More

    ರೈತರಿಗಾಗಿ ರಾಜ್ಯದಲ್ಲಿ ನೂರು ಕೋಲ್ಡ್ ಸ್ಟೋರೇಜ್ ಸ್ಥಾಪನೆ- ಹಾಪ್​ಕಾಮ್ಸ್​ ಮೇಲ್ದರ್ಜೆಗೆ: ಸಚಿವ ಮುನಿರತ್ನ

    ಬೆಂಗಳೂರು: ರೈತರು ಅನುಕೂಲಕ್ಕಾಗಿ ರಾಜ್ಯದ ವಿವಿಧೆಡೆ 100 ಕೋಲ್ಡ್ ಸ್ಟೋರೇಜ್ ತೆರೆಯಲು ಬಜೆಟ್‌ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಮುನಿರತ್ನ ತಿಳಿಸಿದ್ದಾರೆ.

    ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ( ಹಾಪ್‌ಕಾಮ್ಸ್), ಲಾಲ್‌ಬಾಗ್‌ನ ಡಾ.ಎಂ.ಎಚ್.ಮರೀಗೌಡ ರಸ್ತೆಯ ಹಾಪ್‌ಕಾಮ್ಸ್ ಪ್ರಧಾನ ಕಚೇರಿಯಲ್ಲಿ ಗುರುವಾರ ಏರ್ಪಡಿಸಿರುವ ದ್ರಾಕ್ಷಿ-ಕಲ್ಲಂಗಡಿ ಮಾರಾಟ ಮೇಳದಲ್ಲಿ ಮಾತನಾಡಿದರು.

    ರೈತರು ಬೆಳೆದಿರುವ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದಾಗ ದಾಸ್ತಾನು ಮಾಡಲು 10 ಟನ್ ಸಾಮರ್ಥ್ಯದ ಎರಡು ಕೋಲ್ಡ್ ಸ್ಟೋರೇಜ್ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೋಲ್ಡ್ ಸ್ಟೋರೇಜ್ ತೆರೆಯಲು ನಿರ್ಧರಿಸಲಾಗಿದೆ. ರೈತರ ಅಭ್ಯುದಯಕ್ಕೆ ಸರ್ಕಾರ ಬದ್ಧವಾಗಿದೆ. ಖಾಸಗಿಯವರ ಜತೆ ಪೈಪೋಟಿ ನೀಡುವ ಉದ್ದೇಶದಿಂದ ಹಾಪ್‌ಕಾಮ್ಸ್ ಮಳಿಗೆಗಳನ್ನು ಮೇಲ್ದರ್ಜೆಗೇರಿಸಲು ಗುರಿ ಹಾಕಿಕೊಳ್ಳಲಾಗಿದೆ ಎಂದರು.

    ವಿವಿಧ ತಳಿಯ ದ್ರಾಕ್ಷಿ ಮಾರುಕಟ್ಟೆಗೆ ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಭರ್ಜರಿ ಸಲು ಬಂದಿದ್ದು, ಉತ್ತಮ ಮಾರುಕಟ್ಟೆ ಕಲ್ಪಿಸಲು ಹಾಗೂ ರೈತರು ಬೆಳೆದಿರುವ ಉತ್ಪನ್ನಗಳು ನೇರವಾಗಿ ಗ್ರಾಹಕರಿಗೆ ಒದಗಿಸಲು ಈ ಮೇಳವನ್ನು ಆಯೋಜಿಸಲಾಗಿದೆ. 15 ತಳಿಯ ದ್ರಾಕ್ಷಿ ಹಾಗೂ ನಾಲ್ಕು ತಳಿಯ ಕಲ್ಲಂಗಡಿಗಳನ್ನು ಮೇಳದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

    ಋತುಮಾನ ಅಂತ್ಯದವರೆಗೆ ಮೇಳ: ನಗರದ ಎಲ್ಲ ಹಾಪ್‌ಕಾಮ್ಸ್ ಮಾರಾಟ ಮಳಿಗೆಗಳಲ್ಲಿ ಋತುಮಾನ ಅಂತ್ಯದವರೆಗೆ ದಾಕ್ಷಿ-ಕಲ್ಲಂಗಡಿ ಮಾರಾಟ ಮೇಳ ನಡೆಯಲಿದೆ. ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಹಣ್ಣುಗಳು ಲಭ್ಯವಿವೆ. ದ್ರಾಕ್ಷಿ ಕೃಷ್ಣ ಶರದ್, ಜಂಬೂ ಶರದ್, ದಿಲ್ ಕುಷ್, ಬೆಂಗಳೂರು ನೀಲಿ, ದ್ರಾಕ್ಷಿ ಟಿ.ಜಿ. ದ್ರಾಕ್ಷಿ ಕೃಷ್ಣ ಶರದ್ ಸೂಪರ್, ದ್ರಾಕ್ಷಿ ಸೂಪರ್ ಸೋನಾಕ ಮತ್ತು ಇಂಡಿಯನ್ ರೇಡ್ ಗ್ಲೋಬ್ ಸೇರಿ ವಿವಿಧ ತಳಿಯ ದ್ರಾಕ್ಷಿಗಳಿವೆ. ಕಿರಣ ಕಲ್ಲಂಗಡಿ ಮತ್ತು ನಾಮಧಾರಿ ಸೇರಿ 4 ತಳಿಯ ಕಲ್ಲಂಗಡಿಗಳು ಮೇಳದಲ್ಲಿವೆ.

    ಇನ್ಮುಂದೆ ವಾಹನಗಳಿಗೆ ಫಿಟ್​ನೆಸ್​ ಸರ್ಟಿಫಿಕೆಟ್​ ಕಡ್ಡಾಯ: ಕರಡು ಅಧಿಸೂಚನೆಯ ಫುಲ್​ ಡಿಟೇಲ್ಸ್​ ಇಲ್ಲಿದೆ…

    ಹದಿನಾರುವರೆ ಗಂಟೆಗಳಲ್ಲಿ 107 ಕಣ್ಣುಗಳ ಆಪರೇಷನ್- ಎಲ್ಲವೂ ಸಕ್ಸೆಸ್​… ದಾಖಲೆ ಬರೆದ ನೇತ್ರ ತಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts