾಳಿ ರೈಫಲ್‌ಗಳನ್ನು ಒಳಗೊಂಡಂತೆ ಆರೂವರೆ ಲಕ್ಷಕ್ಕೂ ಹೆಚ್ಚು ಸಣ್ಣ ಶಸ್ತ್ರಾಸ್ತ್ರಗಳನ್ನು ಪೂರೈಸಿವೆ. ಇವುಗಳೆಲ್ಲವೂ ಈಗ ತಾಲಿಬಾನಿಗಳ ವಶದಲ್ಲಿವೆ. ಇವುಗಳ ಜತೆಗೆ ಬುಲೆಟ್ ಪ್ರೂಫ್ ಉಪಕರಣಗಳು ಮತ್ತು ರಾತ್ರಿ ದೃಷ್ಟಿ ಕನ್ನಡಕಗಳನ್ನು ಸಹ ತಾಲಿಬಾನ್​ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿವೆ. ಇವಿಷ್ಟೇ ಅಲ್ಲದೇ ಅಮೆರಿಕದಿಂದ ಅಫ್ಘನ್​ ಸೈನಿಕರು ಪಡೆದುಕೊಂಡಿರುವ ಎರಡು ಸಾವಿರ ಸುಸಜ್ಜಿತ ಮಿಲಿಟರಿ ವಾಹನಗಳು 40 ಏರ್​ಕ್ರ್ಯಾಪ್ಟ್​, ದಾಳಿ ನಡೆಸುವ ಏರ್​ಕ್ರಾಫ್ಟ್​ ಸೇರಿದಂತೆ ಹಲವಾರು ಉಪಕರಣಗಳು ಕೂಡ ತಾಲಿಬಾನ್​ ವಶಕ್ಕೆ ಬಂದಿವೆ.

    ತಾಲಿಬಾನಿಗಳಿಗೆ ಹೆದರಿ ಅಫ್ಘಾನ್‌ನಿಂದ ಯಾವ್ಯಾವ ದೇಶಗಳಿಗೆ ಹೋದವರೆಷ್ಟು? ಇಲ್ಲಿದೆ ಅಂಕಿ ಅಂಶ

    ತಾಲಿಬಾನಿ ರಕ್ಕಸರು ಗಡಗಡ- 300 ಮಂದಿಯನ್ನು ಹೊಡೆದುರುಳಿಸಿದ ಪಂಜ್‌ಶೀರ್‌ ಯೋಧರು

    ಲಕ್ಷ ಲಕ್ಷ ಕೊಟ್ಟರೂ ತೀರಲಿಲ್ಲ ಹಣದ ದಾಹ: ಬೆಂಗಳೂರಿನ ಗೃಹಿಣಿ ಆತ್ಮಹತ್ಯೆ- ತಬ್ಬಲಿಯಾಯ್ತು 5 ವರ್ಷದ ಕಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts