More

    ಸೌರವ್​ ಗಂಗೂಲಿ ಡಿಸ್​ಚಾರ್ಜ್​: ಅಭಿಮಾನಿಗಳಿಗೆ ಕ್ರಿಕೆಟ್​ ತಾರೆ ಏನಂದ್ರು ಕೇಳಿ

    ಕೋಲ್ಕತ: ಕಳೆದ ಶನಿವಾರದಂದು ಲಘು ಹೃದಯಾಘಾತಕ್ಕೊಳಗಾಗಿ ಕೋಲ್ಕತದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್​ ಗಂಗೂಲಿ ಅವರ ಆರೋಗ್ಯ ಸುಧಾರಿಸಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಮಾಡಲಾಗಿದೆ.

    ಲಘು ಹೃದಯಾಘಾತಕ್ಕೊಳಗಾಗಿ ಆಯಂಜಿಯೊಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿರುವ ಗಂಗೂಲಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
    ಡಿಸ್​ಚಾರ್ಜ್​ ಆದನಂತರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನನಗೆ ಉತ್ತಮ ಚಿಕಿತ್ಸೆ ನೀಡಿದ ವುಡ್‌ಲ್ಯಾಂಡ್ ಆಸ್ಪತ್ರೆ ಹಾಗೂ ವೈದ್ಯರಿಗೆ ಧನ್ಯವಾದಗಳನ್ನು ಹೇಳಲಿಚ್ಛಿಸುತ್ತೇನೆ. ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಎಂದು ತಿಳಿಸಿದ್ದಾರೆ.

    48 ವರ್ಷದ ಸೌರವ್ ಗಂಗೂಲಿ ಅವರಿಗೆ ಜನವರಿ 2 ಶನಿವಾರದಂದು ವ್ಯಾಯಾಮ ನಡೆಸುತ್ತಿದ್ದ ವೇಳೆ ಲಘು ಹೃದಯಾಘಾತ ಕಾಣಿಸಿಕೊಂಡಿತ್ತು. ಅವರ ಹೃದಯದ ರಕ್ತಾನಾಳಗಳಲ್ಲಿ ಬ್ಲಾಕ್‌ಗಳು ಕಂಡುಬಂದ ಕಾರಣ ಆಯಂಜಿಯೊಪ್ಲಾಸ್ಟಿ ನಡೆಸಿ, ಒಂದು ಕಡೆ ಸ್ಟಂಟ್ ಆಳವಡಿಸಲಾಗಿತ್ತು.

    ನಿನ್ನೆಯಷ್ಟೇ ಇವರ ಆರೋಗ್ಯದ ಬಗ್ಗೆ ಮಾತನಾಡಿದ್ದ ಈ ಸಂದರ್ಭದಲ್ಲಿ ಮಾತನಾಡಿರುವ ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ, ಸೌರವ್​ ಗಂಗೂಲಿ ಅವರ ಹೃದಯ 20 ವರ್ಷದವರಿದ್ದಾಗ ಹೇಗಿದ್ದರೋ ಅಷ್ಟೇ ಆರೋಗ್ಯವಾಗಿದೆ. ಅವರು ಮ್ಯಾರಥಾನ್​ ಓಡಬಹುದು, ವಿಮಾನ ಹಾರಾಟ ನಡೆಸಬಹುದು ಎಂದಿದ್ದರು.

    ಈಗ ಲಘು ಹೃದಯಾಘಾತಕ್ಕೆ ಒಳಗಾಗಿದ್ದರಷ್ಟೇ. ಇದು ಸೌರವ್​ ಗಂಗೂಲಿಯವರ ಜೀವನಶೈಲಿ ಅಥವಾ ಜೀವಿತಾವಧಿಯ ಮೇಲೆ ಪರಿಣಾಮ ಬೀರುವುದಿಲ್ಲ. ಅವರು ಬೇರೆಯವರಂತೆ ಸಾಮಾನ್ಯ ಜೀವನವನ್ನು ನಡೆಸಲಿದ್ದಾರೆ. ಕ್ರಿಕೆಟ್​ಗೆ ಬೇಕಾದರೂ ಹಿಂದಿರುಗಬಹುದು. ಅವರು ಮನೆಗೆ ತಲುಪಿದ ಕೂಡಲೇ ಮನೆಯಿಂದ ಕೆಲಸ ಮಾಡಲು ಪ್ರಾರಂಭಿಸಬಹುದು ಎಂದು ದೇವಿ ಶೆಟ್ಟಿ ಹೇಳಿದ್ದರು.

    ಆಸ್ಪತ್ರೆಗೆ ದಾಖಲಾಗಿರುವ ಸೌರವ್​ ಗಂಗೂಲಿಯ ಹೃದಯ ಹೇಗಿದೆ? ಡಾ.ದೇವಿ ಶೆಟ್ಟಿ ಏನು ಹೇಳಿದರು ನೋಡಿ..

    ಪತ್ನಿಗೊಂದು, ಆಕೆಗೊಂದು ಮನೆ: ಹೆಂಡ್ತಿ ಕೈಲೇ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕೊಪ್ಪಳದ ಇಂಜಿನಿಯರ್​!

    ಓಡಿಹೋದವರ ಖಾಸಗಿ ಭಾಗ ಸುಟ್ಟು ಹತ್ಯೆ! ಪ್ರೇಮಿಗಳನ್ನು ಶಿಕ್ಷಿಸುವುದು ಗಂಭೀರ ಅಪರಾಧ ಎಂದ ಸುಪ್ರೀಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts