More

    ಉಪ್ಪಿಟ್ಟಿನ ವಿರುದ್ಧ ಎಡವಟ್ಟು ಪ್ರಶ್ನೆ ಕೇಳಿ ಸಿಕ್ಕಿಹಾಕಿಕೊಂಡ ಸ್ವಿಗ್ಗಿ: ಉಪಮಾಪ್ರಿಯರಿಂದ ಬೈಕಾಟ್​!

    ನವದೆಹಲಿ: ಉಪ್ಪಿಟ್ಟು ಎಂದರೆ ಅನೇಕ ಮಂದಿ ಮೂಗು ಮುರಿಯೋದು ಇದ್ದೇ ಇದೆ. ಇದಕ್ಕೆ ಕಾಂಕ್ರೀಟ್​ ಎಂದು ಹಲವರು ಹೆಸರು ಇಟ್ಟಿದ್ದಾರೆ. ಅದ್ಯಾಕೋ ಗೊತ್ತಿಲ್ಲ ಒಟ್ಟಿನಲ್ಲಿ ಉಪ್ಪಿಟ್ಟಿನ ಬಗ್ಗೆ ತಾತ್ಸಾರ ಹೆಚ್ಚಿದೆ.

    ಅದೇ ಇನ್ನೊಂದೆಡೆ ಉಪ್ಪಿಟ್ಟನ್ನು ರಸವತ್ತಾಗಿ ಮಾಡಿದರೆ ಅದಕ್ಕಿಂತ ಟೇಸ್ಟ್​ ಇನ್ನೊಂದಿಲ್ಲ ಎನ್ನುವವರು ಇದ್ದಾರೆ. ಇದನ್ನು ಮಾಡುವ ವಿಧಾನವನ್ನು ಸರಿಯಾಗಿ ಪಾಲಿಸಿದರೆ ಉಪ್ಪಿಟ್ಟಿನ ಸ್ವಾದಿಷ್ಟವೇ ಬೇರೆ ಎನ್ನುವವರೂ ಇದ್ದಾರೆ. ಅದೇ ವೇಳೆ ಹೇಗೆ ಮಾಡಿದರೂ ಉಪ್ಟಿಟ್ಟು ತಮಗೆ ಅಚ್ಚುಮೆಚ್ಚು ಎನ್ನುವವರೂ ಸಿಗುತ್ತಾರೆ.

    ಯಾವುದೇ ಆಹಾರ ಸವಿಯಲು ಚೆನ್ನಾಗಿದೆಯೋ, ಇಲ್ಲವೋ, ಅದು ಇಷ್ಟವೋ, ಕಷ್ಟವೋ ಎಂದು ಎಲ್ಲರಿಗೂ ಅನ್ವಯ ಮಾಡಲು ಆಗುವುದಿಲ್ಲ. ಅದು ಅವರವರ ಟೇಸ್ಟ್​ ಅನ್ನು ಅವಲಂಬಿಸಿದೆ.

    ಆದರೆ ಸ್ವಿಗ್ಗಿ ಆನ್​ಲೈನ್​ ಫುಡ್​ ಡೆಲಿವರಿ ಮಾಡಿಕೊಂಡಿರುವ ಒಂದು ಎಡವಟ್ಟಿನಿಂದಾಗಿ ಇದೀಗ ಅದನ್ನು ಬಹಿಷ್ಕಾರ ಮಾಡುವ ಮಟ್ಟಿಗೆ ಅನೇಕ ಉಪ್ಪಿಟ್ಟು ಪ್ರಿಯರು ಬಂದಿದ್ದಾರೆ. ಜತೆಗೆ ಉಪ್ಪಿಟ್ಟಿನ ಪರವಾಗಿ ಆಂದೋಲನ ಶುರು ಮಾಡಿದ್ದಾರೆ.

    ಅಷ್ಟಕ್ಕೂ ಸ್ವಿಗ್ಗಿಗೂ, ಉಪ್ಪಿಟ್ಟಿಗೂ ಏನಪ್ಪಾ ಸಂಬಂಧ ಎಂದು ಕೇಳಬಹುದು. ಆಗಿದ್ದೇನೆಂದರೆ, ಸ್ವಿಗ್ಗಿ ಮಾಡಿರುವ ಟ್ವೀಟ್​. ಮೊನ್ನೆ 29ರಂದು ಸ್ವಿಗ್ಗಿ ಟ್ವೀಟ್ ಮಾಡಿ, ಅತ್ಯಂತ ಕೆಟ್ಟ ಉಪಾಹಾರ ಯಾವುದು, ಯಾಕೆ ಅದು ಉಪ್ಪಿಟ್ಟು ಆಗಿದೆ ಎಂದು ಪ್ರಶ್ನಿಸಿತ್ತು.

    ಇದರ ಅರ್ಥ ಉಪ್ಪಿಟ್ಟು ಎನ್ನುವುದು ಏತಕ್ಕೆ ಕೆಟ್ಟ ಆಹಾರ ಎಂದು ಅದು ಪ್ರಶ್ನಿಸಿತ್ತು. ಹೀಗೆ ಒಂದು ಆಹಾರವನ್ನು ಕೆಟ್ಟದ್ದು ಎಂದು ಹೇಳಲು ಸ್ವಿಗ್ಗಿಗೇನು ಅಧಿಕಾರವಿದೆ? ಯಾವ ಆಹಾರ ಕೆಟ್ಟದ್ದು, ಒಳ್ಳೆಯದು ಎಂದು ತೀರ್ಮಾನವನ್ನು ಅದು ಹೇಗೆ ತೆಗೆದುಕೊಳ್ಳುತ್ತದೆ ಎಂದು ಕಮೆಂಟಿಗರು ಹಿಗ್ಗಾಮುಗ್ಗ ಬೈಯುತ್ತಿದ್ದಾರೆ. ನಾನು ಉಪಮಾಪ್ರಿಯ, ನಾನು ಉಪ್ಪಿಟ್ಟುಪ್ರೇಮಿ ಎಂದೆಲ್ಲಾ ಹ್ಯಾಷ್​ಟ್ಯಾಗ್​ ಹಾಕುವ ಮೂಲಕ ಸ್ವಿಗ್ಗಿಯನ್ನು ಬಹಿಷ್ಕರಿಸಲೂ ಅನೇಕ ಮಂದಿ ನಿರ್ಧರಿಸಿದ್ದಾರೆ.

    ರೈಲಿನಿಂದ ಆಯತಪ್ಪಿ ಬಿದ್ದು ಸಾವಿನ ಬಾಯಲ್ಲಿದ್ದ ವೃದ್ಧನ ಜೀವ ಕಾಪಾಡಿದ ಪೊಲೀಸರು- ಸಿಸಿಟಿವಿಯಲ್ಲಿ ಸೆರೆ

    ಒಮ್ಮೊಮ್ಮೆ ಹೀಗೂ ಆಗುತ್ತೆ: 82 ವರ್ಷಗಳ ನಂತರ ಲೈಬ್ರರಿಗೆ ಮರಳಿತು ಪುಸ್ತಕ!

    ಕೆಜಿಎಫ್​-2 ಬಿಡುಗಡೆ ದಿನ ರಜಾ ಬೇಕು… ಅಭಿಮಾನಿಗಳಿಂದ ಪ್ರಧಾನಿ ಮೋದಿಗೆ ಹೀಗೊಂದು ಮನವಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts