More

    ಏಷ್ಯಾಕಪ್ ರದ್ದು, ಗಂಗೂಲಿ ಘೋಷಣೆ

    ನವದೆಹಲಿ: ಸೆಪ್ಟೆಂಬರ್​ನಲ್ಲಿ ನಿಗದಿಯಾಗಿದ್ದ ಏಷ್ಯಾಕಪ್ ಟಿ20 ಟೂರ್ನಿ ರದ್ದುಗೊಂಡಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬುಧವಾರ ಘೋಷಿಸಿದ್ದಾರೆ. ‘ಸೆಪ್ಟೆಂಬರ್​ನಲ್ಲಿ ನಡೆಯಬೇಕಾಗಿದ್ದ ಏಷ್ಯಾಕಪ್ ರದ್ದುಗೊಂಡಿದೆ’ ಎಂದು ಗಂಗೂಲಿ ಇನ್​ಸ್ಟಾಗ್ರಾಂ ಲೈವ್ ಕಾರ್ಯಕ್ರಮ ‘ಸ್ಪೋರ್ಟ್ಸ್

    ತಕ್’ನಲ್ಲಿ ತಿಳಿಸಿದ್ದಾರೆ. ಅವರು ಬುಧವಾರ 48ನೇ ಜನ್ಮದಿನ ಆಚರಿಸಿಕೊಂಡರು. ಏಷ್ಯಾಕಪ್ ಟೂರ್ನಿಗೆ ಈ ಬಾರಿ ಪಾಕಿಸ್ತಾನ ಆತಿಥ್ಯ ವಹಿಸಬೇಕಾಗಿತ್ತು ಮತ್ತು ಅದು ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸುವ ಪ್ರಯತ್ನದಲ್ಲಿತ್ತು. ಪಾಕಿಸ್ತಾನದಿಂದ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಅಕ್ಟೋಬರ್-ನವೆಂಬರ್​ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಾಗಿರುವ ಟಿ20 ವಿಶ್ವಕಪ್ ರದ್ದುಗೊಳ್ಳುವ ನಿರೀಕ್ಷೆ ಹೆಚ್ಚಾಗಿರುವುದರಿಂದ ಟಿ20 ಏಷ್ಯಾಕಪ್ ಆಯೋಜನೆಗೊಳ್ಳುವ ಸಾಧ್ಯತೆಯೂ ಕಡಿಮೆಯಾಗಿತ್ತು.

    ಇದನ್ನೂ ಓದಿ: ಎಂಎಸ್​ ಧೋನಿ ಕ್ರಿಕೆಟ್​ನಿಂದ ಸದ್ಯಕ್ಕೆ ನಿವೃತ್ತಿಯಾಗಲ್ಲ

    ಅಹಮದಾಬಾದಲ್ಲಿ ಐಪಿಎಲ್?: ಈ ವರ್ಷ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿಯ ಭವಿಷ್ಯ ನಿರ್ಧಾರ ವಿಳಂಬವಾಗಿರುವುದರಿಂದ ಐಪಿಎಲ್ ಟೂರ್ನಿಯ ಬಗ್ಗೆಯೂ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿರುವ ಗಂಗೂಲಿ, ಐಪಿಎಲ್ ನಗರಗಳಾದ ಮುಂಬೈ, ದೆಹಲಿ, ಕೋಲ್ಕತ ಮತ್ತು ಚೆನ್ನೈನಲ್ಲಿ ಈಗ ಕೋವಿಡ್-19 ಹಾವಳಿ ಹೆಚ್ಚಾಗಿದೆ. ಈ ನಗರಗಳಲ್ಲಿ ಕ್ರಿಕೆಟ್ ನಡೆಸುತ್ತೇವೆ ಎಂದು ಈಗ ಹೇಳಲಾಗದು. ಅಹಮದಾಬಾದ್​ನಲ್ಲಿ ಟೂರ್ನಿ ಆಯೋಜಿಸುವ ಚಿಂತನೆ ಇದೆ. ಅಲ್ಲಿ ಸುಸಜ್ಜಿತ ಕ್ರೀಡಾಂಗಣ ಸಿದ್ಧವಾಗಿದೆ. ಆದರೆ ಈಗಿನ ಮಟ್ಟಿಗೆ ಏನನ್ನೂ ಹೇಳಲು ಸಾಧ್ಯವಾಗದು’ ಎಂದಿದ್ದಾರೆ.

    ಅಹಮದಾಬಾದ್​ನಲ್ಲೂ ಈಗ 3 ಸಾವಿರಕ್ಕಿಂತ ಅಧಿಕ ಸಕ್ರಿಯ ಕರೊನಾ ಪ್ರಕರಣಗಳಿವೆ. ‘ಐಪಿಎಲ್ ಟೂರ್ನಿ ಇಲ್ಲದೆ 2020 ವರ್ಷವನ್ನು ಮುಗಿಸಲು ನಾವು ಬಯಸುವುದಿಲ್ಲ. ಭಾರತದಲ್ಲಿ ಟೂರ್ನಿ ಆಯೋಜಿಸಲು 35ರಿಂದ 40 ದಿನ ಸಿಕ್ಕರೂ ಸಾಕಾಗುತ್ತದೆ’ ಎಂದು ಗಂಗೂಲಿ ಹೇಳಿದ್ದಾರೆ. ಗಂಗೂಲಿ, ವಿದೇಶದಲ್ಲಿ ಐಪಿಎಲ್ ನಡೆಸುವುದಾದರೆ ಫ್ರಾಂಚೈಸಿ ಮತ್ತು ಮಂಡಳಿಗೆ ಹೆಚ್ಚಿನ ಖರ್ಚು ಎದುರಾಗಲಿದೆ ಎಂದಿದ್ದಾರೆ.

    ರಾಜ್ಯದಲ್ಲಿ ಇಂದು ಹೊಸ ಕೋವಿಡ್​ 19 ಪ್ರಕರಣ 2062; ಮರಣ ಪ್ರಮಾಣ 54

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts