More

    ಪ್ರತಿಯೊಬ್ಬರ ಜಾತಕ ಕಳ್ಳರ ಈ ಬರಹದಲ್ಲಿದೆ! ನಿಮ್ಮ ಮನೆಯಲ್ಲೂ ಕಂಡರೆ ಇರಲಿ ಎಚ್ಚರ…

    ತಿರುನೆಲ್ವೇಲಿ (ತಮಿಳುನಾಡು): ತಮಿಳುನಾಡಿನ ತಿರುನೆಲ್ವೇಲಿ ನಗರದ ಬಹುತೇಕ ಮನೆಗಳ ಗೇಟ್​ ಮೇಲೆ ಚಿತ್ರ-ವಿಚಿತ್ರ ರೀತಿಯ ನಿಗೂಢ ಬರಹಗಳು ಕಾಣಿಸಿಕೊಳ್ಳುತ್ತಿದ್ದು ನಗರದ ಜನರು ಬೆಚ್ಚಿ ಬಿದ್ದಿದ್ದಾರೆ.

    ವಿ.ಎಂ.ಚತ್ರಮ್ ಮತ್ತು ಅರೋಕ್ಯ ನಗರದಲ್ಲಿ ಎಣ್ಣೆಯಲ್ಲಿ ಕೆಲವು ಮಾರ್ಕ್​ ಮಾಡಿ ಹೋಗಲಾಗಿದೆ. ಈ ಪ್ರದೇಶದಲ್ಲಿ ಮನೆಗಳು ಕಡಿಮೆ ಇರುವ ಹಿನ್ನೆಲೆಯಲ್ಲಿ, ಬಹುತೇಕ ಎಲ್ಲ ಮನೆಗಳ ಮೇಲೆ ಬೇರೆ ಬೇರೆ ರೀತಿಯ ಗುರುತುಗಳನ್ನು ಮಾಡಿ ಹೋಗಲಾಗಿದೆ.

    ಕಳೆದ ವಾರದಿಂದ ಇದು ಶುರುವಾಗಿದ್ದು, ಪ್ರತಿದಿನವೂ ಗುರುತು ಮಾಡಿ ಹೋಗಲಾಗುತ್ತಿದೆ. ಈ ಗುರುತುಗಳೊಂದಿಗೆ ಜನರು ಪೊಲೀಸ್​ ಠಾಣೆಗೆ ದೌಡಾಯಿಸಿ, ಅದರ ರಹಸ್ಯ ಬಯಲು ಮಾಡುವಂತೆ ಕೋರತೊಡಗಿದ್ದಾರೆ.

    ಇದನ್ನೂ ಓದಿ: ರಕ್ಷಣಾ ತಂತ್ರಜ್ಞಾನದಲ್ಲಿ ಭಾರತದ ಮೈಲಿಗಲ್ಲು: ಆತ್ಮನಿರ್ಭರ್​ ಭಾರತದತ್ತ ದಿಟ್ಟ ಹೆಜ್ಜೆ

    ಈ ಎಲ್ಲಾ ಗುರುತುಗಳನ್ನು ಒಂದೆಡೆ ಕಲೆ ಹಾಕಿದ ನಂತರ ಪೊಲಿಸರಿಗೆ ಇದು ಕಳ್ಳರು ಕಳ್ಳತನ ಮಾಡಲು ಬರುವ ಮುನ್ನ ಆಯಾ ಮನೆಗಳ ಕುರಿತು ಇನ್ನೊಬ್ಬ ಕಳ್ಳರಿಗೆ ನೀಡುವ ಸೂಚನೆ ಎಂದು ಹೇಳಿದ್ದಾರೆ. ಅಂದರೆ, ಒಂದು ಮನೆಯ ಮೇಲೆ ತೀವ್ರವಾಗಿ ನಿಗಾ ಇಡುವ ಕಳ್ಳರು, ಆ ಮನೆಯವರು ಎಷ್ಟು ಸಿರಿವಂತರು, ಅವರ ಮನೆಯಲ್ಲಿ ಎಷ್ಟು ಚಿನ್ನಾಭರಣ ಇಟ್ಟಿರಬಹುದು, ಮನೆಯಲ್ಲಿ ಕಳ್ಳತನ ಮಾಡಿದರೆ ನಮಗೆ ಪ್ರಯೋಜನ ಇದೆಯೆ, ಇಲ್ಲವೇ ಎಂಬಿತ್ಯಾದಿಯಾಗಿ ಗುರುತು ಮಾಡಿ ಹೋಗುತ್ತಾರೆ.

    ಈ ಗುರುತನ್ನು ನೋಡಿ ಇನ್ನೊಂದು ಗುಂಪಿನವರು ಅ ಮನೆಯಲ್ಲಿ ಹೇಗೆ ಕಳ್ಳತನ ಮಾಡಬಹುದು ಎಂದು ಸಂಚು ರೂಪಿಸುತ್ತಾರೆ ಎಂದಿದ್ದಾರೆ.

    ಈ ಪ್ರದೇಶದಲ್ಲಿ ಜನಸಂಖ್ಯೆ ತೀರಾ ಕಡಿಮೆ ಇದೆ. ಇಲ್ಲಿರುವವರಲ್ಲಿ ಬಹುತೇಕ ಮಂದಿ ಸ್ಥಿತಿವಂತರಾಗಿದ್ದರೂ ಬೇರೆಬೇರೆ ಕಡೆಗಳಲ್ಲಿ ಉದ್ಯೋಗ ಮಾಡುತ್ತಿದ್ದು, ವಾರಾಂತ್ಯದಲ್ಲಿ ಮಾತ್ರ ತಮ್ಮ ಮನೆಗಳಿಗೆ ಭೇಟಿ ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ, ಇಂಥದ್ದೊಂದು ತಂತ್ರ ರೂಪಿಸಿದ್ದಾರೆ ಕಳ್ಳರು ಎಂದು ಪೊಲೀಸರು ಅಂದಾಜಿಸಿದ್ದಾರೆ.

    ಸದ್ಯ ಯಾರೂ ಭಯಪಡಬೇಡಿ ಎಂದಿರುವ ಪೊಲೀಸರು, ಈ ಸ್ಥಳದಲ್ಲಿ ಸಿಸಿಟಿವಿ ಅಳವಡಿಕೆಗೆ ಮುಂದಾಗಿದ್ದಾರೆ, ಜತೆಗೆ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲು ಚರ್ಚೆ ನಡೆದಿದೆ. ಬಹಳ ದಿನಗಳವರೆಗೆ ಮನೆಯಲ್ಲಿ ಇರದೇ ಹೋದರೆ, ಇಂಥದ್ದೇನಾದರೂ ಗುರುತುಗಳು ನಿಮ್ಮ ಮನೆಯ ಮುಂದೆ ಕಂಡರೆ ತಮಗೆ ತಿಳಿಸುವಂತೆ ಸ್ಥಳೀಯರಿಗೆ ಪೊಲೀಸರು ಸೂಚನೆ ನೀಡಿದ್ದಾರೆ.

    ಪ್ರತಿಯೊಬ್ಬರ ಜಾತಕ ಕಳ್ಳರ ಈ ಬರಹದಲ್ಲಿದೆ! ನಿಮ್ಮ ಮನೆಯಲ್ಲೂ ಕಂಡರೆ ಇರಲಿ ಎಚ್ಚರ...

    ಯಾವ್ಯಾವ ಗುರುತು ಏನನ್ನು ಸೂಚಿಸುತ್ತದೆ? ಇಲ್ಲಿದೆ ಮಾಹಿತಿ:

    * Alarmed house- ಅಪಾಯದ ಮುನ್ಸೂಚನೆ
    * occupants afraid- ಇಲ್ಲಿರುವವರು ಹೆದರುಪುಕ್ಕರು
    * previously burgled -ಈ ಮೊದಲೇ ಕಳ್ಳತನವಾಗಿದೆ
    * nothing worth stealing- ಮನೆಯಲ್ಲಿ ಕಳುವಾಗುವಂಥದ್ದು ಏನೂ ಇಲ್ಲ
    *good target- ಕದಿಯಲು ಅನುಕೂಲವಾಗಿದೆ
    * too risky-ಕದಿಯುವುದು ತುಂಬಾ ಅಪಾಯ
    * vulnerable occupant- ಮನೆಯಲ್ಲಿ ಇರುವವರು ದುರ್ಬಲರು * wealthy- ಸಿಕ್ಕಾಪಟ್ಟೆ ಸಿರಿವಂತರು

    ನಟಿ ಕಂಗನಾಗೆ ಕೇಂದ್ರದಿಂದ ‘ವೈ ಪ್ಲಸ್’​ ಭದ್ರತೆ: ಏನಿದರ ವಿಶೇಷತೆ?

    ಶಿಕ್ಷಕಿ ದೇಣಿಗೆ ಕೇಳಿದರೆ, ಅವರಿಂದಲೇ ₹48 ಲಕ್ಷ ದೋಚಿದ ಭೂಪ- ನಿಮಗೂ ಇದು ಪಾಠ!

    ಶಾಸಕ ನೇಗಿ ವಿರುದ್ಧ ರೇಪ್​ ಕೇಸ್​: ನನ್ನ ಮಗಳ ತಂದೆ ಇವರೇ ಎಂದ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts