More

    ಮಾಜಿ ಕ್ರಿಕೆಟಿಗ ಗಂಗೂಲಿ ಬಯೋಪಿಕ್​ನಲ್ಲಿ ಹೃತಿಕ್​?; ಈ ಬಗ್ಗೆ ಸೌರವ್​ ಹೇಳುವುದೇನು?

    ಮುಂಬೈ: ಬಾಲಿವುಡ್​ನಲ್ಲಿ ಈಗಾಗಲೇ ಸಾಕಷ್ಟು ಬಯೋಪಿಕ್​ಗಳು ನಿರ್ಮಾಣವಾಗಿವೆ. ಅದರಲ್ಲೂ ಕ್ರೀಡೆಗೆ ಸಂಬಂಧಿಸಿದ ಸಿನಿಮಾಗಳ ದೊಡ್ಡ ಪಟ್ಟಿಯೇ ಇದೆ. ಇದೀಗ ಮತ್ತೊಂದು ಬಯೋಪಿಕ್​ ಬಾಲಿವುಡ್​ನಲ್ಲಿ ಸದ್ದು ಮಾಡುತ್ತಿದೆ.

    ಇದನ್ನೂ ಓದಿ: ಅಕ್ಷಯ್​ ಕುಮಾರ್ ‘ಲಕ್ಷ್ಮೀ ಬಾಂಬ್​’ ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್​

    ಹೌದು, ಸಿಕ್ಸರ್​ ಗಳ ಸರದಾರ, ಮಾಜಿ ಟೀಮ್​ ಇಂಡಿಯಾ ನಾಯಕ ಸೌರವ್​ ಗಂಗೂಲಿ ಕುರಿತಾದ ಬಯೋಪಿಕ್​ ಇದೀಗ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಬಾಲಿವುಡ್ ನಟಿ ಇಶಾ ಧೂಪಿಯಾ ನಡೆಸಿಕೊಡುವ ಚಾಟ್​ ಶೋದಲ್ಲಿ ಪಾಲ್ಗೊಂಡಿದ್ದ ಸೌರವ್​ ಗಂಗೂಲಿ ತಮ್ಮ ಬಯೋಪಿಕ್​ ಬಗ್ಗೆ ಮಾತನಾಡಿದ್ದಾರೆ.

    ಈಗಾಗಲೇ ಎಂ.ಎಸ್​. ಧೋನಿ; ಸಿ ಅನ್​ಟೋಲ್ಡ್ ಸ್ಟೋರಿ ಸಿನಿಮಾ ಬಾಲಿವುಡ್​ನಲ್ಲಿ ದೊಡ್ಡ ಇತಿಹಾಸ ನಿರ್ಮಿಸಿದೆ. ಅದರ ಬೆನ್ನಲ್ಲೆ ಸೌರವ್​ ಗಂಗೂಲಿ ಬಯೋಪಿಕ್​ ಮಾಡುವ ಬಗ್ಗೆಯೂ ಚರ್ಚೆಗಳು ನಡೆದಿದ್ದವು. ಆದರೆ, ಯಾವುದೂ ಅಧಿಕೃತವಾಗಿರಲಿಲ್ಲ. ಈಗ ಆ ಬಗ್ಗೆ ಸ್ವತಃ ಸೌರವ್​ ಮಾತನಾಡಿದ್ದಾರೆ.

    ಇದನ್ನೂ ಓದಿ: ಯುವ ಗರ್ಜನೆ: ದೊಡ್ಡಪ್ಪ-ಚಿಕ್ಕಪ್ಪನಿಂದ ಟ್ರೇಲರ್ ಲಾಂಚ್…

    ‘ನಾನು ಇಲ್ಲಿಯವರೆಗೂ ಬಯೋಪಿಕ್​ ಬಗ್ಗೆ ಮಾತನಾಡಿಲ್ಲ. ಆ ಬಗ್ಗೆ  ವಿಚಾರಿಸಿಯೂ ಇಲ್ಲ. ಒಂದು ವೇಳೆ ಮಾಡುವುದೇ ನಿಜವಾದರೆ, ಹೃತಿಕ್​ ರೋಷನ್​ ಸೂಕ್ತ. ಆದರೆ, ಮೊದಲು ಅವರು ನನ್ನ ರೀತಿಯ ಬಾಡಿ ಬದಲಾಯಿಸಿಕೊಳ್ಳಬೇಕು. ಹೃತಿಕ್​ ಫಿಸಕ್​ ನೋಡಿ ಬಹುತೇಕರು ಅಚ್ಚರಿಗೊಳಪಟ್ಟಿದ್ದಾರೆ. ಅವರಂತೆ ಶರೀರ ಹೊಂದಬೇಕೆಂದುಕೊಂಡವರಿದ್ದಾರೆ’ ಎಂದು ನಗೆ ಚಟಾಕಿ ಹಾರಿಸಿದ್ದಾರೆ. (ಏಜೆನ್ಸೀಸ್​)

    ಚಂದನ್​ ಶೆಟ್ಟಿ ಹುಟ್ಟುಹಬ್ಬಕ್ಕೆ ಸ್ನೇಹಿತ ದಿವಾಕರ್​ ನೀಡಿದ್ರು ವಿಶೇಷ ಉಡುಗೊರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts