More

    ಕಿರಿಯರ ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ಎದುರು ವೀರೋಚಿತ ಸೋಲು ಕಂಡ ಭಾರತ

    ದುಬೈ: ಅಂತಿಮ ಹಂತದವರೆಗೂ ಗೆಲುವಿಗಾಗಿ ಹೋರಾಡಿದ ಭಾರತ ತಂಡ 19 ವಯೋಮಿತಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು 2 ವಿಕೆಟ್‌ಗಳಿಂದ ವೀರೋಚಿತ ಸೋಲು ಕಂಡಿತು. ಮತ್ತೊಂದೆಡೆ, ಸತತ 2ನೇ ಜಯ ದಾಖಲಿಸಿದ ಪಾಕಿಸ್ತಾನ ತಂಡ ಬಹುತೇಕ ಸೆಮಿಫೈನಲ್ ಹಂತವನ್ನು ಖಾತ್ರಿಪಡಿಸಿಕೊಂಡಿತು. ಮೊದಲ ಪಂದ್ಯದಲ್ಲಿ ಯುಎಇ ಎದುರು ಭರ್ಜರಿ ಜಯ ದಾಖಲಿಸಿದ್ದ ಭಾರತ ತಂಡ ಎರಡನೇ ಪಂದ್ಯದಲ್ಲಿ ಮುಗ್ಗರಿಸಿತು.

    ಐಸಿಸಿ ಅಕಾಡೆಮಿ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಜೀಶಾನ್ ಜಮೀರ್ (60ಕ್ಕೆ 5) ಮಾರಕ ದಾಳಿಗೆ ನಲುಗಿ 49 ಓವರ್‌ಗಳಲ್ಲಿ 237 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ರಾಜಾ ಬಾವಾ (56ಕ್ಕೆ 4) ಮಾರಕ ದಾಳಿ ನಡುವೆಯೂ ಮೊಹಮದ್ ಶೇಹಜಾದ್ (81) ಹಾಗೂ ಕಡೇ ಹಂತದಲ್ಲಿ ಅಹಮದ್ ಖಾನ್ (29*ರನ್, 19 ಎಸೆತ, 3 ಬೌಂಡರಿ, 1 ಸಿಕ್ಸರ್) ತೋರಿದ ಅದ್ಭುತ ನಿರ್ವಹಣೆಯಿಂದ ಪಾಕ್ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 240 ರನ್‌ಗಳಿಸಿ ಜಯದ ನಗೆ ಬೀರಿತು.

    ಭಾರತಕ್ಕೆ ಮುಂದಿನ ಎದುರಾಳಿ: ಅಫ್ಘಾನಿಸ್ತಾನ 
    ಯಾವಾಗ: ಸೋಮವಾರ 

    ಭಾರತ: 49 ಓವರ್‌ಗಳಲ್ಲಿ 237 (ಹರ್ನೂರ್ ಸಿಂಗ್ 46, ರಾಜ್ ಬಾವಾ 25, ಅರಾಧ್ಯ ಯಾದವ್ 50, ಕೌಶಾಲ್ ತಂಬೆ 32, ರಾಜ್ಯವರ್ಧನ್ ಹಂಗಾರ್ಗೆಕರ್ 33, ಜೀಶಾನ್ ಜಮೀರ್ 60ಕ್ಕೆ 5, ಅಸ್ವಾಯಿಸ್ ಅಲಿ 43ಕ್ಕೆ 2, ಕ್ವಾಸಿಮ್ ಅಕ್ರಮ್ 34ಕ್ಕೆ 1), ಪಾಕಿಸ್ತಾನ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 240 (ಮೊಹಮದ್ ಶೇಹಜಾದ್ 81, ಕ್ವಾಸಿಮ್ ಅಕ್ರಮ್ 22, ರಿಜ್ವಾನ್ ಮೆಹಮೂದ್ 29, ಅಹಮದ್ ಖಾನ್ 29, ರ್ಇಾನ್ ಖಾನ್ 32, ರಾಜ್ ಬಾವಾ 56ಕ್ಕೆ 4, ರಾಜ್ಯವರ್ಧನ್ ಹಂಗಾರ್ಗೆಕರ್ 49ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts