More

    ಒಮ್ಮೊಮ್ಮೆ ಹೀಗೂ ಆಗುತ್ತೆ: 82 ವರ್ಷಗಳ ನಂತರ ಲೈಬ್ರರಿಗೆ ಮರಳಿತು ಪುಸ್ತಕ!

    ಕೆನಡಾ: ಗ್ರಂಥಾಲಯಗಳಿಂದ ಪುಸ್ತಕ ಕೊಂಡು ಓದುವವರ ಸಂಖ್ಯೆ ಇತ್ತೀಚೆಗೆ ತುಂಬಾ ಕಮ್ಮಿಯಾಗಿದೆ ಬಿಡಿ. ಯಾವ ಪುಸ್ತಕ ಬೇಕಾದರೂ ಮೊಬೈಲ್​ಫೋನ್​ನಲ್ಲಿಯೇ ಸಿಗುವ ಕಾಲವಿದು. ಆದ್ದರಿಂದ ಲೈಬ್ರರಿಗೆ ಹೋಗುವವರು ಅತ್ಯಂತ ವಿರಳವಾಗಿದ್ದಾರೆ.

    ಆದರೆ ಇದು ಇಂದು- ನಿನ್ನೆಯ ಘಟನೆಯಲ್ಲ. ಬದಲಿಗೆ 82 ವರ್ಷಗಳ ಹಿಂದಿನ ಘಟನೆ. ಲೈಬ್ರರಿಯಲ್ಲಿ ಚಂದಾದಾರರಾಗಿ ಒಂದಿಷ್ಟು ಪುಸ್ತಕ ತಂದಾಗ ಅದನ್ನು ಇಂತಿಷ್ಟು ದಿನಗಳಲ್ಲಿ ವಾಪಸ್​ ನೀಡಬೇಕು, ಇಲ್ಲದಿದ್ದರೆ ಇಷ್ಟು ದಂಡ ಕಟ್ಟಬೇಕು ಎಂದೆಲ್ಲಾ ನಿಯಮವಿದೆ.

    ಆದರೂ ಈ ನಿಯಮ ತಪ್ಪಿ ಎಷ್ಟೋ ಮಂದಿ ಅದನ್ನು ವಾಪಸೇ ಮಾಡುವುದಿಲ್ಲ. ಅಂಥದ್ದೇ ಒಂದು ಘಟನೆ ಆದರೆ ಬಲು ಅಪರೂಪ ಎನಿಸುವ ಘಟನೆ ಕೆನಡಾದಲ್ಲಿ ನಡೆದಿದೆ. 1929ರಲ್ಲಿ ಬಾಲಕಿಯೊಬ್ಬಳು ಕೆನಡಾದ ಲೈಬ್ರರಿಯೊಂದರಲ್ಲಿ ಒಂದು ಪುಸ್ತಕವನ್ನು ಕೊಂಡು ತಂದಿದ್ದಾಳೆ. ಅದರ ಹೆಸರು The Adventures of Dr. Dolittle. ಆದರೆ ವರ್ಷವಾಗಿ, ದಶಕವಾದರೂ ಅದನ್ನು ವಾಪಸ್​ ಮಾಡಲು ಮರೆತಿದ್ದಾಳೆ.

    ಆ ಬಾಲಕಿ, ಯುವತಿಯಾಗಿ, ಅಜ್ಜಿಯಾಗಿ ಮೃತಪಟ್ಟರೂ ಪುಸ್ತಕ ಮಾತ್ರ ಮನೆಯಲ್ಲಿಯೇ ಇತ್ತು. ಈಕೆಯಿದ್ದ ಮನೆಯನ್ನು ಜರ್ಡನ್ ಮುಸೈಸೇನ್ ಎನ್ನುವವರು ಖರೀದಿ ಮಾಡಿದ್ದರು. ಅಲ್ಲಿ ಕೆಲವೊಂದು ಪುಸ್ತಕಗಳು ಇದ್ದವು. ಅವುಗಳನ್ನು ಮುಸೈಸೇನ್​ ತಮ್ಮ ಬಳಿಯೇ ಇರಿಸಿಕೊಂಡಿದ್ದು. ಸ್ನಾನಗೃಹದಲ್ಲಿ ಫ್ಯಾನ್​ವೊಂದನ್ನ ಫಿಕ್ಸ್ ಮಾಡಬೇಕಿತ್ತು. ಮೇಲ್ಛಾವಣಿಯಲ್ಲಿ ರಂಧ್ರ ಮಾಡಬೇಕಾಗಿ ಬಂದಿತ್ತು. ಆಗ ನೋಡಿದಾಗ ಕೆಲವೊಂದು ಹಳೆಯ ಪುಸ್ತಕಗಳು ಅವರಿಗೆ ಸಿಕ್ಕಿದೆ.

    ಅದರಲ್ಲಿ ಒಂದು ಪುಸ್ತಕದ ಮೇಲೆ ಲೈಬ್ರರಿಯ ಸೀಲು ಇರುವುದನ್ನು ಅವರು ಕಂಡಿದ್ದಾರೆ. ಆಗ ನೋಡಿದಾಗ ಆ ಮನೆಯಲ್ಲಿದ್ದ ಬಾಲಕಿ ಅದನ್ನು 1929ರಲ್ಲಿ ತಂದಿರುವುದು ತಿಳಿದಿದೆ. ಮಾರ್ಚ್ ಹಾಗೂ ಮೇನಲ್ಲಿ ಈ ಪುಸ್ತಕದ ಹಿಂತಿರುಗುವ ಅವಧಿಯನ್ನು ನವೀಕರಿಸಲಾಗಿದೆ.

    ಈ ಬಗ್ಗೆ ಅಚ್ಚರಿಯಿಂದ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪುಸ್ತಕ ಸಹಿತ ಶೇರ್​ ಮಾಡಿದ್ದಾರೆ. ಇದೀಗ ಭಾರಿ ವೈರಲ್​ ಆಗಿದೆ, ಆ ಪುಸ್ತಕವನ್ನು ತಾವು ಅದೇ ಲೈಬ್ರರಿಗೆ ಹೋಗಿ ಮರಳಿಸಿ ಬಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ! 82 ವರ್ಷ ವಿಳಂಬ ಮಾಡಿದ್ದಕ್ಕೆ ಇದಕ್ಕೆ ಸುಮಾರು ಎರಡೂವರೆ ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕಾಗಿತ್ತು. ಆದರೆ ಅದನ್ನು ಮಾಫಿ ಮಾಡಿರುವುದಾಗಿ ಗ್ರಂಥಾಲಯ ಹೇಳಿದೆ.

    ರೈಲಿನಿಂದ ಆಯತಪ್ಪಿ ಬಿದ್ದು ಸಾವಿನ ಬಾಯಲ್ಲಿದ್ದ ವೃದ್ಧನ ಜೀವ ಕಾಪಾಡಿದ ಪೊಲೀಸರು- ಸಿಸಿಟಿವಿಯಲ್ಲಿ ಸೆರೆ

    ಕೆಜಿಎಫ್​-2 ಬಿಡುಗಡೆ ದಿನ ರಜಾ ಬೇಕು… ಅಭಿಮಾನಿಗಳಿಂದ ಪ್ರಧಾನಿ ಮೋದಿಗೆ ಹೀಗೊಂದು ಮನವಿ…

    ದೊಡ್ಡಪ್ಪನಿಗೆ ಮಕ್ಕಳಿಲ್ಲ- ಅವರನ್ನು ನೋಡಿಕೊಂಡ ನಮಗೆ ಆಸ್ತಿ ಸಿಗುತ್ತಾ ಅಥವಾ ಸಾಕುಮಗನಿಗೆ ಹೋಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts